ವಾಟ್ಸನ್: ಆಸೀಸ್ ತಂಡಕ್ಕೆ ಅಚ್ಚರಿಯಾಗಿ ರೀ ಎಂಟ್ರಿ

Posted By:
Subscribe to Oneindia Kannada

ಕ್ಯಾನ್‌ ಬೆರಾ, ಜ. 20: ಟೀಂ ಇಂಡಿಯಾ ವಿರುದ್ಧ ನಡೆಯಲಿರುವ ಟ್ವೆಂಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಲಾಗಿದ್ದು, ಆಲ್ ರೌಂಡರ್ ಶೇನ್ ವಾಟ್ಸನ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ವಾಟ್ಸನ್, ಐಪಿಎಲ್ ನ ಅನುಭವ ನನ್ನನ್ನು ಮತ್ತೆ ತಂಡಕ್ಕೆ ಮರಳುವಂತೆ ಮಾಡಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಭಾರತ ವಿರುದ್ಧದ ಟ್ವೆಂಟಿ-20 ಸರಣಿಗೆ ಮಂಗಳವಾರ ತಂಡವನ್ನು ಪ್ರಕಟಿಸಿದ್ದು, ಬಹುಕಾಲ ತಂಡದಿಂದ ದೂರವುಳಿದಿದ್ದ ವಾಟ್ಸನ್ ತಂಡಕ್ಕೆ ಮರಳಿದ್ದರೆ, ಹೊಸ ಮುಖಗಳಾದ ಟ್ರೆವಿಸ್ ಹೆಡ್ ಹಾಗೂ ಆಂಡ್ರ್ಯೂ ಟೈ ತಂಡಕ್ಕೆ ಆಯ್ಕೆಯಾಗಿದ್ದಾರೆ. [ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]

T20I call up a 'pleasant surprise', says Shane Watson

ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಡ್ರಾಪ್ ಆದ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಆಸೆಯನ್ನು ವಾಟ್ಸನ್ ಕೈಬಿಟ್ಟಿದ್ದರು. ಆದರೆ, ಬಿಗ್ ಬಾಷ್ ಲೀಗ್ ನಲ್ಲಿ ವಾಟ್ಸನ್ ಆಟ ಮುಂದುವರೆಸಿದ್ದರು. 34 ವರ್ಷ ವಯಸ್ಸಿನ ವಾಟ್ಸನ್ ಅವರು ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ ಹಾಗೂ ಬಿಗ್ ಬಾಷ್ ಲೀಗ್ ನಲ್ಲಿ ಸಿಡ್ನಿ ಥಂಡರ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ.[ಸಿಡ್ನಿ: ಪಿಂಕ್ ಟೆಸ್ಟ್ ನಂತರ ಪಿಂಕ್ ಟ್ವೆಂಟಿ20 ಪಂದ್ಯ]

ಶಾನ್ ಟೇಟ್ ಪ್ರಸ್ತುತ ಆಸ್ಟ್ರೇಲಿಯದಲ್ಲಿ ಅತ್ಯಂತ ವೇಗದ ಬೌಲರ್ ಆಗಿರುವ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಅಪಾರ ಅನುಭವ ಹಾಗೂ ದೇಶೀಯ ಟ್ವೆಂಟಿ-20 ಟೂರ್ನಿ ಬಿಬಿಎಲ್‌ನಲ್ಲಿ ನೀಡಿರುವ ಉತ್ತಮ ಪ್ರದರ್ಶನವನ್ನು ಆಧರಿಸಿ ವ್ಯಾಟ್ಸನ್‌ರನ್ನು ಆಯ್ಕೆ ಮಾಡಿದ್ದೇವೆ ಎಂದು ರಾಷ್ಟ್ರೀಯ ಆಯ್ಕೆಗಾರ ರಾಡ್ನೆ ಮಾರ್ಷ್ ಹೇಳಿದ್ದಾರೆ.

ಆಸ್ಟ್ರೇಲಿಯ ತಂಡ ಜ.26 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲಿದೆ. ಆಸ್ಟ್ರೇಲಿಯ ಹಾಗೂ ಭಾರತ ತಂಡಕ್ಕೆ ಈ ಟಿ20 ಸರಣಿ ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗೆ ತಾಲೀಮು ಪಂದ್ಯವಾಗಲಿದೆ.

ಟಿ20 ಸರಣಿಯ 3ನೇ ಪಂದ್ಯದ ವೇಳೆ ಮಾಜಿ ವೇಗಿ ಗ್ಲೆನ್ ಮೆಕ್​ಗ್ರಾತ್ ಪತ್ನಿ ಜಾನೆ ಸ್ಮರಣಾರ್ಥ ಸಿಡ್ನಿ ಮೈದಾನ ಹಾಗೂ ಆಟಗಾರರ ಸಮವಸ್ತ್ರ ಸಂಪೂರ್ಣ ನಸುಗೆಂಪು ಬಣ್ಣದೊಂದಿಗೆ ಕಂಗೊಳಿಸಲಿದೆ. ಪಿಂಕ್ ಚೆಂಡು ಬಳಸಲಾಗುತ್ತದೆ.

ಆಸ್ಟ್ರೇಲಿಯದ ಟ್ವೆಂಟಿ-20 ತಂಡ: ಅರೋನ್ ಫಿಂಚ್(ನಾಯಕ), ಸ್ಕಾಟ್ ಬೊಲೆಂಡ್, ಕ್ಯಾಮರೂನ್ ಬೊಯ್ಸಾ, ಜೇಮ್ಸ್ ಫಾಕ್ನರ್, ಜಾನ್ ಹೇಸ್ಟಿಂಗ್ಸ್, ಟ್ರೆವಿಸ್ ಹೆಡ್, ನಥನ್ ಲಿಯೊನ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್‌ವೆಲ್, ಶಾನ್ ಮಾರ್ಷ್, ಕೇನ್ ರಿಚರ್ಡ್‌ಸನ್, ಸ್ಟೀವನ್ ಸ್ಮಿತ್, ಶಾನ್ ಟೇಟ್, ಆಂಡ್ರೂ ಟೈ, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Conceding that the T20I call up against India came as a "pleasant surprise", Australian all-rounder Shane Watson today said his familiarity with Indian cricket through IPL helped him in reviving his faltering international career.
Please Wait while comments are loading...