ರಣಜಿ: ಮಹಾರಾಷ್ಟ್ರದ ಕ್ರಿಕೆಟರ್ಸ್ ಗಳಿಂದ ಮಹಾನ್ ದಾಖಲೆ

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 14: ಮಹಾರಾಷ್ಟ್ರದ ಸ್ವಪ್ನಿಲ್ ಗುಗಲೆ ಹಾಗೂ ಅಂಕಿತ್ ಬಾವ್ನೆ ಶುಕ್ರವಾರದಂದು ದಾಖಲೆ ಪುಟ ಸೇರಿದ್ದಾರೆ. ರಣಜಿ ಟ್ರೋಫಿ ಇತಿಹಾಸದಲ್ಲೇ ಕಂಡು ಕೇಳರಿಯದ ಜೊತೆಯಾಟವನ್ನು ಇಬ್ಬರು ಸಾಧಿಸಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್

ಶ್ರೀಲಂಕಾದ ದಿಗ್ಗಜರಾದ ಮಹೇಲ ಜಯವರ್ದನೆ ಹಾಗೂ ಕುಮಾರ್ ಸಂಗಕ್ಕಾರ ಅವರ ವಿಶ್ವದಾಖಲೆ ಜೊತೆಯಾಟಕ್ಕಿಂತ 30ರನ್ ಮಾತ್ರ ಕಡಿಮೆ ಸ್ಕೋರ್ ಸಾಧಿಸಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ ಮಹಾರಾಷ್ಟ್ರದ ಈ ಯುವ ಆಟಗಾರರು ದೆಹಲಿ ವಿರುದ್ಧ 3ನೇ ವಿಕೆಟ್ ಗೆ 594ರನ್ ಜೊತೆಯಾಟ ಸಾಧಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಭಾರತೀಯ ಆಟಗಾರರು ಸಾಧಿಸಿದ ಅತಿ ದೊಡ್ಡ ಜೊತೆಯಾಟವಾಗಿದೆ.

Swapnil Gugale-Ankit Bawne set Ranji Trophy record with 594-run partnership

ಶ್ರೀಲಂಕಾದ ಮಹೇಲ ಜಯವರ್ದನೆ ಹಾಗೂ ಕುಮಾರ್ ಸಂಗಕ್ಕಾರ ಅವರು 2006ರಲ್ಲಿ ಕೊಲೊಂಬೊದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 624ರನ್ ಗಳ ಜೊತೆಯಾಟ ಸಾಧಿಸಿ ವಿಶ್ವ ದಾಖಲೆ ಬರೆದಿದ್ದರು.


ಸಂಗಕ್ಕಾರ 287ರನ್ ಹಾಗೂ ನಾಯಕ ಜಯವರ್ದನೆ 374ರನ್ ಗಳಿಸಿ ಲಂಕಾಗೆ ಇನ್ನಿಂಗ್ಸ್ ಹಾಗೂ 153ರನ್ ಜಯ ತಂದಿತ್ತಿದ್ದರು. [ಸ್ಕೋರ್ ಕಾರ್ಡ್ ನೋಡಿ]

'ಮಹಾ' ಜೊತೆಯಾಟ: ನಾಯಕ ಹಾಗೂ ಆರಂಭಿಕ ಆಟಗಾರ 25 ವರ್ಷ ವಯಸ್ಸಿನ ಗುಗಲೆ ಅವರು ಅಜೇಯ 351ರನ್ (521 ಎಸೆತಗಲು, 37X4, 5X6) ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ 23 ವರ್ಷ ವಯಸ್ಸಿನ ಬಾವ್ನೆ 258 ರನ್ (500 ಎಸೆತಗಳು, 18X4, 2X6) ಗಳಿಸಿದರು.

ದೆಹಲಿ ವಿರುದ್ಧ ಎರಡನೇ ದಿನದಂದು ಈ ಸಾಧನೆ ನಂತರ ತಂಡದ ಮೊತ್ತ 173 ಓವರ್ ಗಳಲ್ಲಿ 635/2 ಆಗಿದ್ದಾಗ ಡಿಕ್ಲೇರ್ ಮಾಡಿಕೊಳ್ಳಲಾಯಿತು. 8.1 ಓವರ್ ಗಳಲ್ಲಿ 41 ಸ್ಕೋರ್ ಆಗಿದ್ದಾಗ ಬಿದ್ದ 2 ವಿಕೆಟ್ ಗಳನ್ನು ನವದೀಪ್ ಸೈನಿ ಗಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Maharashtra's Swapnil Gugale and Ankit Bawne rewrote record books and came very close to erasing Sri Lankan legends Mahela Jayawardene-Kumar Sangakkara's world mark in the Ranji Trophy match here today (October 14).
Please Wait while comments are loading...