ಆಶೀಶ್ ನೆಹ್ರಾಗೆ ಗಾಯ, ಐಪಿಎಲ್ 9 ನಿಂದ ಔಟ್ !

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 19 : ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಬೌಲಿಂಗ್ ಟ್ರಂಪ್ ಕಾರ್ಡ್ ವೇಗಿ ಆಶೀಶ್ ನೆಹ್ರಾ ಗಾಯಗೊಂಡಿದ್ದಾರೆ. ಇದರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಹೊರ ಬಿದ್ದಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮೇ 15 ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನೆಹ್ರಾ ಅವರು ಗಾಯಗೊಂಡಿದ್ದಾರೆ.ಸ್ನಾಯು ಸೆಳೆತಕ್ಕೆ ಒಳಗಾಗಿರುವ ಅವರಿಗೆ ಮೂರರಿಂದ ನಾಲ್ಕು ವಾರಗಳು ವಿಶ್ರಾಂತಿ ಅವಶ್ಯವಿದೆ ಎಂದು ಹೈದ್ರಾಬಾದ್ ತಂಡದ ಮೂಲಗಳು ಈ ಬಗ್ಗೆ ಮಾಹಿತಿ ನೀಡಿದೆ.[ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ನೆಹ್ರಾ?]

Sunrisers Hyderabad's Ashish Nehra ruled out of IPL 2016

ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಅನುಭವಿ ವೇಗದ ಬೌಲರ್ ಆಶೀಶ್ ನೆಹ್ರಾ ಅವರು ಸ್ನಾಯುಸೆಳೆತಕ್ಕೆ ಒಳಗಾಗಿ ಕೊನೆಗಳಿಗೆಯಲ್ಲಿ ಐಪಿಎಲ್ 2016 ಟೂರ್ನಿಯಿಂದ ಹೊರ ಹೋಗಿದ್ದಾರೆ. ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದ ನೆಹ್ರಾ ಅವರನ್ನು ಕಳೆದುಕೊಂಡು ಸನ್ ರೈಸರ್ಸ್ ಸಂಕಷ್ಟಕ್ಕೆ ಸಿಲುಕುವಂತಾಗಿದೆ. [ಐಪಿಎಲ್ 2016 : ಹೊರ ಹೋದ ಆಟಗಾರರ ಪಟ್ಟಿ]

ಐಪಿಎಲ್ 9 ನಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ತಂಡಗಳಿಗೆ ಮಣ್ಣು ಮುಕ್ಕಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಾರ್ನರ್ ಪಡೆ ಉತ್ತಮ ವಿಕೆಟ್ ಟೇಕರ್ ಆಗಿರುವ ನೆಹ್ರಾ ಅವರನ್ನು ಕಳೆದುಕೊಳಬೇಕಾಗಿದೆ. 37 ವರ್ಷದ ನೆಹ್ರಾ ಐಪಿಲ್ 2016 ನಲ್ಲಿ ಆಡಿದ 8 ಪಂದ್ಯಗಳಲ್ಲಿ 7.65 ಎಕಾನಮಿಯಲ್ಲಿ 9 ವಿಕೆಟ್ ಕಬಳಿಸಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sunrisers Hyderabad (SRH) were dealt a huge blow today (May 19) as senior left-arm pacer Ashish Nehra was ruled out of ongoing the Indian Premier League (IPL 9) after sustaining a hamstring tendon injury which also put serious a question mark on his future in competitive cricket.
Please Wait while comments are loading...