ಫೆ.21ರಂದು ಬಾಂಗ್ಲಾದೇಶಕ್ಕೆ ಟೀಮ್ ಇಂಡಿಯಾ ಪಯಣ

By: ರಮೇಶ್ ಬಿ
Subscribe to Oneindia Kannada

ಬೆಂಗಳೂರು.ಫೆ.19. ಫೆಬ್ರವರಿ 24 ರಿಂದ ಬಾಂಗ್ಲಾದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ಟಿ-20 ಏಷ್ಯ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಧೋನಿ ನೇತೃತ್ವದ ಟೀಂ ಇಂಡಿಯಾ ತಂಡ ಭಾನುವಾರ(ಫೆ.21) ರಂದು ಕೋಲ್ಕತ್ತಾದಿಂದ ಬಾಂಗ್ಲಾದೇಶಕ್ಕೆ ಪಯಣ ಬೆಳಸಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.

ಹಿಂದೆ ಏಷ್ಯ ಕಪ್ ನಲ್ಲಿ 50 ಓವರ್ ಗಳ ಪಂದ್ಯಗಳನ್ನು ನಡೆಸಲಾಗಿತ್ತು ಆದರೆ ಈ ಬಾರಿಯ ಏಷ್ಯ ಕಪ್ ಟೂರ್ನಿಯಲ್ಲಿ 30 ಓವರ್ ಗಳನ್ನು ಕಡಿತಗೊಳಿಸಿ 20 ಓವರ್ ಗಳಿಗೆ ಸಿಮೀತ ಮಾಡಲಾಗಿದ್ದು ಇದು ಮೊದಲ ಬಾರಿಗೆ ಏಷ್ಯ ಕಪ್ ಟಿ-20 ಟೂರ್ನಿ ನಡೆಯಲಿದೆ. [ಏಷ್ಯಾಕಪ್ 2016 : ತಂಡಗಳು]

Team India to leave for Asia Cup on February 21

ಭಾರತ ಮೊದಲ ಪಂದ್ಯವನ್ನು ಫೆಬ್ರವರಿ 24ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಎರಡನೇ ಪಂದ್ಯ ಫೆ.27 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ. ಟಿ-20 ಮಾದರಿಯ ಏಷ್ಯಾಕಪ್ ಟೂರ್ನಿಯ ಎಲ್ಲಾ ಪಂದ್ಯಗಳು ಮೀರ್ಪುರ್ ನ ಷೇರ್ ಎ ಬಾಂಗ್ಲಾ ಸ್ಟೇಡಿಯಂ ಫೆ.24 ರಿಂದ ಮಾರ್ಚ್ 06 ರ ವರೆಗೆ ನಡೆಯಲಿದೆ.[ಏಷ್ಯಾಕಪ್, ಸಂಪೂರ್ಣ ವೇಳಾಪಟ್ಟಿ]

ಭಾರತ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ ಮತ್ತು ವಿಕೇಟ್ ಕೀಪರ್), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೋಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಅಜಿಂಕ್ಯಾ ರಹನೆ, ರವೀಂದ್ರ ಜಡೇಜ, ಹರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಆಶೀಶ್ ನೆಹ್ರಾ, ಮಹ್ಮದ್ ಶಮಿ, ಪವನ್ ನೇಗಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Team India Mahendra Singh Dhoni-led India will leave for Bangladesh on Sunday (February 21) to participate in the Asia Cup Twenty20 tournament.
Please Wait while comments are loading...