ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆತಂಕ ಸೃಷ್ಟಿಸಿದ ಬ್ಯಾಗ್!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 16 : ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಡೇಡಿಯಂ ದ್ವಾರದ ಬಳಿ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಇಂದು ಏಪ್ರಿಲ್ 16ರಂದು ರಾತ್ರಿ 8 ಗಂಟೆಗೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪುಣೆ ಸೂಪರ್ ಜೈಂಟ್ಸ್ ಪಂದ್ಯ ವೀಕ್ಷಣೆಗೆಂದು ಟಿಕೆಟ್ ಖರೀದಿಸಲು ಸರದಿ ಸಾಲಿನಲ್ಲಿ ನಿಂತಿದ್ದ ಜನರು ಗಾಬರಿಗೊಂಡಿದ್ದಾರೆ.[ಕೊಹ್ಲಿ vs ಸ್ಮಿತ್ ಪಡೆಗಳ ಹಣಾಹಣಿ, ಗೆದ್ದವರಿಗೆ ಉಳಿಗಾಲ]

Suspicious bag found in Bengaluru chinnaswamy cricket stadium

ಕೂಡಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಪರಿಶೀಲಿಸಿದ್ದಾರೆ. ಬಳಿಕ ಪ್ರತಿಕ್ರಯಿಸಿರುವ ಪೊಲೀಸರು, ಈ ಬ್ಯಾಗ್ ನಲ್ಲಿ ಆತಂಕ ಪಡುವಂತ ವಸ್ತುಗಳು ಇಲ್ಲ. ಇದರಲ್ಲಿ ಹರಿದ ಬಟ್ಟೆಗಳು ಸೇರಿದಂತೆ ಇತರೆ ಕೆಲಸಕ್ಕೆ ಬಾರದ ವಸ್ತುಗಳು ಇವೆ ಎಂದು ಹೇಳಿದ್ದಾರೆ.

ಬಿಕ್ಷುಕನೊಬ್ಬ ರಾತ್ರಿ ಇಲ್ಲಿ ಮಲಗಿ ತನ್ನ ಬ್ಯಾಗನ್ನು ಇಲ್ಲೇ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Suspicious bag found in Bengaluru Chinnaswamy cricket stadium.Ahead during the Indian Premier League 2017 between royal challengers bangalore v/s Pune.
Please Wait while comments are loading...