ಲಿಮ್ಕಾ ರೆಕಾರ್ಡಿಗೆ ಸಚಿನ್ ತೆಂಡೂಲ್ಕರ್ ಆತ್ಮಚರಿತ್ರೆ ಸೇರ್ಪಡೆ

Posted By:
Subscribe to Oneindia Kannada

ಬೆಂಗಳೂರು, ಫೆ. 18: ಕ್ರಿಕೆಟ್ ಲೋಕದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ' ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡಿದೆ.

ಬಹುನಿರೀಕ್ಷಿತ ಪುಸ್ತಕ ನವೆಂಬರ್ 06, 2014 ರಂದು ಲೋಕಾರ್ಪಣೆ ಮಾಡಲಾಯಿತು. ಸಚಿನ್ ಅವರು ಮೊದಲ ಪ್ರತಿಯನ್ನು ತಮ್ಮ ತಾಯಿಗೆ ನೀಡಿ, ತಮ್ಮ ಆತ್ಮಕಥೆಯನ್ನು ಅಭಿಮಾನಿಗಳಿಗೆ ಅರ್ಪಿಸಿದ್ದರು. [ಸಚಿನ್ ನಿವೃತ್ತಿ ಬಗ್ಗೆ ಟ್ವೀಟ್ಸ್ ಮಹಾಪೂರ]

Tendulkar’s autobiography enters Limca Book of Records

28 ಅಧ್ಯಾಯಗಳುಳ್ಳ 496 ಪುಟಗಳ 899 ರು ಬೆಲೆಯ 'ಪ್ಲೇಯಿಂಗ್ ಇಟ್ ಮೈ ವೇ' ಪುಸ್ತಕ ಬಿಡುಗಡೆಗೂ ಮುನ್ನ ಭಾರಿ ಚರ್ಚೆಗೊಳಲ್ಪಟ್ಟಿತ್ತು. ಇಲ್ಲಿ ತನಕ ಸುಮಾರು 13.51 ಕೋಟಿ ರು ಗೂ ಅಧಿಕ ಗಳಿಕೆ ಮಾಡಿದೆ. [ಗ್ರೆಗ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಎಂದ ಸಚಿನ್]

ಕಾದಂಬರಿ ಹಾಗೂ ಆತ್ಮಕಥನ ವಿಭಾಗಗಳೆರಡರಲ್ಲೂ ಅತಿ ಹೆಚ್ಚು ಮಾರಾಟವಾಗಿರುವ ದಾಖಲೆಯನ್ನು ಸಾಧಿಸಿದೆ. Hachette ಇಂಡಿಯಾ ಪ್ರಕಟಣೆಯ ಈ ಆತ್ಮಕಥೆಗೆ ಸುಮಾರು 1,50,289 ಚಂದಾದಾರರು ಸಿಕ್ಕಿದ್ದಾರೆ ಎಂದು ಪ್ರಕಾಶಕರು ಹೇಳಿದ್ದಾರೆ.

Tendulkar’s autobiography

ಡಾಬನ್ ಬ್ರೌನ್ಸ್ ಅವರ ಇನ್ ಫರ್ನೊ, ವಾಲ್ಟರ್ ಇಸಾಸ್ಕನ್ಸ್ ಸ್ಟೀವ್ ಜಾಬ್ಸ್ ಹಾಗೂ ಜೆಕೆ ರೋಲಿಂಗ್ಸ್ ಕ್ಯಾಶುವಲ್ ವೇಕೆನ್ಸಿ ದಾಖಲೆಯನ್ನು ಪ್ಲೇಯಿಂಗ್ ಇಟ್ ಮೈ ವೇ ಮುರಿದಿದೆ. ಬೊರಿಯಾ ಮಂಜುದಾರ್ ಅವರು ಸಚಿನ್ ಅವರ ಆತ್ಮಕಥೆಯ ಸಹ ಲೇಖಕರಾಗಿದ್ದಾರೆ.

ಕೋಚ್ ಗ್ರೆಗ್ ಚಾಪೆಲ್ ಬಗ್ಗೆ, ವೆಸ್ಟ್ ಇಂಡೀಸ್ ಪ್ರವಾಸದ ನಂತರ ನಿವೃತ್ತಿ ಬಗ್ಗೆ, ಸಹ ಆಟಗಾರರ ಬಗ್ಗೆ, ಮಂಕಿಗೇಟ್ ಪ್ರಕರಣ, ಕ್ರಿಕೆಟ್ ಬಗ್ಗೆ ಪತ್ನಿ ಅಂಜಲಿಗಿದ್ದ ಅಭಿಪ್ರಾಯದ ಬಗ್ಗೆ ಹೀಗೆ ನಾನಾ ವಿಷಯಗಳ ಬಗ್ಗೆ ಸಚಿನ್ ಅವರು ಬರೆದ ಅಧ್ಯಾಯಗಳು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. [ಪ್ಲೇಯಿಂಗ್ ಇಟ್ ಮೈ ವೇ ಪುಸ್ತಕ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ]

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಆಡಿದ ನಂತರ ನವೆಂಬರ್ 17ರಂದು ಸಚಿನ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ತಮ್ಮ 200ನೇ ಟೆಸ್ಟ್ ಪಂದ್ಯವಾಡಿದ ಸಚಿನ್ ಅವರಿಗೆ ಭಾವಪೂರ್ಣ ಗುಡ್ ಬೈ ಹೇಳಲಾಗಿತ್ತು. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
He might have bid adieu to cricket but Sachin Tendulkar continues to make records with the his autobiography ‘Playing It My Way’ entering the Limca Book of Records for being the best-selling adult hardback across both fiction and non-fiction categories.
Please Wait while comments are loading...