ಗೆಲ್ಲುವುದಕ್ಕೆ ಮುಂಚೆ ಸಂಭ್ರಮಿಸಿದ ರಹೀಮ್‌ಗೆ ರೈನಾ ಪಂಚ್

Subscribe to Oneindia Kannada

ಬೆಂಗಳೂರು, ಮಾರ್ಚ್, 24: "ಪಂದ್ಯದ ಕೊನೆಯವರೆಗೂ ಪ್ರಯತ್ನ ಬಿಡಬಾರದು, ಅಲ್ಲದೆ ಗೆಲ್ಲುವುದಕ್ಕೂ ಮುಂಚೆ ಸಂಭ್ರಮಿಸುವುದು ಸರಿ ಅಲ್ಲ" ಎಂದು ಸುರೇಶ್ ರೈನ್ ಬಾಂಗ್ಲಾದ ರಹೀಮ್ ಕಾಲೆಳೆದಿದ್ದಾರೆ. ರೋಚಕ ಜಯದ ನಂತರ ಟ್ವೀಟ್ ಮಾಡಿರುವ ರೈನಾ ಕುಣಿದು ಸಂಭ್ರಮಿಸಿದ್ದ ರಹೀಮ್ ಗೆ ತಿರುಗೇಟು ನೀಡಿದ್ದಾರೆ.

ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶಕ್ಕೆ ಬೇಕಾಗಿದ್ದದ್ದು 11 ರನ್. ಕ್ರೀಸ್ ನಲ್ಲಿದ್ದ ರಹೀಮ್ ಎರಡು ಮತ್ತು ಮೂರನೇ ಚೆಂಡನ್ನು ಬೌಂಡರಿಗೆ ಅಟ್ಟಿದ್ದರು. ಎರಡನೇ ಬೌಂಡರಿಯನ್ನು ಬಾರಿಸಿದ ತಕ್ಷಣ ರಹೀಮ್ ಪಂದ್ಯ ಗೆದ್ದಂತೆ ಸಂಭ್ರಮಿಸಿದ್ದರು. ಆಗ ಬಾಂಗ್ಲಾ ದೇಶಕ್ಕೆ ಗೆಲ್ಲಲು ಮೂರು ಎಸೆತಗಳಲ್ಲಿ ಎರಡು ರನ್ ಬೇಕಿತ್ತು.[ಕೊನೆ ಓವರ್ ನಲ್ಲಿ ಪಾಂಡ್ಯಾಗೆ ಧೋನಿ ನೀಡಿದ್ದ ಸಲಹೆ ಏನು?]

 Suresh Raina to Mushfiqur Rahim: 'Don't celebrate before you win'

ನಂತರ ಆಗಿದ್ದು ಮ್ಯಾಜಿಕ್ , ಪಂದ್ಯ ಭಾರತದ ಪರ ಒಲಿಯಿತು. ಪಾಂಡ್ಯಾ ನಾಲ್ಕು ಮತ್ತು ಐದನೇ ಚೆಂಡಿನಲ್ಲಿ ವಿಕೆಟ್ ಕಬಳಿಸಿದರು. ಅಂತಿಮವಾಗಿ ಬಾಂಗ್ಲಾಕ್ಕೆ ಒಂದು ಎಸೆತದಲ್ಲಿ ಎರಡು ರನ್ ಬೇಕಾಯಿತು ಆದರೆ ವಿಜಯ ಭಾರತದ ಪಾಲಾಯಿತು.[ವಿಶ್ವ ಟಿ20: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ರೋಚಕ ಜಯ]

ಪಂದ್ಯ ಮುಗಿದ್ ನಂತರ ಟ್ವೀಟ್ ಮಾಡಿರುವ ಸುರೇಶ್ ರೈನಾ, ಪಂದ್ಯದ ಕೊನೆಯವರೆಗೂ ಪ್ರಯತ್ನ ಬಿಡಬಾರದು, ಅಲ್ಲದೆ ಗೆಲ್ಲುವುದಕ್ಕೂ ಮುಂಚೆ ಸಂಭ್ರಮಿಸುವುದು ಸರಿ ಅಲ್ಲ ಎಂದು ಬಾಂಗ್ಲಾದ ರಹೀಮ್ ಕಾಲೆಳೆದಿದ್ದಾರೆ. ಭಾರತ ಮಾರ್ಚ್ 27ರಂದು ಆಸ್ಟ್ರೇಲಿಯಾವನ್ನು ಎದುರಿಸಲಿದ್ದು ಉಪಾಂತ್ಯದ ಹಾದಿ ಅಂದೇ ಪಕ್ಕಾ ಆಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian batsman Suresh Raina has taken a swipe at Bangladesh's Mushfiqur Rahim for his premature celebrations during their match at ICC World Twenty20 here last night (March 23).
Please Wait while comments are loading...