ರೈನಾ ದಂಪತಿ ಚೊಚ್ಚಲ ಮಗು ಹೆಸರು ಶ್ರೇಯಾಂಶಿಯೇ?

Posted By:
Subscribe to Oneindia Kannada

ನವದೆಹಲಿ, ಮೇ 15: ಟೀಂ ಇಂಡಿಯಾ ಆಟಗಾರ, ಐಪಿಎಲ್ 9ರಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಅವರಿಗೆ ಶನಿವಾರ(ಮೇ 14) ಹೆಣ್ಣು ಮಗು ಜನಿಸಿದೆ ಎಂಬ ಸುದ್ದಿ ಹಬ್ಬಿದೆ. ರೈನಾ ಹಾಗೂ ಪ್ರಿಯಾಂಕಾ ದಂಪತಿಗೆ ಹಾಲೆಂಡ್ ನಲ್ಲಿ ಹೆಣ್ಣು ಮಗು ಜನಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬಿದೆ. ಆದರೆ, ಇನ್ನೂ ಸಿಹಿ ಸುದ್ದಿಗಾಗಿ ಕಾಯುತ್ತಿದ್ದೇನೆ ಎಂದು ರೈನಾ ಹೇಳಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ರೈನಾ ಆವರ ಪತ್ನಿ ಪ್ರಿಯಾಂಕಾ ಹೆಣ್ಣುಮಗುವಿಗೆ ಜನ್ಮನೀಡಿದ್ದು, ರೈನಾ ಅವರ ಮಗುವಿಗೆ ಸಾಮಾಜಿಕ ಜಾಲ ತಾಣಗಳು ಶ್ರೇಯಾಂಶಿ ಎಂದು ಹೆಸರಿಟ್ಟು ಸುದ್ದಿ ಹಬ್ಬುವಂತೆ ಮಾಡಿವೆ. ಆದರೆ, ಈ ಬಗ್ಗೆ ರೈನಾ ಕುಟುಂಬದವರಾಗಲಿ, ರೈನಾ ಅವರಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ.

Suresh Raina, Priyanka become parents to a baby girl

ಹಾಲೆಂಡ್‌ನಲ್ಲಿರುವ ಪ್ರಿಯಾಂಕಾ ಅವರ ಆರೈಕೆಗಾಗಿ ರೈನಾ ಹಾಗೂ ಅವರ ಕುಟುಂಬ ಸದಸ್ಯರು ಇತ್ತೀಚೆಗೆ ಹಾಲೆಂಡ್‌ಗೆ ತೆರಳಿದ್ದರು. ರೈನಾ ಅವರು ಇದೇ ಕಾರಣಕ್ಕೆ ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು. [ಎಬಿಡಿ-ಕೊಹ್ಲಿ ನಿರ್ಮಿಸಿದ ದಾಖಲೆಗಳತ್ತ ಒಂದು ನೋಟ]

ಕಾನ್ಪುರದಲ್ಲಿ ಗುರುವಾರ ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೂ ರೈನಾ ಗೈರು ಹಾಜರಾಗುವ ಸಾಧ್ಯತೆ ಕಂಡು ಬಂದಿದೆ.


ಸತತ ಪಂದ್ಯಗಳನ್ನಾಡಿರುವ ದಾಖಲೆ ಹೊಂದಿರುವ ರೈನಾ ಅವರು ಇದೇ ಮೊದಲ ಬಾರಿಗೆ ಈ ರೀತಿ ಐಪಿಎಲ್ ಟೂರ್ನಿ ಮಧ್ಯೆದಲ್ಲೇ ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದಾರೆ.

ಮೇ 13ರಂದು ಕೊನೆ ಬಾರಿ ರೈನಾ ಅವರು ಟ್ವೀಟ್ ಮಾಡಿದ್ದಾರೆ. ರೈನಾ ಅವರ ಮಗು ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕರೆ ನಿಮ್ಮ ಮುಂದಿಡುತ್ತೇವೆ.

ಸುರೇಶ್ ರೈನಾ ಹಾಗೂ ಪ್ರಿಯಾಂಕಾ ಚೌಧರಿ ದಂಪತಿ ತಮ್ಮ ಮೊದಲನೆ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ ತಿಂಗಳಿನಲ್ಲಿ ಆಚರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian cricketer Suresh Raina and wife Priyanka on Saturday, reportedly, became parents to a baby girl. Though there is no official declaration from the cricketer but reports on social media claimed they have named their daughter Shreyanshi Raina.
Please Wait while comments are loading...