ಟಿ20ಯಲ್ಲಿ ರನ್ ಸರಾಸರಿ ಅಗ್ರಸ್ಥಾನಕ್ಕೇರಿದ ಕೊಹ್ಲಿ

Posted By:
Subscribe to Oneindia Kannada

ಅಡಿಲೇಡ್, ಜ.27: ಭಾರತದ ಪ್ರಮುಖ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಪಾಲಿಗೆ ಅಡಿಲೇಡ್ ಓವಲ್ ಅದೃಷ್ಟದ ಮೈದಾನ ಹೇಗೆ ಎಂಬುದನ್ನು ಈ ಹಿಂದೆ ಓದಿರುತ್ತೀರಿ. ಅದೃಷ್ಟದ ಮೈದಾನವೆಂದ ಮೇಲೆ ಅದ್ಭುತ ಪ್ರದರ್ಶನದ ಫಲಿತಾಂಶ ಇದ್ದೇ ಇರುತ್ತದೆ. ಏಕದಿನ ಕ್ರಿಕೆಟ್, ಟೆಸ್ಟ್ ಕ್ರಿಕೆಟ್ ನಲ್ಲಿ ಸಾಧನೆ ಮಾಡಿರುವ ಕೊಹ್ಲಿ ಈಗ ಟಿ20ಯಲ್ಲಿ ರನ್ ಸರಾಸರಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್ | ಪಂದ್ಯದ ವರದಿ | ಸರಣಿ ವೇಳಾಪಟ್ಟಿ

ಕೊಹ್ಲಿ ಟಿ20 ಶ್ರೇಷ್ಠ ಪ್ರದರ್ಶನ 55 ಎಸೆತಗಳಲ್ಲಿ ಅಜೇಯ 90 ರನ್ ಗಳಿಂದಾಗಿ ಭಾರತ 20 ಓವರ್ ಗಳಲ್ಲಿ 188/3 ಸ್ಕೋರ್ ಮಾಡಿತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ 19.4 ಓವರ್ ಗಳಲ್ಲಿ 151ಕ್ಕೆ ಆಲೌಟ್ ಆಗಿ ಸೊಲೊಪ್ಪಿಕೊಂಡಿತು. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಪಡೆದಿದ್ದು, ಎರಡನೇ ಟಿ20ಐ ಪಂದ್ಯ ಮೆಲ್ಬೋರ್ನ್ ನಲ್ಲಿ ಜನವರಿ 29 (ಶುಕ್ರವಾರ) ನಡೆಯಲಿದೆ. [ಅಡಿಲೇಡ್ ಪಿಚ್ ಜೊತೆ ವಿರಾಟ್ ಕೊಹ್ಲಿ ಲವ್ ಅಫೇರ್]

T20Is: Virat Kohli scales another high, claims top spot

ಟಿ20 ಮಾದರಿಯಲ್ಲಿ ಕನಿಷ್ಠ 500ರನ್ ಗಳಿಸಿದ ಆಟಗಾರರ ಪೈಕಿ ಅತಿಹೆಚ್ಚು ರನ್ ಸರಾಸರಿಯನ್ನು 27ವರ್ಷ ವಯಸ್ಸಿನ ಕೊಹ್ಲಿ ಅವರು ಹೊಂದಿದ್ದಾರೆ ಎಂದು ಐಸಿಸಿ ಪ್ರಕಟಿಸಿದೆ. [ಟಿ20: ಭಾರತ vs ಪಾಕಿಸ್ತಾನ ಡಬ್ಬಲ್ ಧಮಾಕ]

ಭಾರತ ಪರ 31 ಪಂದ್ಯಗಳನ್ನಾಡಿರುವ ಕೊಹ್ಲಿ ಅವರು 1,106 ರನ್ ಗಳಿಸಿದ್ದು, 48.08ರನ್ ಸರಾಸರಿ ಹೊಂದಿದ್ದಾರೆ. 500ರನ್ ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿರುವ ಆಟಗಾರರ ಪೈಕಿ ಕೊಹ್ಲಿ ಅವರದ್ದು ಹೆಚ್ಚಿನ ರನ್ ಸರಾಸರಿಯಾಗಿದೆ.

ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಗಳಿಸಿದ 90 ಅಜೇಯ ರನ್ ಗಳು ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಇದು ಅವರ 10ನೇ ಅರ್ಧಶತಕವಾಗಿದೆ. 2010ರಲ್ಲಿ ಜಿಂಬಾಬ್ವೆ ವಿರುದ್ಧ ಕೊಹ್ಲಿ ತಮ್ಮ ಮೊದಲ ಟಿ20 ಪಂದ್ಯವಾಡಿದರು.

ಕೊಹ್ಲಿ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಟಿ20 ತಂಡದ ನಾಯಕ ಅರೋನ್ ಫಿಂಚ್ ಅವರಿದ್ದಾರೆ. ರನ್ ಸರಾಸರಿ 40.00 ರಷ್ಟಿದೆ. ಕನಿಷ್ಠ 500ರನ್ ಗಳಿಸಿ ಅತಿ ಹೆಚ್ಚು ರನ್ ಸರಾಸರಿ ಹೊಂದಿರುವ ಟಾಪ್ 5 ಆಟಗಾರರು (ಜನವರಿ 27, 2016ರಂತೆ)
1. ವಿರಾಟ್ ಕೊಹ್ಲಿ (ಭಾರತ) - 48.08 (1,106 ರನ್ ಗಳು)
2. ಅರೋನ್ ಫಿಂಚ್ (ಆಸ್ಟ್ರೇಲಿಯಾ) - 40.00-(800)
3. ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ) - 39.28 (825)
4. ಜೆಪಿ ಡುಮಿನಿ (ದಕ್ಷಿಣ ಆಫ್ರಿಕಾ)- 38.20 (1,528)
5. ಮೈಕಲ್ ಹಸ್ಸಿ (ಆಸ್ಟ್ರೇಲಿಯಾ)- 37.94 (721)
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's star batsman Virat Kohli has scaled another high in his international career, this time in the shortest format of the game - Twenty20s. He rocketed to the top spot in batting averages after his match-winning 90 not out off 55 balls against Australia in the 1st T20I last night (January 26).
Please Wait while comments are loading...