ಐಸಿಸಿ ಶ್ರೇಯಾಂಕ ಪಟ್ಟಿ: ಅಶ್ವಿನ್, ಟೀಂ ಇಂಡಿಯಾ ಯಥಾಸ್ಥಿತಿ

Posted By:
Subscribe to Oneindia Kannada

ದುಬೈ, ಜುಲೈ 13: ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ, ರವಿಚಂದ್ರನ್ ಅಶ್ವಿನ್ ಅವರು ಆಲ್‌ ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಹಾಗೂ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಹೊಸ ಐಸಿಸಿ ಶ್ರೇಯಾಂಕ ಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಅವರು ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಹಾಗೂ ದಕ್ಷಿಣ ಆಫ್ರಿಕಾದ ಹಶಿಮ್ ಅಮ್ಲ ಇದ್ದಾರೆ.[ಸಿಯೆಟ್ ಕ್ರಿಕೆಟ್ ಪ್ರಶಸ್ತಿ : ಕೊಹ್ಲಿ, ಅಶ್ವಿನ್ ಶ್ರೇಷ್ಠ ಆಟಗಾರರು]

ಬೌಲರ್ ಗಳ ಪೈಕಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡಿನ ವೇಗಿ ಜೇಮ್ಸ್ ಆಂಡರ್ಸನ್ ಅವರು ನಂ.1 ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪಾಕಿಸ್ತಾನ ವಿರುದ್ಧ ಆರಂಭವಾಗಲಿರುವ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಗಾಯದ ಸಮಸ್ಯೆಯಿಂದ ಆಂಡರ್ಸನ್ ಅಲಭ್ಯರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಏನಾದರೂ 2-1 ಅಥವಾ 3-1ರ ಅಂತರದಲ್ಲಿ ಸರಣಿ ಗೆದ್ದರೆ ಭಾರತದ ಸ್ಥಾನಕ್ಕೆ ಕುತ್ತುಂಟಾಗಲಿದೆ.[ಅಶ್ವಿನ್ ರನ್ನು ಕಿಚಾಯಿಸಿದ ಧೋನಿ, ಕೊಹ್ಲಿ]

ICC Test rankings: Team India, R Ashwin maintain status quo at No. 2

ಇಂಗ್ಲೆಂಡ್ ಏನಾದರೂ 2-0 ಅಥವಾ 3-1 ಅಂತರದಲ್ಲಿ ಗೆಲುವು ಸಾಧಿಸಿದರೆ 112 ಅಂಕ ಗಳಿಸಿ ಭಾರತದೊಡನೆ ಸಮ ಸ್ಥಾನಕ್ಕೆ ನಿಲ್ಲಲಿದೆ. ಟೀಂ ಇಂಡಿಯಾ ಸದ್ಯಕ್ಕೆ ವೆಸ್ಟ್ ಇಂಡೀಸ್ ನಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ.[ಐಸಿಸಿ ಆಲ್ ರೌಂಡರ್ ಪಟ್ಟಿಯಲ್ಲಿ ಅಶ್ವಿನ್ ನಂ.1]

ಬೌಲರ್ ಗಳ ಪೈಕಿ ಪಾಕಿಸ್ತಾನದ ಬೌಲರ್ ಯಾಸೀರ್ ಶಾ ಅವರು 100 ವಿಕೆಟ್ ಗಳನ್ನು ಪಡೆಯಲು 24 ವಿಕೆಟ್ ಗಳು ಬೇಕಿದ್ದು, ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India held the second position with third-placed Pakistan breathing down its neck, while Ravichandran Ashwin topped the all-rounders list besides being placed second in bowling in the latest ICC Test rankings released here on Tuesday (July 12).
Please Wait while comments are loading...