ರೈನಾ ಬೊಂಬಾಟ್, ಉತ್ತರ ಪ್ರದೇಶಕ್ಕೆ ಟಿ20 ಟ್ರೋಫಿ

Posted By:
Subscribe to Oneindia Kannada

ಮುಂಬೈ, ಜ.20: ನಾಯಕ ಸುರೇಶ್ ರೈನಾ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಉತ್ತರ ಪ್ರದೇಶ ತಂಡ ಚೊಚ್ಚಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಗೆ ಮುತ್ತಿಟ್ಟಿದೆ. ಎರಡು ಬಾರಿ ಚಾಂಪಿಯನ್ ಬರೋಡಾ ತಂಡವನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ 38ರನ್ ಗಳಿಂದ ಸೋಲಿಸಿದ ಉತ್ತರಪ್ರದೇಶ ವಿಜಯೋತ್ಸವ ಆಚರಿಸಿದೆ.

ಲೀಗ್ ಹಂತ ಹಾಗೂ ಸೂಪರ್ ಲೀಗ್ ಹಂತದಲ್ಲಿ ಒಮ್ಮೆ ಕೂಡಾ ಸೋಲು ಕಾಣದ ರೈನಾ ಪಡೆ ಸತತ 9 ಪಂದ್ಯಗಳನ್ನು ಜಯಿಸಿತು. ಉತ್ತರಪ್ರದೇಶ ಪರ ಪ್ರಶಾಂತ್ ಗುಪ್ತಾ 41 ಎಸೆತಗಳಲ್ಲಿ 49ರನ್, ಸುರೇಶ್ ರೈನಾ ಅಜೇಯ 47 ರನ್( 37 ಎಸೆತ, 2 ಬೌಂಡರಿ, 2 ಸಿಕ್ಸರ್) ಮೂಲಕ 20 ಓವರ್ ಗಳಲ್ಲಿ 163/7 ಸ್ಕೋರ್ ಮಾಡಿತು.

Suresh Raina shines as Uttar Pradesh win Syed Mushtaq Ali Trophy

ಬರೋಡಾ ತಂಡ 84/5 ಸ್ಕೋರ್ ಮಾಡಿ ಸಂಕಷ್ಟಕ್ಕೆ ಸಿಲುಕಿ ಮತ್ತೆ ಚೇತರಿಸಿಕೊಳ್ಳಲಿಲ್ಲ. ಕೊನೆಗೆ 125/7 ಸ್ಕೋರ್ ನೊಂದಿಗೆ ಸೋಲೊಪ್ಪಿಕೊಂಡಿತು. ಚೈನಾ ಮನ್ ಬೌಲರ್ ಕುಲದೀಪ್ ಯಾದವ್ 2/12 ಪಡೆದರು.

ಉತ್ತರಪ್ರದೇಶ: 7 ವಿಕೆಟ್​ ನಷ್ಟಕ್ಕೆ 163 (ಪ್ರಶಾಂತ್ ಗುಪ್ತಾ 49, ರೈನಾ ಅಜೇಯ 47, ಪೀಯುಷ್ 17, ಭಾರ್ಗವ್ ಭಟ್ 13ಕ್ಕೆ 2, ಇರ್ಫಾನ್ ಪಠಾಣ್ 44ಕ್ಕೆ 1, ಹಾರ್ದಿಕ್ ಪಾಂಡ್ಯಾ 26ಕ್ಕೆ 1).

ಬರೋಡ: 7 ವಿಕೆಟ್​ಗೆ 125 (ಕೇದಾರ್ ದೇವಧರ್ 19, ಹಾರ್ದಿಕ್ ಪಾಂಡ್ಯಾ 13, ದೀಪಕ್ ಹೂಡಾ 15, ಯೂಸುಫ್ ಪಠಾಣ್ 14, ಸೋಯೆಬ್ ತೈ 26*, ಇರ್ಫಾನ್ ಪಠಾಣ್ 10, ಅಂಕಿತ್ 30ಕ್ಕೆ 3, ಅಮಿತ್ ಮಿಶ್ರಾ 33ಕ್ಕೆ 2, ಕುಲ್​ದೀಪ್ 12ಕ್ಕೆ 2).
(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uttar Pradesh clinched their maiden Mushtaq Ali T20 Trophy with a thumping 38-run win over two- time champions Baroda in the final under lights at the Wankhede Stadium here on Jan. 20.
Please Wait while comments are loading...