ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಾಲಿಡೇಯಲ್ಲೂ ಸುರೇಶ್ ರೈನಾ ಹಾರ್ಡ್ ವರ್ಕಿಂಗ್!

By Mahesh

ನವದೆಹಲಿ, ಆಗಸ್ಟ್ 19: ಪತ್ನಿ ಜೊತೆ ವಿಹಾರಕ್ಕಾಗಿ ಡಚ್ಚರ ನಾಡಿಗೆ ತೆರಳಿರುವ ಟೀಂ ಇಂಡಿಯಾದ ಆಟಗಾರ ಸುರೇಶ್ ರೈನಾ ಅವರು ಅಲ್ಲೂ ಕೂಡಾ ಕ್ರಿಕೆಟ್ ತರಬೇತಿ ಪಡೆದುಕೊಂಡಿದ್ದಾರೆ.

ಮುಂದಿನ ರಣಜಿ ಋತುವಿನಲ್ಲಿ ಉತ್ತಮ ಆಟ ಪ್ರದರ್ಶಿಸುವುದು ಹಾಗೂ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಮರಳುವ ಆಸೆಯೊಂದಿಗೆ ಸುರೇಶ್ ರೈನಾ ಅವರು ಕಠಿಣ ಶ್ರಮವಹಿಸುತ್ತಿದ್ದಾರೆ. ಪತ್ನಿ ಪ್ರಿಯಾಂಕಾ ಜೊತೆ ಹಾಲಿಡೇಗೆಂದು ಆಮ್ ಸ್ಟರ್ ಡ್ಯಾಮ್ ಗೆ ಬಂದಿಳಿದ ರೈನಾ ಅವರು ಡಚ್ ರಾಜಧಾನಿಯಲ್ಲೂ ಕ್ರಿಕೆಟ್ ತರಬೇತಿ ಮುಂದುವರೆಸಿದ್ದಾರೆ. [ಸುರೇಶ್ ರೈನಾ 10 ವರ್ಷದ ಸಂಭ್ರಮ, ಟ್ವೀಟ್ ಚಿಟ್ ಚಾಟ್]

Suresh Raina trains on synthetic pitches in Amsterdam

ಆಮ್ ಸ್ಟರ್ ಡ್ಯಾಮ್ ಕ್ರಿಕೆಟ್ ಕ್ಲಬ್ (ಎಸಿಸಿ) ಯ ಸಿಂಥೆಟಿಕ್ ಪಿಚ್ ಗಳಲ್ಲಿ ಒಂದು ತಿಂಗಳ ಕಾಲ ಕಠಿಣ ತರಬೇತಿ ಹೊಂದಲು ರೈನಾ ಬಯಸಿದ್ದಾರೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ 20 ವಿಶ್ವಕಪ್ ಪಂದ್ಯಕ್ಕೆ ಡಚ್ ರಾಷ್ಟ್ರೀಯ ತಂಡ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಇಲ್ಲಿ ಕ್ರಿಕೆಟ್ ಕ್ರೇಜ್ ಹೆಚ್ಚಾಗಿದೆ.

28 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು ಇತ್ತೀಚೆಗೆ ಕ್ರಿಕೆಟ್ ವೃತ್ತಿ ಬದುಕಿನ ಹತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಟೆಸ್ಟ್ ತಂಡಕ್ಕೆ ಮರಳುವ ಆಸೆ ಇದೆ ಎಂದು ಅಭಿಮಾನಿಗಳ ಜೊತೆ ಹೇಳಿಕೊಂಡಿದ್ದರು. ಈಗ ದೇಶಿ ಟೂರ್ನಿಯಲ್ಲಿ ಚೆನ್ನೈ, ಚಂಡೀಗಢ ಹಾಗೂ ಹೈದರಾಬಾದಿನಲ್ಲಿ ಪಂದ್ಯಗಳನ್ನಾಡಲಿದ್ದಾರೆ.

ಅಖಿಲ ಬುಚ್ಚಿ ಬಾಬು ಕ್ರಿಕೆಟ್ ಟೂರ್ನಿಗಾಗಿ ರೈನಾ ಸದ್ಯಕ್ಕೆ ತಯಾರಿ ನಡೆಸುತ್ತಿದ್ದು, ಡಚ್ ವೇಗಿ ಪಾಲ್ ವಾನ್ ಮೀಕೆರನ್ ಅವರು ರೈನಾ ಅವರಿಗೆ ನೆರವು ನೀಡುತ್ತಿದ್ದಾರೆ. ಇಲ್ಲಿನ ಸೌಲಭ್ಯಗಳು ಉತ್ತಮವಾಗಿದೆ ಎಂದು ಡಚ್ ಕ್ರಿಕೆಟ್ ಬೋರ್ಡ್ (ಕೆಎನ್ ಸಿಬಿ) ಹಾಗೂ ಆಮ್ ಸ್ಟರ್ ಡ್ಯಾಮ್ ಕ್ಲಬ್ ಗೆ ರೈನಾ ಅವರು ಧನ್ಯವಾದ ಅರ್ಪಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಕಳೆದ ಜೂನ್ ನಲ್ಲಿ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 40,34 ಹಾಗೂ 38 ಮಾತ್ರ ಗಳಿಸಿದ್ದರು. (ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X