ಫ್ಲೋರಿಡಾ ಮೈದಾನದಲ್ಲಿ ಗವಾಸ್ಕರ್ ಗೆ ನೋ ಎ೦ಟ್ರಿ ಏಕೆ?

Posted By:
Subscribe to Oneindia Kannada

ಲಾಡರ್ ಹಿಲ್, ಆಗಸ್ಟ್ 30: ಭಾರತದ ಕ್ರಿಕೆಟ್ ದಿಗ್ಗಜ, ಹಾಲಿ ಕಾಮೆಂಟೆಟರ್ ಸುನೀಲ್ ಗಾವಸ್ಕರ್ ಅವರಿಗೆ ಫ್ಲೋರಿಡಾಡ ಲಾಡರ್ ಹಿಲ್ ಮೈದಾನದಲ್ಲಿ ಅಪಮಾನವಾದ ಘಟನೆ ನಡೆದಿದೆ. ಟಿ20 ಸರಣಿ ವೇಳೆ ಮೈದಾನದ ಭದ್ರತಾ ಸಿಬ್ಬ೦ದಿ ಸ್ಟೇಡಿಯ೦ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.

ಭಾರತ- ವೆಸ್ಟ್ ಇಂಡೀಸ್ ತ೦ಡಗಳ ನಡುವಿನ 2ನೇ ಟಿ20 ಪ೦ದ್ಯದ ವೇಳೆ ಈ ಪ್ರಸಂಗ ನಡೆದಿದೆ. ಸೆ೦ಟ್ರಲ್ ಬ್ರೋವಾಡ್‍೯ ರೀಜನಲ್ ಪಾಕ್‍೯ ಸ್ಟೇಡಿಯನೊಳಗೆ ಪ್ರವೇಶಿಸಲು ಸುನಿಲ್ ಗವಾಸ್ಕರ್ ಅವರು ಬರುವಾಗ ಭದ್ರತಾ ಸಿಬ್ಬ೦ದಿ ಅನುಮತಿ ನೀಡಲಿಲ್ಲ.[ಧೋನಿಯ ಬೆಸ್ಟ್ ಫಿನಿಷಿಂಗ್ ಮ್ಯಾಚ್ ಗಳು]

Sunil Gavaskar stopped outside USA stadium: Security says 'don't care who the hell he is'

ಗಾವಸ್ಕರ್ ರನ್ನು ಗುರುತಿಸಿದ ಅಲ್ಲಿದ್ದ ಅಭಿಮಾನಿಗಳು ಅವರ ಪ್ರಖ್ಯಾತಿಯ ಬಗ್ಗೆ ಹೇಳಿದರೂ ಸಿಬ್ಬಂದಿ ಜಗ್ಗಲಿಲ್ಲ. ಬಳಿಕ ಟೀಮ್ ಇ೦ಡಿಯಾ ಬಸ್ ಬ೦ದ ನ೦ತರ ಒಳ ಪ್ರವೇಶಿಸಿದರು.[ಟಿ20 ಸರಣಿ ಗೆದ್ದ ವೆಸ್ಟ್ ಇಂಡೀಸ್]

ಆದರೆ, ಈ ಘಟನೆಯಿಂದ ವಿಚಲಿತರಾಗದ 67 ವರ್ಷ ವಯಸ್ಸಿನ ಸುನಿಲ್ ಗವಾಸ್ಕರ್ ಅವರು ಅಭಿಮಾನಿಗಳ ಜತೆ ಸೆಲ್ಫಿ ತೆಗೆದುಕೊಂಡು ಕಾಲ ಕಳೆದಿದ್ದಾರೆ. ಅಮೆರಿಕದಲ್ಲಿ ಭದ್ರತಾ ವ್ಯವಸ್ಥೆ ಕಠಿಣವಾಗಿರುವ ಕಾರಣ ಈ ರೀತಿ ಘಟನೆ ನಡೆದಿದೆ.

ಸರಿಯಾದ ಕಾರ್ಡ್ ಇಲ್ಲದ ಕಾರಣ ಅದು ಯಾರೇ ಆಗಲಿ ನಾನು ಅವರನ್ನು ಮೈದಾನದೊಳಗೆ ಬಿಡುವುದಿಲ್ಲ ಎಂದು ಸಿಬ್ಬಂದಿ ಅಲ್ಲಿದ್ದ ಅಭಿಮಾನಿಗಳಿಗೆ ಹೇಳಿದ್ದಾರೆ. ಗವಾಸ್ಕರ್ ಅವರು ಕೂಡಾ ಸಿಬ್ಬಂದಿಯ ಮಾತಿಗೆ ತಲೆದೂಗಿದ್ದಾರೆ.

ಆದರೆ, ಮಳೆಯ ಕಾರಣ ಪಂದ್ಯ ರದ್ದಾಗಿ, ಭಾರತ ವಿರುದ್ಧ ವೆಸ್ಟ್ ಇಂಡೀಸ್ 0-1 ಅಂತರದಲ್ಲಿ ಟೆಸ್ಟ್ ಸರಣಿ ತನ್ನದಾಗಿಸಿಕೊಂಡಿತು.ಇದೆಲ್ಲ ಒಂದು ಮಳೆಯೇ, ಇದಕ್ಕಿಂತ ಕಳಪೆ ಸೌಲಭ್ಯವಿರುವ ಪ್ರತಿಕೂಲ ಹವಾಮಾನದಲ್ಲೂ ನಾನು ಕ್ರಿಕೆಟ್ ಆಡಿದ್ದೇನೆ. ಇಲ್ಲೂ ಆಡಬಹುದಾಗಿತ್ತು. ವೆಸ್ಟ್ ಇಂಡೀಸ್ ತಂಡದಲ್ಲೇನು ಶೋಯಿಬ್ ಅಖ್ತರ್ ರಂಥ ಬಿರುಗಾಳಿ ವೇಗಿಗಳಿರಲಿಲ್ಲ ಎಂದು ಧೋನಿ ಅವರು ಪಂದ್ಯದ ನಂತರ ಪ್ರತಿಕ್ರಿಯಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Legendary India cricketer Sunil Gavaskar was denied entry by the security guards during the second T20 International match between India and West Indies at Central Broward Regional Park Stadium Turf Ground in USA.
Please Wait while comments are loading...