ಸಿಹಿ ಸುದ್ದಿ ನಿರೀಕ್ಷೆಯಲ್ಲಿ ಸುರೇಶ್ ರೈನಾ ದಂಪತಿ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 20 : ಐಪಿಎಲ್ ಸೀಸನ್ 9 ನಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿ ಭರ್ಜರಿ ಲಯದಲ್ಲಿರುವ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಅವರು ಮತ್ತೊಂದು ಖುಷಿಯಲ್ಲಿದ್ದಾರೆ. ಹೌದು, ರೈನಾ ಅವರ ಮಡದಿ ಪ್ರಿಯಾಂಕಾ ಚೌಧರಿ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಸದ್ಯ ಹಾಲೆಂಡ್ ನಲ್ಲಿರುವ ಪ್ರಿಯಾಂಕಗೆ ಜನ್ಮ ನೀಡುವ ಮೊದಲೇ ಬೇಬಿ ಡಾಲ್ ನ್ನು ಆರೈಕೆ ಮಾಡುವ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. [ತಾತ್ಕಾಲಿಕ ಬ್ರೇಕ್ ಪಡೆದ ಗೇಲ್]

Suresh Raina, Priyanka Chaudhary expecting their first child

ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಿಯಾಂಕಾ ಮುಂದೆ ತಮ್ಮ ಮಗುವನ್ನು ಯಾವ ರೀತಿಯಲ್ಲಿ ಆರೈಕೆ ಮಾಡಬೇಕೆಂದು ಅಭ್ಯಾಸ ಮಾಡಿಕೊಳ್ಳುತ್ತಿರುವ ಫೋಟೊವೊಂದನ್ನು ರೈನಾ ಇನ್ಸ್ ಟಾಗ್ರಾಮ್ ನಲ್ಲಿ ಹರಿಬಿಟ್ಟು ತಾವು ತಂದೆ ಆಗುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರೈನಾ ನಾನು ಸಧ್ಯದಲ್ಲಿಯೇ ತಂದೆಯಾಗುತ್ತಿದ್ದೇನೆ ಹಾಗಾಗಿ ಮುಂದಿನ ತಿಂಗಳು ಮಗುವನ್ನು ನೋಡಲು ಹಾಲೆಂಡ್ ಗೆ ತೆರಳುತ್ತಿದ್ದೇನೆ. ಈಗಾಗಲೇ ನನ್ನ ತಾಯಿ ಹಾಲೆಂಡ್ ನಲ್ಲಿ ಇದ್ದಾರೆ ಪ್ರಿಯಾಂಕರನ್ನು ಆರೈಕೆ ಮಾಡುತ್ತಿದ್ದಾರೆಂದು ರೈನಾ ತಿಳಿಸಿದ್ದಾರೆ.

Priyanka Chaudhary

ಇತ್ತೀಚೆಗಷ್ಟೇ ಸುರೇಶ್ ರೈನಾ ಹಾಗೂ ಪ್ರಿಯಾಂಕಾ ಚೌಧರಿ ದಂಪತಿ ತಮ್ಮ ಮೊದಲನೆ ವರ್ಷದವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian cricketer Suresh Raina revealed the news on Instagram confirming that the baby is due next month. Raina is currently busy leading the Gujarat Lions in the Indian Premier League (IPL) while his wife, Priyanka Chowdhary, is currently in Holland.
Please Wait while comments are loading...