ಅಮಾನತಾಗಿರುವ ಸುನಿಲ್ ಗೆ ವಿಂಡೀಸ್ ತಂಡದಲ್ಲಿ ಸ್ಥಾನ!

Posted By:
Subscribe to Oneindia Kannada

ಗಯಾನಾ, ಜ.31: ವೆಸ್ಟ್ ಇಂಡೀಸ್ ಆಯ್ಕೆ ಸಮಿತಿ ಮತ್ತೊಮ್ಮೆ ಅಚ್ಚರಿ ಮೂಡಿಸಿದೆ. ಮುಂಬರುವ ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿಗೆ ಅಮಾನತುಗೊಂಡಿರುವ ಸ್ಪಿನ್ನರ್ ಸುನಿಲ್ ನಾರಾಯಣ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ನವೆಂಬರ್ ನಲ್ಲಿ ಶಂಕೆಯಾಸ್ಪದ ಬೌಲಿಂಗ್ ಶೈಲಿ ಹೊಂದಿರುವ ಕಾರಣ ಅಮಾನತುಗೊಂಡಿರುವ ಸುನಿಲ್ ಅವರು ವೆಸ್ಟ್ ಇಂಡೀಸ್ ನ 15 ಮಂದಿ ಸದಸ್ಯರ ತಂಡದಲ್ಲಿ ಸ್ಥಾನಪಡೆದಿದ್ದಾರೆ. ಈ ಹಿಂದೆ ಕಳೆದ ವರ್ಷದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲೂ ಸುನಿಲ್ ಅವರ ಹೆಸರು ಸೇರ್ಪಡೆಯಾಗಿತ್ತು. ಆದರೆ, ಕೊನೆಕ್ಷಣದಲ್ಲಿ ಹೆಸರು ಕೈ ಬಿಡಲಾಯಿತು.[ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]

27ರ ಹರೆಯದ ನರೇನ್ ಅವರು ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಸಂಶಯಾಸ್ಪದ ಬೌಲಿಂಗ್ ಶೈಲಿಯ ಕಾರಣಕ್ಕಾಗಿ ಅಮಾನತುಗೊಂಡಿದ್ದಾರೆ.

Suspended Sunil Narine in West Indies squad for World T20

ಟ್ವೆಂಟಿ-20 ವಿಶ್ವಕಪ್‌ನ ಮೊದಲು ನರೇನ್ ವಿರುದ್ಧದ ನಿಷೇಧ ತೆರವಾಗುವ ಸಾಧ್ಯತೆ ಇದೆ ಎಂದು ವಿಂಡೀಸ್‌ನ ಸಹ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. [ಶ್ರೀಲಂಕಾದಿಂದ ಭಾರತ ಪ್ರವಾಸ ಸಂಪೂರ್ಣ ವೇಳಾಪಟ್ಟಿ]

ಆಲ್‌ರೌಂಡರ್ ಡರೆನ್ ಸಮಿ ನೇತೃತ್ವದ ವಿಶ್ವದ ನಂ.1 ಸ್ಥಾನದಲ್ಲಿರುವ ವಿಂಡೀಸ್ ತಂಡದಲ್ಲಿ ಕ್ರಿಸ್ ಗೇಲ್, ಕಿರಾನ್ ಪೊಲ್ಲಾರ್ಡ್ ಹಾಗೂ ಡ್ವಾಯ್ನೆ ಬ್ರಾವೋರಂಥ ದಿಗ್ಗಜ ಆಟಗಾರರಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ ವಿಶ್ವಕಪ್ ಜಯಿಸಿದ ತಂಡದಲ್ಲಿದ್ದ ಆಟಗಾರರ ಪೈಕಿ 11 ಮಂದಿ ಆಟಗಾರರು ಈಗಿನ 15 ಮಂದಿ ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಯುಎಇಯಲ್ಲಿ ಫೆ.22ರಿಂದ ಮಾ. 7ರ ತನಕ ನಡೆಯಲಿರುವ ಪೂರ್ವ ತಯಾರಿ ಶಿಬಿರದಲ್ಲಿ ಭಾಗವಹಿಸಲಿರುವ ವಿಂಡೀಸ್ ತಂಡ ಮಾರ್ಚ್ 16ರಂದು ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವಾಡಲಿದೆ. ಇದಕ್ಕೂ ಮುನ್ನ ಕೋಲ್ಕತ್ತಾದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದ ಅವಕಾಶವಿದೆ.

ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಅರ್ಹತಾ ತಂಡದೊಂದಿಗೆ ವೆಸ್ಟ್ ಇಂಡೀಸ್ ಮೊದಲ ಗುಂಪಿನಲ್ಲಿದೆ.

ತಂಡ: ಡರೆನ್ ಸಮಿ (ನಾಯಕ), ಸ್ಯಾಮುಯೆಲ್ ಬದ್ರಿ, ಸುಲೈಮಾನ್ ಬೆನ್, ಡರನ್ ಬ್ರಾವೋ, ಆಂಡ್ರೆ ಫ್ಲೆಚೆರ್, ಕ್ರಿಸ್ ಗೇಲ್, ಜೇಸನ್ ಹೋಲ್ಡರ್, ಸುನೀಲ್ ನರೇನ್, ಕೀರನ್ ಪೊಲಾರ್ಡ್, ದಿನೇಶ್ ರಾಮ್ದಿನ್, ಅಂಡ್ರೆ ರಸ್ಸೆಲ್, ಮರ್ಲಾನ್ ಸ್ಯಾಮುಯೆಲ್ಸ್, ಲೆಂಡ್ಲ್ ಸಿಮೊನ್ಸ್, ಜೆರೊಮೆ ಟೇಲರ್. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Spinner Sunil Narine has been picked in the 15-man West Indies squad for the ICC World Twenty20 in March-April despite being suspended from bowling since November last year due to an illegal action.
Please Wait while comments are loading...