ನರೇನ್‌ಗೆ ಕ್ಲೀನ್ ಚೀಟ್, ಮತ್ತೆ ಮಾಡಲಿದ್ದಾರೆ ಸ್ಪಿನ್ ಮೋಡಿ

By: ರಮೇಶ್ ಬಿ
Subscribe to Oneindia Kannada

ನವದೆಹಲಿ, ಏಪ್ರಿಲ್ 09 : ಸಂಶಯಾಸ್ಪದ ಬೌಲಿಂಗ್ ವಿವಾದಕ್ಕೆ ಸಿಲುಕಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಿದ್ದ ವೆಸ್ಟ್ ವಿಂಡೀಸ್ ತಂಡದ ಸ್ಪಿನ್ ಮಾಂತ್ರಿಕ ಸುನೀಲ್ ನರೇನ್ ಅವರಿಗೆ ಐಸಿಸಿ ಕ್ಲೀನ್ ಚೀಟ್ ನೀಡಿದೆ. ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲು ಒಪ್ಪಿಗೆ ನೀಡಿದೆ.

2015ರಲ್ಲಿ ಸಂಶಯಾಸ್ಪದ ಬೌಲಿಂಗ್‌ನಿಂದಾಗಿ ಸುನೀಲ್ ನರೇನ್ ಅವರಿಗೆ ಐಸಿಸಿ ನಿ‍‍ಷೇಧ ಹೇರಲಾಗಿತ್ತು. ಈಗ ಕ್ರಿಕೆಟ್ ಆಡಲು ಒಪ್ಪಿಗೆ ಸಿಕ್ಕಿದೆ. ಐಪಿಎಲ್ 9ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡಲಿರುವ ಅವರು ತಮ್ಮ ಸ್ಪಿನ್ ಮೋಡಿ ಮಾಡಲಿದ್ದಾರೆ. ಸುನೀಲ್ ಆಗಮನದಿಂದಾಗಿ ತಂಡಕ್ಕೂ ಆನೆ ಬಲ ಬಂದಿದೆ. [2016ರ ಐಪಿಎಲ್ ಉದ್ಘಾಟನೆ ಚಿತ್ರಗಳು]

sunil narine

ಸುನೀಲ್ ತಮ್ಮ ಸ್ಪಿನ್ ಮೋಡಿಯ ಮೂಲಕ 8ನೇ ಆವೃತ್ತಿಯ ಐಪಿಲ್‌ನಲ್ಲಿ 20 ವಿಕೆಟ್ ಪಡೆದಿದ್ದರು. ಆದರೆ, ಸಂಶಯಾಸ್ದದ ಬೌಲಿಂಗ್ ಶೈಲಿಯಿಂದಾಗಿ ಭಾರತದಲ್ಲಿ ನಡೆದ ವಿಶ್ವ ಟಿ-20 ಪಂದ್ಯದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. [ಸುನಿಲ್ ಕೈ ಕಟ್ಟಿ ಹಾಕಿದ ಬಿಸಿಸಿಐ]

ಇದುವರೆಗೂ 55 ಏಕದಿನ ಪಂದ್ಯಗಳನ್ನು ಆಡಿರುವ ನರೇನ್ ಅವರು 77 ವಿಕೆಟ್‌ ಕಬಳಿಸಿದ್ದಾರೆ. 27ರನ್‌ಗೆ 5 ವಿಕೆಟ್ ಇವರ ಬೆಸ್ಟ್ ಬೌಲಿಂಗ್ ಆಗಿದೆ. [ಸುನಿಲ್ 'ಸೂಪರ್' ವಿಶ್ವದಾಖಲೆ]

ಏಪ್ರಿಲ್ 9ರ ಶನಿವಾರದಿಂದ ಐಪಿಎಲ್ 9ನೇ ಆವೃತ್ತಿಯ ಪಂದ್ಯಗಳು ಆರಂಭವಾಗಲಿವೆ. ಇಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪುಣೆ ಸೂಪರ್ ಜೆಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. [ಪಿಟಿಐ ಚಿತ್ರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The off-spinner Sunil Narine now resume bowling in both international cricket and domestic cricket events worldwide. The International Cricket Council (ICC) has confirmed that following remedial work and retest, the bowling action of the West Indies' Sunil Narine has been found to be legal.
Please Wait while comments are loading...