ಟೀಂ ಇಂಡಿಯಾ ಕೋಚ್ ಕುಂಬ್ಳೆ ಕನ್ನಡದಲ್ಲಿ ಉತ್ತರಿಸಿದಾಗ

Posted By:
Subscribe to Oneindia Kannada

ಬೆಂಗಳೂರು, ಜೂನ್ 30: ಟೀಂ ಇಂಡಿಯಾ ಕೋಚ್ ಆದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಅನಿಲ್ ಕುಂಬ್ಳೆ ಅವರು ತಂಡಕ್ಕೆ ತರಬೇತಿ ನೀಡುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಇಂಗ್ಲೀಷ್, ಹಿಂದಿ ಭಾಷೆ ನಡುವೆ ಖಾಸಗಿ ವಾಹಿನಿಯ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ವಿಡಿಯೋ ಇಲ್ಲಿದೆ ನೋಡಿ

ಟೀಂ ಇಂಡಿಯಾ ಮುಖ್ಯ ಕೋಚ್ ಆದ ಮೊದಲ ಕನ್ನಡಿಗ 'ಜಂಬೋ' ಅನಿಲ್ ಅವರ ವೃತ್ತಿ ಬದುಕು ತವರು ನೆಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲಕವೇ ಆಗುತ್ತಿರುವುದು ವಿಶೇಷ. ಅದರೆ, ಮಳೆಯ ಕಾರಣ ತರಬೇತಿಯನ್ನು ಬೆಂಗಳೂರಿನ ಉತ್ತರ ತಾಲೂಕಿನ ಊರಾದ ಆಲೂರಿನ ಮೈದಾನಕ್ಕೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. [13 ಟೆಸ್ಟ್, 8 ಒಡಿಐ, 3 ಟಿ20 ಟೀಂ ಇಂಡಿಯಾ ವೇಳಾಪಟ್ಟಿ]

Team India will help bring back crowds to Test cricket: Anil Kumble

ಟೆಸ್ಟ್ ಕ್ರಿಕೆಟ್ ಗೆ ಮತ್ತೆ ಗೌರವ ಸಿಗಲಿದೆ: ಏಕದಿನ ಕ್ರಿಕೆಟ್, ಟಿ20 ಪಂದ್ಯಗಳಿಂದ ಟೆಸ್ಟ್ ಕ್ರಿಕೆಟ್ ಸೊರಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಟೆಸ್ಟ್ ಕ್ರಿಕೆಟ್ ಗೆ ಜನರನ್ನು ಸೆಳೆಯುವ ಸಾಮರ್ಥ್ಯ ಭಾರತ ತಂಡಕ್ಕಿದೆ.[ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

ಈ ವರ್ಷ ಎಲ್ಲಾ ನಾವು ಟೆಸ್ಟ್ ಕ್ರಿಕೆಟ್ ಆಡುತ್ತಿದ್ದೇವೆ. ನಾಲ್ಕು ಟೆಸ್ಟ್ ಪಂದ್ಯ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ವಿರುದ್ಧ 3 ಒಟ್ಟಾರೆ 17 ಪಂದ್ಯಗಳನ್ನಾಡಬೇಕಿದೆ. ಈ ಪೈಕಿ 13 ಟೆಸ್ಟ್ ತವರು ನೆಲದಲ್ಲಿ ಆಡಬೇಕಿದೆ. ಹೀಗಾಗಿ ಟೆಸ್ಟ್ ಕ್ರಿಕೆಟ್ ಆಡಲು ಆಟಗಾರರ ಮನಸ್ಥಿತಿಯನ್ನು ಹೊಂದಿಸಬೇಕಿದೆ ಎಂದರು.[ಅನಿಲ್ ಕುಂಬ್ಳೆ = ಶಿಸ್ತು, ಸಂಕಲ್ಪ, ಬದ್ಧತೆ, ಹೋರಾಟ]

Anil Kumble

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಈಗ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದೆ. ಮುಂದಿನ ತಿಂಗಳು ಕೆರಿಬಿಯನ್ ಪ್ರವಾಸಕ್ಕೆ ತೆರಳಲಿದ್ದು, ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಲಿದೆ.[ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಆಯ್ಕೆ]

ತಂಡಕ್ಕಿಂತ ಯಾರೂ ದೊಡ್ಡವರಲ್ಲ: ನಾನು ಕೋಚ್ ಆಗಿ ಆಯ್ಕೆಯಾದ ತಕ್ಷಣ ರವಿ ಶಾಸ್ತ್ರಿ ಅವರೊಂದಿಗೆ ಮಾತನಾಡಿದ್ದೇನೆ. ತಂಡದೊಡನೆ 18 ತಿಂಗಳುಗಳ ಕಾಲ ಒಡನಾಟ ಹೊಂದಿದ್ದ ಅವರಿಂದ ಸಲಹೆ ಪಡೆಯುವುದರಲ್ಲಿ ತಪ್ಪೇನಿಲ್ಲ.

ಇಲ್ಲಿ ಒಂದು ವರ್ಷದ ಅವಧಿ ಮುಖ್ಯವಲ್ಲ. ನಾನು ಅಥವಾ ರವಿ ಮುಖ್ಯವಲ್ಲ, ತಂಡದ ಪ್ರಗತಿ ಮುಖ್ಯ. ಒಂದು ವೇಳೆ ನನ್ನಿಂದ ಉತ್ತಮ ತರಬೇತಿ ನೀಡಲು ಸಾಧ್ಯವಾಗದೇ ಇದ್ದಲ್ಲಿ ಒಂದು ನಾನೇ ಹೊರಬರುತ್ತೇನೆ, ಅಥವಾ ಬಿಸಿಸಿಐ ಕೂಡ ನನ್ನನ್ನು ಇರಿಸಿಕೊಳ್ಳುವುದಿಲ್ಲ ಎಂದು 45 ವರ್ಷ ವಯಸ್ಸಿನ ಕೋಚ್ ಅನಿಲ್ ಹೇಳಿದರು.[ಮಾಧ್ಯಮಗಳ 'ಗೂಗ್ಲಿ' ಗೆ ತಿರುಗೇಟು ನೀಡಿದ ಕುಂಬ್ಳೆ]

Virat Kohli, Anil Kumble

ಇಶಾಂತ್ ಶರ್ಮ ಮುನ್ನಡೆಸಬೇಕಿದೆ: ನಮ್ಮ ಬೌಲರ್ ಗಳು ಮ್ಯಾಚ್ ವಿನ್ನರ್ ಗಳಂತೆ ವರ್ತಿಸಬೇಕಿದೆ. ಇಶಾಂತ್ ಶರ್ಮ ಅವರು ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ತಂಡದ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಹೊಣೆ ಹೊರಬೇಕಿದೆ. ಬೌಲರ್ ಗಳು ಆತ್ಮವಿಶ್ವಾಸದಿಂದ ಕಣಕ್ಕಿಳಿದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂದರು.[ನ್ಯೂಜಿಲೆಂಡ್- ಭಾರತ ಟೆಸ್ಟ್, ಏಕದಿನ ಸರಣಿ ವೇಳಾಪಟ್ಟಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's new head coach Anil Kumble today (June 29) stressed the importance of Test cricket and said his team will play in such a way that crowds will come to stadiums to watch the five-day format.
Please Wait while comments are loading...