ಬಿನ್ನಿ ಕಳಪೆ ಬೌಲಿಂಗ್ ಗೆ ಮಾಯಾಂತಿಗೇಕೆ ಪೆಟ್ಟು?

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 01: ಟೀಂ ಇಂಡಿಯಾ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅವರ ಕಳಪೆ ಬೌಲಿಂಗ್ ಬಗ್ಗೆ ಟೀಕೆ, ಹಾಸ್ಯ, ಅಣಕು, ನಗೆಚಟಾಕಿಗಳು ಹರಿದು ಬಂದಿದ್ದನ್ನು ಗಮನಿಸಿರಬಹುದು. ವಿಂಡೀಸ್ ಪ್ರವಾಸದ ನಂತರ ಈಗ ಇವೆಲ್ಲಕ್ಕೂ ಸ್ಟುವರ್ಟ್ ಬಿನ್ನಿ ಪತ್ನಿ ಮಾಯಾಂತಿ ಲ್ಯಾಂಗರ್ ಉತ್ತರಿಸಿದ್ದಾರೆ.

ಆಗಸ್ಟ್ 27ರಂದು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್ ದಾಳಿಗೆ ಇಳಿದ ಬಿನ್ನಿ ಅವರು ಒಂದು ಓವರ್ ನಲ್ಲಿ 32 ರನ್ ಚೆಚ್ಚಿಸಿಕೊಂಡಿದ್ದು ಮುಳುವಾಯಿತು. ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ತಾಗಿ ಟ್ರಾಲ್ ಮಾಡಲಾಯಿತು. ಟ್ವಿಟ್ಟರ್ ನಲ್ಲಿ ತೀರಾ ಕೆಳಮಟ್ಟದಲ್ಲಿ ಬಿನ್ನಿ ಅವರನ್ನು ಗೇಲಿ ಮಾಡಲಾಯಿತು.

ಕಾಮೆಂಟೆಟರ್ ಹರ್ಷ ಭೋಗ್ಲೆ ಅವರು ಮಾಯಾಂತಿ ಪರ ವಾದಿಸಿದರೂ ಪ್ರಯೋಜನವಾಗಲಿಲ್ಲ. ತಂಡದ ಕಳಪೆ ಸಾಧನೆಗೆ ಒಬ್ಬರನ್ನು ದೂಷಿಸುವುದು ತಪ್ಪಾದರೂ ಕ್ರಿಕೆಟ್ ಪ್ರೇಮಿಗಳ ಆಕ್ರೋಶ, ನಿರಾಶೆ ನಿರೀಕ್ಷಿತ. ಈ ಹಿಂದೆ ವಿರಾಟ್ ಕೊಹ್ಲಿ ಕಳಪೆ ಆಟ ಆಡಿದಾಗಲೆಲ್ಲ ನಟಿ ಅನುಷ್ಕಾ ಶರ್ಮರನ್ನು ಗೇಲಿ ಮಾಡಲಾಗುತ್ತಿತ್ತು.

ಕ್ರೀಡಾ ಚಾನೆಲ್ ನ ನಿರೂಪಕಿ/ ಪತ್ರಕರ್ತೆಯಾದ ಮಾಯಾಂತಿ ಅವರು ಪತಿಯ ಬಗ್ಗೆ ಹಾಗೂ ತನ್ನ ಬಗ್ಗೆ ಬಂದಿರುವ ಕೀಳಮಟ್ಟದ ಕಾಮೆಂಟ್ ಗಳಿಗೆ ಗುರುವಾರ (ಸೆಪ್ಟೆಂಬರ್ 01) ಉತ್ತರಿಸಿದ್ದಾರೆ.

ಒಂದೇ ಓವರ್ ನಲ್ಲಿ 32ರನ್

ಒಂದೇ ಓವರ್ ನಲ್ಲಿ 32ರನ್

ಈ ಪಂದ್ಯದಲ್ಲಿ 11 ಓವರ್ ನಲ್ಲಿ ಬೌಲಿಂಗ್ ದಾಳಿಗೆ ಇಳಿದ ಬಿನ್ನಿ ಅವರ ಎಸೆತಗಳನ್ನು ನಿರಾಯಾಸವಾಗಿ ಎಡಗೈ ಬ್ಯಾಟ್ಸ್ ಮನ್ ಇವಿನ್ ಲೂಯಿಸ್ ಅವರು ಪೆವಿಲಿಯನ್ ಗೆ ಕಳಿಸಿದರು. ಸತತ ಐದು ಸಿಕ್ಸರ್ ಬಾರಿಸಿದ ಲೂಯಿಸ್ ಅವರು ಯುವರಾಜ್ ಸಿಂಗ್ ದಾಖಲೆ ಮುರಿಯುತ್ತಾರೆ ಎಂಬ ನಿರೀಕ್ಷೆಯೂ ಇತ್ತು. ಆದರೆ, ಆರನೇ ಎಸೆತದಲ್ಲಿ ಕೇವಲ ಒಂದು ರನ್ ಮಾತ್ರ ಪಡೆದರು.

R I P ಎಂದು ಹಾಕಿದ ಕುಹಕಿಗಳು

ಮಾಯಾಂತಿ ಲ್ಯಾಂಗರ್ Rest In Peace ಎಂದು ಹಾಕಿದ ಕುಹಕಿಗಳು

ಕುಹಕಿಗಳಿಗೆ ಪ್ರತಿಕ್ರಿಯೆ ನೀಡಿದ ಹರ್ಷ ಭೋಗ್ಲೆ

ಕುಹಕಿಗಳಿಗೆ ಪ್ರತಿಕ್ರಿಯೆ ನೀಡಿದ ಹರ್ಷ ಭೋಗ್ಲೆ, ಈ ರೀತಿ ಅಸಭ್ಯವಾಗಿ ಟ್ವೀಟ್ ಮಾಡಬೇಡಿ ಎಂದರು.

ಬಿನ್ನಿ ಜತೆ ಮನೆಗೆ ಮಾಯಾಂತಿ ಹೋಗುವುದು ಹೀಗೆ

ಬಿನ್ನಿ ಜತೆ ಮನೆಗೆ ಮಾಯಾಂತಿ ಹೋಗುವುದು ಹೀಗೆ ಚಿತ್ರ ಹಾಕಿದ್ದ ಕುಹಕಿಗಳು.

ವಿಚ್ಛೇದನ ಪಡೆಯಿರಿ ನನಗೆ ವಕೀಲರು ಗೊತ್ತು

ಮಾಯಾಂತಿ ವಿಚ್ಛೇದನ ಪಡೆಯಿರಿ ನನಗೆ ವಕೀಲರು ಗೊತ್ತು ಎಂದವರು ಇದ್ದಾರೆ.

ಬ್ರಾಡ್ ರೆಕಾರ್ಡ್ ಮುರಿಯಲು ಬಿಡಬೇಕಿತ್ತು

ಸ್ಟುವರ್ಟ್ ಬ್ರಾಡ್ ರೆಕಾರ್ಡ್ ಮುರಿಯಲು ಬಿಡಬೇಕಿತ್ತು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India all-rounder Stuart Binny came under sharp criticism of fans during India's first Twenty20 International match against West Indies on August 27 after he leaked 32 runs in a single over at Fort Lauderdale.
Please Wait while comments are loading...