ಅಂಧರ ಟಿ20 ವಿಶ್ವಕಪ್ : ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

Posted By:
Subscribe to Oneindia Kannada

ಅಹಮದಾಬಾದ್, ಫೆಬ್ರವರಿ 05: 2ನೇ ಆವೃತ್ತಿಯ ಅಂಧರ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಸೋಲಿಸಿದೆ. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಚಂದನ್ ದೇಶಪ್ರಿಯ 62 ರನ್ ಗಳಿಸಿ ಆಸರೆಯಾದರು. ಉಳಿದಂತೆ ಸುಮನ್ 30ರನ್ ಗಳಿಸಿದರು. ಶ್ರೀಲಂಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು.

T20 World Cup for Blind: India beat Sri Lanka by 9 wickets

ರನ್ ಚೇಸ್ ನಲ್ಲಿ ಟೀಂ ಇಂಡಿಯಾಕ್ಕೆ ಪ್ರಕಾಶ್ ಅವರ ಭರ್ಜರಿ ಬ್ಯಾಟಿಂಗ್ ಆಸರೆಯಾಯಿತು. 20 ಬೌಂಡರಿಗಳಿದ್ದ ಅಜೇಯ 99 ರನ್ ಬಾರಿಸಿದ ಪ್ರಕಾಶ್ ಅವರು ಗೆಲುವಿನ ದಡ ಮುಟ್ಟಿಸಿದರು. ಭಾರತ ತಂದ 13.3 ಓವರ್‌ಗಳಲ್ಲಿ ಗೆಲುವಿನ ಗುರಿ ಮುಟ್ಟಿ ಪಂದ್ಯ ತನ್ನದಾಗಿಸಿಕೊಂಡಿತು. ಪ್ರಕಾಶ್‌ ಅವರಿಗೆ ಕೇತನ್ ಪಟೇಲ್ ಅಜೇಯ 56 ರನ್ ಗಳಿಸಿ ನೆರವಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ahmedabad: India continued their winning streak by defeating Sri Lanka by nine wickets in the T20 World Cup for Blind at Sardar Vallabhbhai Patel Stadium here today, February 4.
Please Wait while comments are loading...