ಕೊಹ್ಲಿ ಕುರಿತ ಪುಸ್ತಕದಲ್ಲಿರುವ ಸ್ಕೋಡಾ ಕಾರು ಕಥೆ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 18: ವಿಶ್ವದ ಅಗ್ರಗಣ್ಯ ಬ್ಯಾಟ್ಸ್ ಮನ್, ನಾಯಕ ವಿರಾಟ್ ಕೊಹ್ಲಿ ಅವರ ಸಾಧನೆ ಹಿಂದಿನ ಶಕ್ತಿಯಾದ ರಾಜ್ ಕುಮಾರ್ ಶರ್ಮ ಅವರು ಶಿಕ್ಷಕರ ದಿನಾಚರಣೆಯಂದು ಭಾವುಕರಾಗಿದ್ದೇಕೆ? ಗುರು ರಾಜ್ ಕುಮಾರ್ ಅವರಿಗೆ ಶಿಷ್ಯ ಕೊಹ್ಲಿ ನೀಡಿದ ಗಿಫ್ಟ್ ಏನು? ಏನಿದು ಸ್ಕೋಡಾ ಕಾರಿನ ಕಥೆ? ಮುಂದೆ ಓದಿ...

2014ರ ಶಿಕ್ಷಕರ ದಿನಾಚರಣೆಯನ್ನು ರಾಜಕುಮಾರ್ ಶರ್ಮ ಅವರು ಎಂದಿಗೂ ಮರೆಯುವುದಿಲ್ಲ ಎಂದು ಕೊಹ್ಲಿ ಹಾಗೂ ರಾಜಕುಮಾರ್ ಶರ್ಮ ಅವರ ನಡುವಿನ ಸಂಬಂಧದ ಬಗ್ಗೆ ಹಿರಿಯ ಕ್ರೀಡಾ ಪತ್ರಕರ್ತ ವಿಜಯ್ ಲೋಕಪಾಲಿ ಅವರು ತಮ್ಮ ಪುಸ್ತಕ' Driven' ನಲ್ಲಿ ಸೊಗಸಾಗಿ ವಿವರಿಸಿದ್ದಾರೆ.

Teachers Day surprise: When Virat Kohli gifted his coach a Skoda Rapid car

ಐಷಾರಾಮಿ ಉಡುಗೊರೆ: ಶಿಕ್ಷಕರ ದಿನಾಚರಣೆ ದಿನದಂದು ವಿರಾಟ್ ಕೊಹ್ಲಿ ಅವರ ಸೋದರ ವಿಕಾಸ್ ಅವರು ಗುರು ರಾಜಕುಮಾರ್ ಮನೆಗೆ ಬೆಳ್ಳಂಬೆಳ್ಳಗೆ ಹೋಗುತ್ತಾರೆ.

ರಾಜ್ ಕುಮಾರ್ ಅವರ ಮುಂದೆ ನಿಂತು ಕೊಹ್ಲಿಗೆ ಕರೆ ಮಾಡುತ್ತಾರೆ. Happy teacher's Day Sir,' ಎಂದು ಕೋಹ್ಲಿ ಆ ಕಡೆಯಿಂದ ಹೇಳುತ್ತಿದ್ದಂತೆ ಈ ಕಡೆಯಿಂದ ಕೊಹ್ಲಿ ಅವರ ಸೋದರ ವಿಕಾಸ್ ಅವರು ಗುರು ರಾಜಕುಮಾರ್ ಕೈಗೆ ಕಾರು ಕೀ ಗಳನ್ನು ನೀಡುತ್ತಾರೆ.

ನಂತರ ರಾಜಕುಮಾರ್ ಅವರನ್ನು ಮನೆಯಿಂದ ಹೊರಕ್ಕೆ ಕರೆದುಕೊಂಡು ಬಂದು ಮನೆ ಮುಂದೆ ನಿಲ್ಲಿಸಿದ್ದ ಹೊಚ್ಚ ಹೊಸ ಸ್ಕೋಡಾ Rapid ಕಾರನ್ನು ತೋರಿಸುತ್ತಾರೆ. ಇಡೀ ಘಟನೆ ಭಾವನಾತ್ಮಕವಾಗಿ ಇವರಿಬ್ಬರ ಜೀವನದಲ್ಲಿ ಹಾಸುಹೊಕ್ಕಿದೆ. ಕೊಹ್ಲಿ ತಮ್ಮ ಜೀವನದಲ್ಲಿ ಗುರುವಿನ ಮಹತ್ವವನ್ನು ಎಂದಿಗೂ ಮರೆತ್ತಿಲ್ಲ ಎಂಬುದು ಈ ಘಟನೆ ತೋರಿಸುತ್ತದೆ ಎಂದು ಪತ್ರಕರ್ತ ವಿಜಯ್ ವಿವರಿಸಿ್ದಾರೆ.(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is well documented fact that Raj Kumar Sharma's contribution in Virat Kohli's progression from a precocious talent to a world-class batsman has been immense.
Please Wait while comments are loading...