ಚಿತ್ರಗಳು: ಫ್ಲೋರಿಡಾದಲ್ಲಿ ಟಿ20 ಆಡಲು ಬಂದ ಧೋನಿ ಪಡೆ

Posted By:
Subscribe to Oneindia Kannada

ಫ್ಲೋರಿಡಾ, ಆಗಸ್ಟ್ 25: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಈಗ ಅಮೆರಿಕದಲ್ಲಿ ವಿಂಡೀಸ್ ವಿರುದ್ಧ ಟಿ20 ಆಡಲು ಫ್ಲೋರಿಡಾಗೆ ಬಂದಿಳಿದಿದೆ.

ಎಂಎಸ್ ಧೋನಿ ನೇತೃತ್ವದ ಪಡೆ ಎರಡು ಟಿ20 ಪಂದ್ಯ ಆಡಲು ಸಜ್ಜಾಗಿದೆ. ಹಾಲಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಆಗಸ್ಟ್ 27 ಮತ್ತು 28 ರಂದು ಟಿ20 ಪಂದ್ಯ ನಡೆಯಲಿದೆ. ಇದೇ ಮೊದಲ ಬಾರಿ ಅಮೆರಿಕದಲ್ಲಿ ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಆಡುತ್ತಿವೆ. [ಯುಎಸ್ಎನಲ್ಲಿ ಇಂಡೋ-ವಿಂಡೀಸ್ ಟಿ20ಗೆ ಫುಲ್ ಗೈಡ್]

Team India arrive in USA for T20I series against West Indies

ಆದರೆ, ಫ್ಲೋರಿಡಾದ ಮೈದಾನದಲ್ಲಿ ಕೆರಿಬಿಯನ್ ಕ್ರಿಕೆಟ್ ಲೀಗ್ ಆಡಿದ ಅನುಭವ ವೆಸ್ಟ್ ಇಂಡೀಸ್ ತಂಡದ ಹಲವಾರು ಆಟಗಾರರಿಗಿದೆ.

ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ರೊಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಜಸ್​ಪ್ರಿತ್​ಬುಮ್ರಾ ಸೇರಿದಂತೆ ಟೆಸ್ಟ್ ತಂಡದಲ್ಲಿನ ಬಹುತೇಕ ಸದಸ್ಯರು ವೆಸ್ಟ್ ಇಂಡೀಸ್​ನಿಂದ ನೇರವಾಗಿ ಬುಧವಾರವೇ ಬಂದಿದ್ದಾರೆ.

ಟಿ20 ನಾಯಕ ಮಹೇಂದ್ರ ಸಿಂಗ್ ಧೋನಿ ಗುರುವಾರ ಮುಂಜಾನೆ ತಂಡವನ್ನು ಸೇರಿದ್ದಾರೆ. ಟೆಸ್ಟ್ ಸರಣಿಯಲ್ಲಿ ಆಡಿದ್ದ ವೃದ್ದಿಮಾನ್ ಸಾಹ, ಮುರಳಿ ವಿಜಯ್, ಚೇತೇಶ್ವರ ಪೂಜಾರ ಹಾಗೂ ಇಶಾಂತ್​ ಶರ್ಮ ಅವರು ಭಾರತಕ್ಕೆ ವಾಪಸ್ಸಾಗಿದ್ದಾರೆ.

ತಂಡ ಇಂತಿದೆ:
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಅಮಿತ್ ಮಿಶ್ರಾ, ಸ್ಟುವರ್ಟ್ ಬಿನ್ನಿ.

ವೆಸ್ಟ್ ಇಂಡೀಸ್ : ಕಾರ್ಲೊಸ್ ಬ್ರಥ್ ವೈಟ್ (ನಾಯಕ), ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಕ್ರಿಸ್ ಗೇಲ್, ಡ್ವಾಯ್ನೆ ಬ್ರಾವೋ, ಇವಿನ್ ಲೂಯಿಸ್, ಜಾಸನ್ ಹೋಲ್ಡರ್, ಜಾನ್ಸನ್ ಚಾರ್ಲ್ಸ್, ಕೀರಾನ್ ಪೊಲ್ಲಾರ್ಡ್, ಲೆಂಡ್ಲ್ ಸಿಮನ್ಸ್, ಮರ್ಲಾನ್ ಸ್ಯಾಮುಯಲ್ಸ್, ಸ್ಯಾಮುಯಲ್ ಬದ್ರಿ, ಸುನಿಲ್ ನರೇನ್.

Travel begins #miami

A photo posted by jasprit bumrah (@jaspritb1) on Aug 23, 2016 at 4:43pm PDT


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Team India arrive in USA
English summary
After winning the Test series against West Indies, Team India left for the United States of America (USA) to play two T20 internation matches.
Please Wait while comments are loading...