ಟಿ20 ಅಭ್ಯಾಸ ಪಂದ್ಯದಲ್ಲಿ ಧೋನಿ ಪಡೆಗೆ ಭರ್ಜರಿ ಜಯ

Posted By:
Subscribe to Oneindia Kannada

ಪರ್ತ್, ಜ. 08: ಆಸ್ಟ್ರೇಲಿಯಾ ಪ್ರವಾಸದ ಮೊದಲ ಅಭ್ಯಾಸ ಪಂದ್ಯದಲ್ಲೇ ಟೀಂ ಇಂಡಿಯಾ ಆಟಗಾರರು ಉತ್ತಮ ಬ್ಯಾಟಿಂಗ್ ಅಭ್ಯಾಸ ಪಡೆದುಕೊಂಡಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಟ್ವೆಂಟಿ 20 ಪಂದ್ಯವನ್ನು ಪ್ರವಾಸಿ ಭಾರತ ತಂಡ ಸುಲಭವಾಗಿ ಗೆದ್ದುಕೊಂಡಿದೆ.

ವಿರಾಟ್ ಕೊಹ್ಲಿ, ಶಿಖರ್ ಧವನ್ ತಲಾ 74ರನ್ ಸಿಡಿಸಿ ಭಾರತದ ಮೊತ್ತವನ್ನು 20 ಓವರ್ ಗಳಲ್ಲಿ 192/4 ಮೊತ್ತ ಗಳಿಸಿತು. ಬೃಹತ್ ಗುರಿ ಬೆನ್ನು ಹತ್ತಿದ ಸ್ಥಳೀಯ ತಂಡ 6/118 ಸ್ಕೋರ್ ಮಾಡಿ ಸೊಲೊಪ್ಪಿಕೊಂಡಿದೆ.

ಧವನ್ 8 ಬೌಂಡರಿ, 3 ಸಿಕ್ಸರ್ ಸಿಡಿಸಿದರೆ, ಕೊಹ್ಲಿ 7 ಬೌಂಡರಿ ಹಾಗೂ 3 ಸಿಕ್ಸ್ ಬಾರಿಸಿದರು. ನಾಯಕ ಧೋನಿ 14 ಎಸೆತಗಳಲ್ಲಿ 22 ರನ್ (1X4, 2X6) ಗಳಿಸಿ ಅಜೇಯವಾಗಿ ಉಳಿದರು.[2016ರ ಆಸ್ಟ್ರೇಲಿಯಾ vs ಟೀಂ ಇಂಡಿಯಾ ಸರಣಿ ವೇಳಾಪಟ್ಟಿ]

ಆರಂಭಿಕ ಆಟಗಾರ ರೋಹಿತ್ ಶರ್ಮ 6 ರನ್ ಗಳಿಸಿ ಪಂದ್ಯದ 3ನೇ ಓವರ್ ನಲ್ಲೇ ಔಟಾದರು. ನಂತರ 2ನೇ ವಿಕೆಟ್ ಗೆ ದೆಹಲಿಯ ಧವನ್ ಹಾಗೂ ಕೊಹ್ಲಿ 149ರನ್ ಜೊತೆಯಾಟ ನೀಡಿದರು.

Dhawan hit 74 each as India post 192/4 in warm-up game

ಭಾರತ ಹಾಗೂ ಆಸ್ಟ್ರೇಲಿಯಾ 5 ಏಕದಿನ ಕ್ರಿಕೆಟ್ ಪಂದ್ಯ ಹಾಗೂ 3 ಟಿ20 ಪಂದ್ಯಗಳನ್ನಾಡಲಿದ್ದು ಜನವರಿ 12 (ಪರ್ತ್) ರಿಂದ ಆರಂಭವಾಗಲಿದೆ. ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಶನಿವಾರ (ಜನವರಿ 09) ರಂದು 50 ಓವರ್ ಗಳ ಅಭ್ಯಾಸ ಪಂದ್ಯವನ್ನು ಭಾರತ ಆಡಲಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ 192/4, 20 ಓವರ್ಸ್ (ಶಿಖರ್ ಧವನ್ 74, ವಿರಾಟ್ ಕೊಹ್ಲಿ 74, ಎಂಎಸ್ ಧೋನಿ 22 ಅಜೇಯ, ಡುಫೀಲ್ಡ್ 1/21, ಜೋಶ್ ನಿಕೋಲಸ್ 1/44, ಮ್ಯಾಥ್ಯೂ ಕೆಲ್ಲಿ 1/31)

ಪಶ್ಚಿಮ ಆಸ್ಟ್ರೇಲಿಯಾ 6/118, 20 ಓವರ್ (ಟಿ.ಆರ್ ಬರ್ಟ್ 74ರನ್ ಸ್ರಾನ್ 2/24, ಅಕ್ಷರ್ ಪಟೇಲ್ 2/13, ಜಡೇಜ 2/13)

ಪರ್ತ್ ಪಿಚ್ ನನ್ನ ಬ್ಯಾಟಿಂಗ್ ಶೈಲಿಗೆ ಅನುಕೂಲಕರವಾಗಿತ್ತು. ಆಸ್ಟ್ರೇಲಿಯಾದ ವಿರುದ್ಧ ಗೆಲುವು ಸಾಧಿಸುವುದು ಯಾವಾಗಲೂ ಒಳ್ಳೆ ಬೆಳವಣಿಗೆ ಎಂದು ಪಂದ್ಯ ನಂತರ ಶಿಖರ್ ಧವನ್ ಹೇಳಿದರು. ಪೂರ್ಣ ಸುದ್ದಿಗೋಷ್ಠಿ ವಿಡಿಯೋ ಇಲ್ಲಿದೆ

Shikhar Dhawan addresses the media after the warmup game Perth, Australia

Posted by Indian Cricket Team on 8 January 2016

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian batsmen started off their Australian tour on a bright note as Virat Kohli and Shikhar Dhawan led the team to 192/4 in 20 overs against a Western Australia XI (WA XI) in a Twenty20 warm-up game here today(Jan 08). In reply WA managed to score 6/118 in 20 Overs.
Please Wait while comments are loading...