ಅನುರಾಗ್ ಠಾಕೂರ್ ವಜಾ, ಟ್ವಿಟ್ಟರ್ ನಲಿ ಮಿಶ್ರ ಪ್ರತಿಕ್ರಿಯೆ

Posted By:
Subscribe to Oneindia Kannada

ನವದೆಹಲಿ, ಜನವರಿ 02: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ಅವರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಗೊಳಪಟ್ಟಿದೆ.

ನ್ಯಾ. ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗಳನ್ನು ವಿಫಲವಾದ ಹಿನ್ನಲೆಯಲ್ಲಿ ಅನುರಾಗ್ ಠಾಕೂರ್ ಹಾಗೂ ಅಜಯ್ ಶಿರ್ಕೆ ಅವರನ್ನು ಅವರ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಇಬ್ಬರಿಗೂ ನೋಟಿಸ್ ಜಾರಿಗೊಳಿಸಲಾಗಿದೆ. [ಬಿಸಿಸಿಐ ಅಧ್ಯಕ್ಷಗಿರಿ: ಗಂಗೂಲಿಗೆ ಗವಾಸ್ಕರ್ ಬೆಂಬಲ]

ಹಾಲಿ ಉಪಾಧ್ಯಕ್ಷ ಸ್ಥಾನದಲ್ಲಿರುವ ಹಿರಿಯರೊಬ್ಬರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. [ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ವಜಾ]

ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಪಾರದರ್ಶಕತೆ ತರಲು ಕೋರ್ಟ್ ಯತ್ನಿಸುತ್ತಿರುವುದರ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರೂ, ಕ್ರಿಕೆಟ್ ಮಂಡಳಿಯನ್ನು ನಿವೃತ್ತ ಜಡ್ಜ್ ಗಳು, ವಕೀಲರು ಹೇಗೆ ನಿಭಾಯಿಸಬಲ್ಲರು ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಠಾಕೂರ್ ಅವರನ್ನು ವಜಾಗೊಳಿಸಿದ ಸುದ್ದಿಯ ಬಗ್ಗೆ ಬಂದಿರುವ ಪರ -ವಿರೋಧ ಪ್ರತಿಕ್ರಿಯೆಗಳನ್ನು ಮುಂದೆ ಓದಿ.....

 ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ

ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ಅವರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಗೊಳಪಟ್ಟಿದೆ.

ಕಾಮೆಂಟೆಟರ್ ಹರ್ಷಭೋಗ್ಲೆ ಪ್ರತಿಕ್ರಿಯೆ

ಕ್ರಿಕೆಟ್ ಕಾಮೆಂಟೆಟರ್ ಹರ್ಷಭೋಗ್ಲೆ ಪ್ರತಿಕ್ರಿಯೆ ನೀಡಿ, ಕ್ರಿಕೆಟ್ ನಲ್ಲಿ ಇಂಥದ್ದೊಂದು ಘಟನೆ ಬಗ್ಗೆ ನಾನು ಕಂಡಿಲ್ಲ, ಇದೊಂದು ಕ್ರಾಂತಿಕಾರಿ ಬದಲಾವಣೆ, ಸುನಾಮಿಗೆ ಮುನ್ನ ಸಮುದ್ರ ಶಾಂತವಾಗಿರುವಂಥ ಪರಿಸ್ಥಿತಿ ಇದೆ. ಕಾದು ನೋಡೋಣ ಎಂದಿದ್ದಾರೆ.

ಕ್ರಿಕೆಟ್ ವಿಶ್ಲೇಷಕ ಅಯಾಜ್ ಅವರ ವಿಶ್ಲೇಷಣೆ

ಅನುರಾಗ್ ಠಾಕೂರ್ ಹಾಗೂ ಅಜಯ್ ಶಿರ್ಕೆ ಇಬ್ಬರನ್ನು ಅಮಾನತುಗೊಳಿಸಿರುವುದು ಬಹುದೊಡ್ಡ ನಿರ್ಣಯ ಎಂದಿದ್ದಾರೆ.

ವರ್ಷಾರಂಭದಲ್ಲಿ ಇದು ಶುಭ ಸುದ್ದಿಯಲ್ಲ

ವರ್ಷಾರಂಭದಲ್ಲಿ ಇದು ಶುಭ ಸುದ್ದಿಯಲ್ಲ, ಬಿಸಿಸಿಐ ಕಥೆ ಏನಾಗುವುದೋ ನೋಡೋಣ.

ರಾಹುಲ್ ಕನ್ವಲ್ ಅವರ ಪ್ರತಿಕ್ರಿಯೆ

ಬಿಸಿಸಿಐನ ಪ್ರಮುಖ ಅಧಿಕಾರಿಗಳ ಅಮಾನತು ಅಚ್ಚರಿಯ ಸುದ್ದಿಯಾಗಿದ್ದು, ಈ ಬಗ್ಗೆ ಮೂರನೇ ಅಂಪೈರ್ ರಿವ್ಯೂ ಇಲ್ವ ಎಂದು ಚಟಾಕಿ ಹಾರಿಸಿದ್ದಾರೆ.

ಸ್ಪಾಟ್ ಫಿಕ್ಸಿಂಗ್ ಕೇಸ್ ಹೋಗಿ ಏನೋ ಆಯ್ತು

ಸ್ಪಾಟ್ ಫಿಕ್ಸಿಂಗ್ ಕೇಸ್ ಹೋಗಿ ಏನೋ ಆಯ್ತು, ಎನ್ ಶ್ರೀನಿವಾಸನ್ ನಂತರ ಅನುರಾಗ್ ಠಾಕೂರ್ ಸ್ಥಾನ ಹೋಯ್ತು

ಬಾಕಿ ಉಳಿದ ಕೇಸುಗಳಿಗೆ ಜಡ್ಜ್ ನೇಮಿಸಲಿ

ಬಾಕಿ ಉಳಿದ ಕೇಸುಗಳಿಗೆ ಜಡ್ಜ್ ನೇಮಿಸಲಿ, ಅದನ್ನು ಬಿಟ್ಟು ಕ್ರಿಕೆಟ್ ನಿಯಂತ್ರಣ ಮಾಡಲು ಮುಂದಾಗಿರುವುದು ಎಷ್ಟು ಸರಿ?

ಅಚ್ಚರಿ ವ್ಯಕ್ತಪಡಿಸಿದ ಅಭಿಮಾನಿಗಳು

ಅಚ್ಚರಿ ವ್ಯಕ್ತಪಡಿಸಿದ ಅಭಿಮಾನಿಗಳು, ಕೋರ್ಟಿನಿಂದ ಎಲ್ಲವನ್ನು ನಿಭಾಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Who said what on Twitter: Giving a massive setback to the Board of Control for Cricket in India (BCCI), the Supreme Court on Monday (January 2) sacked its president Anurag Thakur and secretary Ajay Shirke.
Please Wait while comments are loading...