ತ್ವರಿತಗತಿಯಲ್ಲಿ ಶತಕ ಸಿಡಿಸಿ ದಾಖಲೆ ಬರೆದ ವಾರ್ನರ್

Posted By:
Subscribe to Oneindia Kannada

ಸಿಡ್ನಿ, ಜನವರಿ 03: ಪಾಕಿಸ್ತಾನ ವಿರುದ್ಧ ಮಂಗಳವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ದಾಖಲೆ ಬರೆದಿದ್ದಾರೆ. ಆರಂಭ ಟೆಸ್ಟ್ ಪಂದ್ಯದ ಮೊದಲ ದಿನದ ಭೋಜನ ವಿರಾಮಕ್ಕೂ ಮೊದಲೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್

ಎಡಗೈ ಬ್ಯಾಟ್ಸ್ ಮನ್ ವಾರ್ನರ್ ಅವರು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಹಾಗೂ ವೈಯಕ್ತಿಕ 18ನೇ ಶತಕ ಬಾರಿಸಿದರು. 117 ನಿಮಿಷಗಳಲ್ಲಿ 78 ಎಸೆತಗಳಲ್ಲಿ ನೂರು ರನ್ ಗಡಿ ದಾಟಿದ ವಾರ್ನರ್ ಅವರು 17 ಬೌಂಡರಿ ಬಾರಿಸಿದರು. ನಂತರ 95 ಎಸೆತಗಳಲ್ಲಿ 113ರನ್ ಗಳಿಸಿ ವಹಾಬ್ ರಿಯಾಜ್ ಗೆ ವಿಕೆಟ್ ಒಪ್ಪಿಸಿದ್ದಾರೆ.

Sydney Test: David Warner slams ton before lunch, becomes fourth Australia batsman to do so

ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭೋಜನ ವಿರಾಮಕ್ಕೆ ಮೊದಲೇ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ವಾರ್ನರ್ ಅವರು ಈಗ ಆಸ್ಟ್ರೇಲಿಯಾದ ದಂತಕತೆ ಸರ್ ಡೊನಾಲ್ಡ್ ಬ್ರಾಡ್ಮನ್ ಕ್ಲಬ್ಬಿಗೆ ಸೇರಿಕೊಂಡಿದಾರೆ. ಬ್ರಾಡ್ಮನ್ ಅವರ ಹೆಸರಿನಲ್ಲಿದ್ದ 87 ವರ್ಷ ಹಳೆಯ ದಾಖಲೆಯನ್ನು 30 ವರ್ಷ ವಯಸ್ಸಿನ ವಾರ್ನರ್ ಸಮಗೊಳಿಸಿದ್ದಾರೆ.

1930ರಲ್ಲಿ ಲೀಡ್ಸ್ ನಲ್ಲಿ 334ರನ್ ಚೆಚ್ಚಿದ ಬ್ರಾಡ್ಮನ್ ಅವರು ಪಂದ್ಯದ ಮೊದಲ ಸೆಷನ್ ನಲ್ಲೇ ಶತಕ (105 ಎಸೆತಗಳಲ್ಲಿ)ಬಾರಿಸಿದ್ದರು.

ಉಳಿದಂತೆ 1902ರಲ್ಲಿ ಆಸ್ಟ್ರೇಲಿಯಾದ ವಿಕ್ಟರ್ ಟ್ರಂಪರ್, ಚಾರ್ಲಿ ಮೆಕಾರ್ಟ್ನಿ, ಪಾಕಿಸ್ತಾನದ ಮಜೀದ್ ಖಾನ್ 1976ರಲ್ಲಿ ಈ ಸಾಧನೆ ಮಾಡಿದ್ದಾರೆ. ವಾರ್ನರ್ ಎಸ್‌ಸಿಜಿಯಲ್ಲಿ ಎರಡನೇ ಬಾರಿ ವೇಗದ ಟೆಸ್ಟ್ ಶತಕ ಬಾರಿಸಿದರು. ವೆಸ್ಟ್‌ಇಂಡೀಸ್ ವಿರುದ್ಧ ಈ ಹಿಂದೆ ನಡೆದಿದ್ದ ಪಂದ್ಯದಲ್ಲಿ 82 ಎಸೆತಗಳಲ್ಲಿ ಶತಕ ಬಾರಿಸಿದರು.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Australia batsman David Warner on Tuesday (Jan 3) stormed his way into record books after slamming a whirlwind Test century before lunch on the opening day of third Test against Pakistan here.
Please Wait while comments are loading...