ಆಸಿಸ್ ಮಣಿಸಿ ಟಿ-20 ವಿಶ್ವಕಪ್‌ಗೆ ಮುತ್ತಿಟ್ಟ ವಿಂಡೀಸ್ ವನಿತೆಯರು

Subscribe to Oneindia Kannada

ಕೋಲ್ಕತಾ, ಏಪ್ರಿಲ್, 03: ವೆಸ್ಟ್ ಇಂಡೀಸ್ ತಂಡ ಮಹಿಳಾ ಟಿ-20 ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಸ್ಟ್ರೇಲಿಯಾ ವನಿತೆಯರ ತಂಡವನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್‌ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಹಿಳೆಯರು ಅರ್ಹ ಜಯ ದಾಖಲಿಸಿದ್ದಾರೆ. ಸತತ ಟ್ರೋಫಿ ಎತ್ತಿ ಹಿಡಿಯುವ ಆಸ್ಟ್ರೇಲಿಯಾ ಕನಸನ್ನು ವಿಂಡೀಸ್ ಭಗ್ನಮಾಡಿದೆ.[ವೈದ್ಯನ ಕ್ರಿಕೆಟ್ ಹುಚ್ಚಿಗೆ ಯುವಕನ ಪ್ರಾಣ ಹಾರಿಹೋಯ್ತು]

cricket

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 148 ರನ್‌ ಕಲೆ ಹಾಕಿತು. 149 ರನ್‌ಗಳ ಗುರಿಯನ್ನು ವಿಂಡೀಸ್ ಎರಡು ವಿಕೆಟ್ ಕಳೆದುಕೊಂಡು ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ ಮುಟ್ಟಿತು.

ಇದು ವೆಸ್ಟ್ ಇಂಡೀಸ್ ಗೆ ಇದು ಮೊದಲ ಮಹಿಳಾ ಟಿ-20 ವಿಶ್ವ ಕಪ್ ಆಗಿದೆ. ಕೆಲ ದಿನಗಳ ಹಿಂದೆ 19 ವರ್ಷದೊಳಗಿನವರ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಜಯಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Riding on scintillating knocks from the opening duo of skipper Stafanie Taylor and Hayle Matthews, the West Indies annexed their first Women's World T20 crown with a convincing eight-wicket victory in the final over defending champions Australia at the Eden Gardens here on Sunday.
Please Wait while comments are loading...