ಐಪಿಎಲ್ ನಿಂದ ರೈನಾಗೆ ತಾತ್ಕಾಲಿಕ ಬ್ರೇಕ್ ಏಕೆ?

Posted By:
Subscribe to Oneindia Kannada

ಬೆಂಗಳೂರು, ಮೇ 10: ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಅವರು ಐಪಿಎಲ್ 9ರಿಂದ ತಾತ್ಕಾಲಿಕ ಬ್ರೇಕ್ ಪಡೆದು ಹಾಲೆಂಡ್ ಗೆ ಹಾರಲಿರುವ ಸುದ್ದಿ ಬಂದಿದೆ. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಪಂದ್ಯಗಳನ್ನಾಡಿ ದಾಖಲೆ ಬರೆದಿರುವ ರೈನಾ ಅವರು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕಳೆದ 8 ಆವೃತ್ತಿಗಳಲ್ಲಿ ಸಿಎಸ್​ಕೆ ತಂಡದ ಪ್ರತಿ ಪಂದ್ಯ ಆಡಿದ್ದ ರೈನಾ, ಈ ವರ್ಷ ಲಯನ್ಸ್ ತಂಡದ ಪರವಾಗಿಯೂ ಕಳೆದ 11 ಪಂದ್ಯಗಳಲ್ಲಿ ಆಡಿದ್ದಾರೆ. ಇದರಿಂದ ಐಪಿಎಲ್​ನಲ್ಲಿ ಸತತ 143 ಪಂದ್ಯ ಆಡಿದ ವಿಶಿಷ್ಟ ದಾಖಲೆ ಅವರದಾಗಿದೆ. 33.48ರನ್ ಸರಾಸರಿಯಂತೆ 3,985ರನ್ ಗಳಿಸಿದ್ದಾರೆ. [ಸಿಹಿ ಸುದ್ದಿ ನಿರೀಕ್ಷೆಯಲ್ಲಿ ಸುರೇಶ್ ರೈನಾ ದಂಪತಿ]

Suresh Raina may break his IPL attendance record for pregnant wife, to fly for Holland

ಆದರೆ, ಇದೀಗ ಭಾನುವಾರ ಕೋಲ್ಕತದಲ್ಲಿ ಕೆಕೆಆರ್ ವಿರುದ್ಧ ಪಂದ್ಯದ ನಂತರ ಐಪಿಎಲ್ ತೊರೆದು ನೆದರ್ಲೆಂಡ್ ಗೆ ಹಾರಿದ್ದಾರೆ. ಪತ್ನಿ ಗರ್ಭಿಣಿ ಪತ್ನಿ ಪ್ರಿಯಾಂಕಾ ಚೌಧರಿ ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ನ್ನಡೆಯಲಿರುವ ಆರ್​ಸಿಬಿ ವಿರುದ್ಧದ ಮುಂದಿನ ಪಂದ್ಯವನ್ನು ರೈನಾ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. [ಮುದ್ದಾದ ಮಗು ಜತೆ ರವೀಂದ್ರ ಜಡೇಜ]

'ನಾನು ನಾಳೆ ಪತ್ನಿಯನ್ನು ಭೇಟಿಯಾಗುವ ಸಲುವಾಗಿ ನೆದರ್ಲೆಂಡ್​ಗೆ ತೆರಳಲಿದ್ದೇನೆ. ಅತ್ಯಂತ ಕಾತರದಲ್ಲಿದ್ದೇನೆ' ಎಂದು ಲಯನ್ಸ್ ತಂಡದ ಗೆಲುವಿನ ಬಳಿಕ ಈಡನ್ ಗಾರ್ಡನ್ಸ್​ನಲ್ಲಿ 29 ವರ್ಷದ ರೈನಾ ಹೇಳಿದ್ದರು. ಇದಕ್ಕೂ ಮುನ್ನ 'ಹ್ಯಾಪಿ ಮದರ್ಸ್ ಡೇ. ಅಮ್ಮ ಮತ್ತು 'ಭವಿಷ್ಯದ ಅಮ್ಮ'ನನ್ನು ನೋಡಲು ಕಾಯುತ್ತಿದ್ದೇನೆ' ಎಂದು ಟ್ವೀಟಿಸಿದ್ದರು.

ಕಳೆದ ವರ್ಷ ಏಪ್ರಿಲ್​ನಲ್ಲಿ ರೈನಾ-ಪ್ರಿಯಾಂಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮುಂದಿನ ಕೆಲ ದಿನಗಳಲ್ಲಿ ಪ್ರಿಯಾಂಕಾ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India batsman Suresh Raina holds the record for not missing an Indian Premier League (IPL) match since its inception in 2008 but the left hander may finally miss a game as he is expecting the birth of his first child in Holland.
Please Wait while comments are loading...