ಕಿವೀಸ್ ವಿರುದ್ಧದ ಮೊದಲ ಒಡಿಐಗೆ ರೈನಾ ಅಲಭ್ಯ!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13 : ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಈಗ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಈ ನಡುವೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಪ್ರಕಟಿಸಿದೆ.

ಟೆಸ್ಟ್ ಸರಣಿಯನ್ನು 3-0 ಅಂತರದಿಂದ ವಿರಾಟ್ ಕೊಹ್ಲಿ ನೇತೃತದ ಭಾರತ ತಂಡ ಗೆದ್ದುಕೊಂಡಿದೆ. ಈಗ ಕಿವೀಸ್ ವಿರುದ್ಧ ಐದು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. [ಧೋನಿಗೆ 3 ದಾಖಲೆ ಮುರಿಯುವ ಚಾನ್ಸ್]

Suresh Raina ruled out of 1st ODI against New Zealand


ಅಕ್ಟೋಬರ್ 16 (ಭಾನುವಾರ) ರಂದು ಧರ್ಮಶಾಲಾದಲ್ಲಿ ಮೊದಲ ಪಂದ್ಯ ನಡೆಯಲಿದೆ. ಮೊದಲ ಮೂರು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರೈನಾ ಕೂಡಾ ತಂಡದಲ್ಲಿದ್ದಾರೆ. [ಏಕದಿನ ಸರಣಿ ವೇಳಾಪಟ್ಟಿ]

ಆದರೆ, ಈಗ ಜ್ವರದಿಂದ ಬಳಲುತ್ತಿರುವ ರೈನಾ ಅವರಿಗೆ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಭಾನುವಾರದ ಉದ್ಘಟನಾ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದರೆ, ರೈನಾ ಬದಲಿಗೆ ಯಾರನ್ನು ಆಯ್ಕೆ ಮಾಡುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ. [3 ಏಕದಿನ ಪಂದ್ಯಕ್ಕೆ ಭಾರತ ತಂಡ ಪ್ರಕಟ]

ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಅವರು 15 ಮಂದಿ ತಂಡದಿಂದ ರೈನಾ ಹೊರತುಪಡಿಸಿ ಆಡುವ XI ಆಯ್ಕೆ ಮಾಡಬೇಕಿದೆ.[ಏಕದಿನ ಸರಣಿಗೆ ಕೋರೆ ಆಂಡರ್ಸನ್]

29 ವರ್ಷ ವಯಸ್ಸಿನ ರೈನಾ ಅವರು ಭಾರತದ ಪರ 223 ಏಕದಿನ ಪಂದ್ಯಗಳನ್ನಾಡಿದ್ದು, ಕಿವೀಸ್ ಸರಣಿಗಾಗಿ ತಂಡಕ್ಕೆ ಮರಳಿದಿದ್ದಾರೆ.

ಅಕ್ಟೋಬರ್ 25, 2015 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮುಂಬೈನಲ್ಲಿ ಕೊನೆಯ ಪಂದ್ಯವನ್ನಾಡಿದ್ದರು ನಂತರ ಆಸ್ಟ್ರೇಲಿಯಾ(ಜನವರಿ 2016) ಹಾಗೂ ಜಿಂಬಾಬ್ವೆ (ಜೂನ್ 2016) ಸರಣಿ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಯುಎಸ್ಎನಲ್ಲಿ ನಡೆದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ರೈನಾ ಅಲಭ್ಯರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's middle order batsman Suresh Raina was today (October 13) ruled out of the first One Day International against New Zealand due to viral fever, the Board of Control for Cricket in India (BCCI) announced.
Please Wait while comments are loading...