ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಷೇಧಾಜ್ಞೆ ವೇಳೆ ಭಾರತ್ ಮಾತಾ ಕೀ ಜೈ ಎಂದ ಮಹಿಳೆಗೆ ರೈನಾ ಶ್ಲಾಘನೆ

ಶ್ರೀನಗರದಲ್ಲಿ ದಿಟ್ಟತನ ಪ್ರದರ್ಶಿಸಿದ ಮಹಿಳೆ ಬಗ್ಗೆ ಕ್ರಿಕೆಟಿಗ ಸುರೇಶ್ ರೈನಾ ಮೆಚ್ಚುಗೆ. ಸ್ವಾತಂತ್ರ್ಯೋತವ ದಿನದಂದು ನಿಷೇಧಾಜ್ಞೆ ನಡುವೆ ಬೀದಿಗಿಳಿದು ಭಾರತ್ ಮಾತಾ ಕೀ ಜೈ ಎಂದಿದ್ದ ಕಾಶ್ಮೀರಿ ಪಂಡಿತ ಸಮುದಾಯದ ಮಹಿಳೆ.

ನವದೆಹಲಿ, ಆಗಸ್ಟ್ 16: ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿಯಿರುವ ಹೊತ್ತಿನಲ್ಲಿ ರಸ್ತೆಯಲ್ಲಿ ನಿಂತು ಪೊಲೀಸರ ಆಕ್ಷೇಪದ ಹೊರತಾಗಿಯೂ 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗಿದ್ದ ಕಾಶ್ಮೀರಿ ಪಂಡಿತ ಸಮುದಾಯದ ಮಹಿಳೆಯೊಬ್ಬಳನ್ನು ಸುರೇಶ್ ರೈನಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀಲಂಕಾದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜ ಹಾರಿಸಿದ ಟೀಂ ಇಂಡಿಯಾಶ್ರೀಲಂಕಾದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜ ಹಾರಿಸಿದ ಟೀಂ ಇಂಡಿಯಾ

ಶ್ರೀನಗರದ ಪ್ರತ್ಯೇಕತಾವಾದಿಗಳ ಎಚ್ಚರಿಕೆಯ ನಡುವೆಯೂ ಬೀದಿಗಿಳಿದ ಈ ಮಹಿಳೆ ಶ್ರೀನಗರದ ಲಾಲ್ ಚೌಕ್ ಬಳಿ, ಧೈರ್ಯದಿಂದ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು. ಹಾಗಾಗಿ, ರೈನಾ ಅವರು ಈ ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Suresh Raina lauds woman for raising ‘‘Bharat Mata ki jai” chants in Kashmir

ದೇಶದ ಎಲ್ಲೆಡೆ ಮಂಗಳವಾರ (ಆಗಸ್ಟ್ 15) ಸ್ವಾತಂತ್ರ್ಯೋತ್ಸವದ ಸಂಭ್ರಮ, ಸಡಗರ ಮನೆ ಮಾಡಿದ್ದರೆ, ಅತ್ತ ಕಾಶ್ಮೀರದಲ್ಲಿ ಬಿಗುವಿನ ವಾತಾವರಣವಿತ್ತು. ರಾಜಧಾನಿಯಾದ ಶ್ರೀನಗರದ ಬಾಂಕಿ ಕ್ರೀಡಾಂಗಣದಲ್ಲಿ ಸರ್ಕಾರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತಾದರೂ ಗಣ್ಯ ವ್ಯಕ್ತಿಗಳಿಗೆ ಹಾಗೂ ಕೆಲವೇ ಕೆಲವು ನಾಗರಿಕರು ಮಾತ್ರ ಆಗಮಿಸಿದ್ದರು.

ಇದಕ್ಕೆ ಕಾರಣ, ಕಾಶ್ಮೀರದ ಪ್ರತ್ಯೇಕತವಾದಿಗಳು ಭಾರತದ ಸ್ವಾತಂತ್ರ್ಯೋತ್ಸವವನ್ನು ಬಹಿಷ್ಕರಿಸಿದ್ದು. ಹಾಗಾಗಿ, ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಸ್ತೆಗಳು ಬಿಕೋ ಎನ್ನುವಂತಿದ್ದವು.

ಕಾಶ್ಮೀರದ ಪ್ರತ್ಯೇಕತಾವಾದಿಗಳ ಗುಟುರಿಗೆ ಸೊಪ್ಪು ಹಾಕದ ಕಾಶ್ಮೀರಿ ಪಂಡಿತರ ಮಹಿಳೆಯೊಬ್ಬರು ರಸ್ತೆಗಿಳಿದು ಒಂದೇ ಸಮನೆ 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗಲಾರಂಭಿಸಿದರು. ಪೊಲೀಸರೂ ತಬ್ಬಿಬ್ಬಾದರು. ಪೊಲೀಸರು ಬೇಡವೆಂದು ಮನವಿ ಮಾಡಿದರೂ, ಆ ಮಹಿಳೆ ಮಾತ್ರ ತಮ್ಮ ಘೋಷಣೆಯನ್ನು ಮುಂದುವರಿಸಿದ್ದರು.

ಇದರ ವಿಡಿಯೋವೊಂದನ್ನು ಬ್ಯಾಟ್ಸ್ ಮನ್ ಎಂಬ ವ್ಯಕ್ತಿಯು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವೀಡಿಯೋ ವೈರಲ್ ಆಗಿದೆ. ಸುರೇಶ್ ರೈನಾಗೂ ಇದು ಮೆಚ್ಚುಗೆಯಾಗಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X