ಏಕದಿನ & ಟಿ20 ತಂಡಕ್ಕೆ ಮರಳಿದ ಪಾಂಡೆ, ಯುವಿ ಔಟ್

Posted By:
Subscribe to Oneindia Kannada

ಮುಂಬೈ, ಆಗಸ್ಟ್ 13: ಶ್ರೀಲಂಕಾ ವಿರುದ್ಧ ನಡೆಯಲಿರುವ ಐದು ಏಕದಿನ ಪಂದ್ಯಕ್ಕೆ ಇಂದು(ಆಗಸ್ಟ್ 13) ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. ಭಾನುವಾರ ಸಂಜೆ ಬಿಸಿಸಿಐ ಆಯ್ಕೆ ಸಮಿತಿ ಸಭೆ ಸೇರಿ ತಂಡ ಪ್ರಕಟಿಸಿದ್ದು, ಕರ್ನಾಟಕದ ಮನೀಶ್ ಪಾಂಡೆ ತಂಡಕ್ಕೆ ಮರಳಿದ್ದಾರೆ. ಯುವರಾಜ್ ಸಿಂಗ್ ತಂಡಕ್ಕೆ ಅಯ್ಕೆಯಾಗಿಲ್ಲ.
ಭಾರತದಿಂದ ಶ್ರೀಲಂಕಾ ಪ್ರವಾಸ ಪರಿಷ್ಕೃತ ವೇಳಾಪಟ್ಟಿ

ನಿರೀಕ್ಷೆಯಂತೆ ಮೊಹಮ್ಮದ್ ಶಮಿ, ಆರ್ ಅಶ್ವಿನ್, ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮ ಅವರಿಗೆ ಉಪ ನಾಯಕನ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ.

ಎಂಎಸ್ ಧೋನಿ ಅವರನ್ನು ಆಯ್ಕೆ ಮಾಡಲಾಗಿದ್ದರೆ, ಸುರೇಶ್ ರೈನಾ ಹಾಗೂ ವೆಸ್ಟ್ ಇಂಡೀಸ್ ಸರಣಿಯಲ್ಲಿ ಉತ್ತಮವಾಗಿ ಆಡಿದ್ದ ದಿನೇಶ್ ಕಾರ್ತಿಕ್ ಅವರನ್ನು ಮತ್ತೊಮ್ಮೆ ನಿರ್ಲಕ್ಷಿಸಲಾಗಿದೆ.

Manish Pandey

ಆಗಸ್ಟ್ 20ರಿಂದ ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದ್ದು, ಸೆಪ್ಟೆಂಬರ್ 03ರಂದು ಕೊನೆ ಪಂದ್ಯ ನಡೆಯಲಿದೆ. ಒಟ್ಟು ಐದು ಏಕದಿನ ಪಂದ್ಯಗಳು ಹಾಗೂ ಏಕೈಕ ಟಿ20ಐ ಪಂದ್ಯವನ್ನು ಉಭಯ ತಂಡಗಳು ಆಡಲಿವೆ.

ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಚಂಡಿಮಾಲ್, ಉಪುಲ್ ತರಂಗಾ ನಾಯಕರು

ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಅವರ ನೇತೃತ್ವದ ಸಭೆಗೆ ಸಂದೀಪ್ ಸಿಂಗ್ ಹಾಗೂ ಗಾಂಧಿ ಅವರು ಸ್ಕೈಪ್ ಮೂಲಕ ಭಾಗವಹಿಸಿದ್ದರು.

Virat Kohli is Number 1 in both T20 and ODI Ranking | Oneindia Kannada

ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ(ಉಪ ನಾಯಕ), ಕೆಎಲ್ ರಾಹುಲ್, ಮನೀಶ್ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ್ ಜಾಧವ್, ಎಂಎಸ್ ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The All-India Senior Selection Committee has picked the India Cricket Team for the five-match One Day International series and only Twenty20 International against Sri Lanka.
Please Wait while comments are loading...