ಕೋಟ್ಲಾ ಮೈದಾನದಲ್ಲಿ ಅಭ್ಯಾಸಕ್ಕೆ ಬಂದ ಸುರೇಶ್ ರೈನಾ

Written By: Ramesh
Subscribe to Oneindia Kannada

ನವದೆಹಲಿ, ಅಕ್ಟೋಬರ್. 19 :ಜ್ವರದಿಂದ ಬಳಲುತ್ತಿರುವ ಸುರೇಶ್ ರೈನಾ ಮಂಗಳವಾರ ಮಧ್ಯಾಹ್ನ ಕೋಟ್ಲಾ ಮೈದಾನದಲ್ಲಿ ನೆಟ್ಸ್ ನಲ್ಲಿ ಸುಮಾರು 45 ನಿಮಿಷಗಳ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಆದರೆ ಆಯಾಸದಿಂದ ಮೈದಾನದಿಂದ ಹೊರ ನಡೆದರು.

ಜ್ವರದಿಂದ ಬಳಲುತ್ತಿರುವ ಅವರನ್ನು ಧರ್ಮಶಾಲಾದಲ್ಲಿ ನಡೆದಿದ್ದ ಮೊದಲ ಪಂದ್ಯದಿಂದಲೂ ಕೈಬಿಡಲಾಗಿತ್ತು. ಇನ್ನು ಅವರಿಗೆ ಫಿಟ್ ನೆಸ್ ಕೊರತೆ ಕಾಡುತ್ತಿದೆ. ಇದಿರಂದ ಅಕ್ಟೋಬರ್ 20 (ಗುರುವಾರ)ರಂದು ದೆಹಲಿಯ ಫಿರೋಜ್ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಎರಡನೇ ಪಂದ್ಯಕ್ಕೂ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತಿಳಿಸಿದೆ. [ಕಿವೀಸ್ ವಿರುದ್ಧದ ಮೊದಲ ಒಡಿಐಗೆ ರೈನಾ ಅಲಭ್ಯ!]

Raina

ಅಕ್ಟೋಬರ್ 6 ರಿಂದ ಹೈದರಾಬಾದ್‌ನಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ತಂಡಗಳ ನಡುವಣ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಅವರು ಆಡಬೇಕಿತ್ತು. ಆ ಸಂದರ್ಭದಲ್ಲಿಯೇ ವೈರಲ್ ಜ್ವರದಿಂದ ಬಳಲಿದ್ದ ಅವರು ಮನೆಗೆ ಮರಳಿದ್ದರು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಏಕದಿನ ಪಂದ್ಯದಲ್ಲಿ ಅವರು ಆಡಿದ್ದರು. ಅದರ ನಂತರ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ. ನ್ಯೂಜಿಲೆಂಡ್ ಎದುರಿನ ಮೊದಲ ಮೂರು ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು.

ಆದರೆ ದುರದೃಷ್ಟ ಅವರಿಗೆ ಜ್ವರ ಎಡಬಿಡದೆ ಕಾಡುತ್ತಿರುವುದರಿಂದ ಎರಡು ಏಕದಿನ ಪಂದ್ಯಗಳಿಂದ ದೂರ ಉಳಿಯಬೇಕಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Recovering from a bout of viral fever, Suresh Raina was on Tuesday (Oct 18) back in the nets but will miss India's second one-dayer against New Zealand after the Team management felt that he is still not fit.
Please Wait while comments are loading...