ಕ್ರಿಕೆಟ್ ಆಡಲು ದೇಶವನ್ನೇ ತೊರೆಯಲು ಸಿದ್ಧ ಎಂದ ಶ್ರೀಶಾಂತ್

Posted By:
Subscribe to Oneindia Kannada
ಕ್ರಿಕೆಟ್ ಆಡಲು ದೇಶವನ್ನೇ ತೊರೆಯಲು ಸಿದ್ದ ಎಂದ ಶ್ರೀಶಾಂತ್ | Oneindia Kannada

ನವದೆಹಲಿ, ಅಕ್ಟೋಬರ್ 20 : ಮತ್ತೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲು ಹಾತೊರೆಯುತ್ತಿರುವ ಭಾರತದ ಮಾಜಿ ವೇಗಿ ಎಸ್. ಶ್ರೀಶಾಂತ್ ದೇಶವನ್ನೇ ತೊರೆಯಲು ಮುಂದಾಗಿದ್ದಾರೆ.

ಶ್ರೀಶಾಂತ್ ಕ್ರಿಕೆಟ್ ಆಡುವ ಆಸೆಗೆ ತಣ್ಣೀರು

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಆಜೀವ ನಿಷೇಧಕ್ಕೆ ಒಳಗಾಗಿರುವ ಕೇರಳ ವೇಗಿ ಎಸ್. ಶ್ರೀಶಾಂತ್ ಬೇರೆ ದೇಶದ ಕ್ರಿಕೆಟ್ ತಂಡದ ಪರವಾಗಿ ಆಡುವ ಸುಳಿವು ನೀಡಿದ್ದಾರೆ.

Stung by life ban, S Sreesanth hints he might play for another country

ಬಿಸಿಸಿಐ ಆಜೀವ ನಿಷೇಧವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿರುವುದರಿಂದ ಆಕ್ರೋಶಗೊಂಡಿರುವ ಶ್ರೀಶಾಂತ್, 'ಬಿಸಿಸಿಐ ಮಾತ್ರ ನನಗೆ ನಿಷೇಧ ಹೇರಿದೆ. ಐಸಿಸಿ ಯಾವುದೇ ನಿಷೇಧ ಹೇರಿಲ್ಲ. ಹೀಗಾಗಿ ನಾನು ಬೇರೆ ಯಾವುದೇ ದೇಶದ ಪರ ಆಡುವ ಸ್ವಾತಂತ್ರ್ಯ ಹೊಂದಿರುವುದಾಗಿ' ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಸಿಸಿಐ ನನ್ನ ಮೇಲೆ ನಿಷೇಧ ಹೇರಿದೆ. ಐಸಿಸಿ ಅಲ್ಲ. ಹಾಗಾಗಿ ಯಾವುದೇ ದೇಶದ ಪರ ನಾನು ಆಡಬಲ್ಲೆ. 34ರ ಹರೆಯದ ನಾನು ಗರಿಷ್ಠ ಆರು ವರ್ಷ ಆಡುವ ಸಾಮರ್ಥ್ಯ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

2013ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Stung by the lifetime ban imposed by the Board of Control for Cricket in India (BCCI) that was recently held by Kerala High Court, S Sreesanth has hinted he might spend the rest of his playing career turning out for another country.
Please Wait while comments are loading...