ಟಿ20 : ಉತ್ತರ ವಲಯಕ್ಕೆ ಹರ್ಭಜನ್ ಸಿಂಗ್ ನಾಯಕ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 08: ಸೈಯದ್ ಮುಷ್ತಾಕ್ ಅಲಿ ಟಿ20 ಅಖಿಲ ಭಾರತ ಟೂರ್ನಮೆಂಟ್ ನ ಉತ್ತರ ವಲಯ ತಂಡ ಪ್ರಕಟಿಸಲಾಗಿದ್ದು, ಹಿರಿಯ ಆಟಗಾರರ ಹರ್ಭಜನ್ ಸಿಂಗ್ ನಾಯಕರಾಗಿದ್ದಾರೆ. ಯುವರಾಜ್ ಸಿಂಗ್, ಗೌತಮ್ ಗಂಭೀರ್, ಶಿಖರ್ ಧವನ್ ಹಾಗೂ ಆಶೀಶ್ ನೆಹ್ರಾ ತಂಡದಲ್ಲಿದ್ದಾರೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಅಂತರ ವಲಯ ಟಿ20 ಟೂರ್ನಮೆಂಟ್ ಫೆಬ್ರವರಿ 12ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಉತ್ತರವಲಯದ ವಿರುದ್ಧ ದಕ್ಷಿಣ ವಲಯ ಆಡಲಿದೆ.

Harbhajan Singh

ಉತ್ತರ ವಲಯ ತಂಡ : ಹರ್ಭಜನ್ ಸಿಂಗ್ (ನಾಯಕ), ಶಿಖರ್ ಧವನ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಮನ್ದೀಪ್ ಸಿಂಗ್, ರಿಷಬ್ ಪಂತ್ (ವಿಕೆಟ್ ಕೀಪರ್), ಉನ್ಮುಕ್ತ್ ಚಂದ್, ಎಆರ್ ಪಚೇರಾ, ರಿಷಿ ಧವನ್, ಮಾಯಾಂಗ ಡಾಗರ್, ಯಜುವೇಂದ್ರ ಚಾಹಲ್, ಪರ್ವೇಜ್ ರಸೂಲ್, ಉಮರ್ ನಜೀರ್, ಪ್ರದೀಪ್ ಸಾಂಗ್ವನ್, ಮೋಹಿತ್ ಶರ್ಮ, ಆಶೀಶ್ ನೆಹ್ರಾ,

ಬದಲಿ ಆಟಗಾರರು: ಶಿವಂ ಚೌಹಾಣ್, ಶುಭಂ ಖಜುರಿಯಾ, ಮನ್ಪ್ರೀತ್ ಗೋನಿ, ಮನ್ಜೂರ್ ದಾರ್, ಮನನ್ ಶರ್ಮ, ಮಿಲಿಂದ್ ಕುಮಾರ್ (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran off-spinner Harbhajan Singh will lead a star-studded North Zone side for the Syed Mushtaq Ali inter-zonal T20 cricket tournament, slated to start in Mumbai from February 12.
Please Wait while comments are loading...