ಸುನಿಲ್ ಗವಾಸ್ಕರ್ ದಾಖಲೆ ಸಮಗೊಳಿಸಿದ ಯೂನಿಸ್

Posted By:
Subscribe to Oneindia Kannada

ಸಿಡ್ನಿ, ಜನವರಿ 05: ಪಾಕಿಸ್ತಾನದ ಹಿರಿಯ ಬ್ಯಾಟ್ಸ್ ಮನ್ ಯೂನಿಸ್ ಖಾನ್ ಅವರು ಗುರುವಾರ (ಜನವರಿ 05) ದಂದು 34ನೇ ಟೆಸ್ಟ್ ಶತಕ ಸಿಡಿಸಿದ್ದಾರೆ. ಈ ಮೂಲಕ ಸುನಿಲ್ ಗವಾಸ್ಕರ್ ಅವರ ಟೆಸ್ಟ್ ದಾಖಲೆ ಸಮಕ್ಕೆ ನಿಂತಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 39 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಯೂನಿಸ್ ಖಾನ್ ಅವರು ಸುನಿಲ್ ಗವಾಸ್ಕರ್ 34 ಟೆಸ್ಟ್ ಶತಕಗಳ ದಾಖಲೆಯನ್ನು ಸಮಗೊಳಿಸಿದ್ದಾರೆ. [ಪಂದ್ಯ ಸ್ಕೋರ್ ಕಾರ್ಡ್]

ಆಸ್ಟ್ರೇಲಿಯಾ ನೆಲದಲ್ಲಿ ಇದು ಯೂನಿಸ್ ಖಾನ್ ಅವರ ಮೊದಲ ಟೆಸ್ಟ್ ಶತಕವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಹಿರಿಯ ಆಟಗಾರರ ಪೈಕಿ ಯೂನಿಸ್ (39) ಎರಡನೇಯವರಾಗಿದ್ದಾರೆ. ಇದಕ್ಕೂ ಮುನ್ನ ಬ್ರಿಸ್ಬೇನ್ ನಲ್ಲಿ ಕ್ಲೈವ್ ಲಾಡ್ ಅವರು ತಮ್ಮ 40ನೇ ವಯಸ್ಸಿನಲ್ಲಿ ಶತಕ ಬಾರಿಸಿದ್ದರು.

Sydney Test: Younis Khan slams 34th Test century, equals Sunil Gavaskar's record

34 ಶತಕ ಬಾರಿಸಿದವರ ಪಟ್ಟಿಯಲ್ಲಿ ಗವಾಸ್ಕರ್, ಮಹೇಲ ಜಯವರ್ದನೆ ಹಾಗೂ ಬ್ರಿಯಾನ್ ಲಾರಾ ಇದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಳಿಕೆ ಹತ್ತಿರವಿರುವ ಯೂನಿಸ್ ಅವರು 114 ಪಂದ್ಯಗಳಿಂದ 9,789ರನ್ ಗಳಿಸಿದ್ದಾರೆ. 11 ರಾಷ್ಟ್ರಗಳ ವಿರುದ್ಧ 11 ಶತಕ ಗಳಿಸಿರುವ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆಯನ್ನು ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಮಾತ್ರ ಸಾಧಿಸಿದ್ದರು. ಎಲ್ಲಾ 10 ಟೆಸ್ಟ್ ಆಡುವ ರಾಷ್ಟ್ರಗಳ ವಿರುದ್ಧ ಶತಕ ಬಾರಿಸಿದ್ದರು.

ಉಳಿದಂತೆ, ಮಹೇಲ ಜಯವರ್ದನೆ (ಶ್ರೀಲಂಕಾ), ಕುಮಾರ ಸಂಗಕ್ಕಾರ (ಶ್ರೀಲಂಕಾ) ಹಾಗೂ ಮೊಹಮ್ಮದ್ ಯೂನಸ್ (ಪಾಕಿಸ್ತಾನ) ತಲಾ 10 ರಾಷ್ಟ್ರಗಳ ವಿರುದ್ಧ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Veteran Pakistan cricketer Younis Khan on Thursday (Jan 5) slammed career's 34th Test century in the third Test match against Australia at the Sydney Cricket Ground.
Please Wait while comments are loading...