ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಭಾರತದ ಮಹಿಳೆಯರ ತಂಡ

Posted By:
Subscribe to Oneindia Kannada

ಮೆಲ್ಬೋರ್ನ್, ಜ. 29: ಭಾರತದ ಮಹಿಳಾ ಕ್ರಿಕೆಟ್ ತಂಡ ಶುಕ್ರವಾರ (ಜನವರಿ 29) ಆಸ್ಟ್ರೇಲಿಯಾದಲ್ಲಿ ಹೊಸ ವಿಕ್ರಮ ಸಾಧಿಸಿದೆ. ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಗೆಲ್ಲುವ ಮೂಲಕ ಎಂಸಿಜಿ ಮೈದಾನದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.

ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ದಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ಡಕ್ ವರ್ತ್ /ಲೂಯಿಸ್ ನಿಯಮದಂತೆ 10 ವಿಕೆಟ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡು ಇತಿಹಾಸ ನಿರ್ಮಿಸಿದೆ.

Mithali Raj

ಅಡಿಲೇಡ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಮಿಥಾಲಿ ರಾಜ್ ನೇತೃತ್ವದ ಟೀಂ ಇಂಡಿಯಾ ಮಹಿಳಾ ತಂಡ 5 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.

ಎರಡನೇ ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್ ಅವರು 32 ಎಸೆತಗಳಲ್ಲಿ 37ರನ್ (6x4) ಗಳಿಸಿ ಗೆಲುವಿನ ರನ್ ಬಾರಿಸಿದ್ದು ವಿಶೇಷವಾಗಿತ್ತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು 22 ಎಸೆತಗಳಲ್ಲಿ 24ರನ್ (3x4) ಗಳಿಸಿದರು.

ಇದಕ್ಕೂ ಮುನ್ನ ಮಳೆಯಿಂದ ಪದೇ ಪದೇ ತೊಂದರೆಗೀಡಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 18ಓವರ್ ಗಳಲ್ಲಿ 125/8 ಸ್ಕೋರಿಗೆ ಭಾರತದ ಮಹಿಳೆಯರು ನಿಯಂತ್ರಿಸಿದರು. ಭಾರತದ ಪರ ವೇಗಿ ಜೂಲನ್ ಗೋಸ್ವಾಮಿ 4 ಓವರ್ ಗಳಲ್ಲಿ 16 ರನ್ನಿತ್ತು 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ : 125/8, 18 ಓವರ್ಸ್ (ಮೆಗ್ ಲ್ಯಾನಿಂಗ್ 49, ಜೂಲನ್ ಗೋಸ್ವಾಮಿ 2/16, ರಾಜೇಶ್ವರಿ ಗಾಯಕ್ವಾಡ್ 2/27)
ಭಾರತ: 69/0, 9.1 ಓವರ್ಸ್(ಮಿಥಾಲಿ ರಾಜ್ 37 ಅಜೇಯ, ಸ್ಮೃತಿ ಮಂದಾನಾ 22 ಅಜೇಯ)

ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಸಿಡ್ನಿಯಲ್ಲಿ ಜನವರಿ 31ಕ್ಕೆ ನಡೆಯಲಿದೆ.

ಈ ಸುದ್ದಿಯನ್ನು ಪೋಡ್ ಕಾಸ್ಟ್ ನಲ್ಲಿ ಕೇಳಿಸಿಕೊಳ್ಳಿ:


(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian women on Friday (January 29) created history in Australia when they defeated the hosts in the 2nd Twenty20 International at the iconic Melbourne Cricket Ground (MCG).
Please Wait while comments are loading...