ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾದ 9 ವರ್ಷದ ಯಶಸ್ಸಿಗೆ ಬ್ರೇಕ್ ಹಾಕಿದ ಭಾರತ

By Mahesh

ನಾಗ್ಪುರ, ನ.27: ವಿದೇಶದ ನೆಲಗಳಲ್ಲಿ ಸತತವಾಗಿ 10 ಟೆಸ್ಟ್ ಸರಣಿ ಗೆದ್ದ ದಾಖಲೆ ಹೊಂದಿರುವ ದಕ್ಷಿಣ ಆಫ್ರಿಕಾದ ಯಶಸ್ಸಿನ ನಾಗಲೋಟಕ್ಕೆ ಟೀಂ ಇಂಡಿಯಾ ಬ್ರೇಕ್ ಹಾಕಿದೆ.. ನ.25ರಿಂದ ಇಲ್ಲಿನ ವಿಸಿಎ ಸ್ಟೇಡಿಯಂನಲ್ಲಿ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 124ರನ್ ಗಳ ಅಂತರದ ಜಯ ದಾಖಲಿಸಿದೆ.

ಈ ಗೆಲುವಿನ ಮೂಲಕ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಕೊನೆಯ ಟೆಸ್ಟ್ ಪಂದ್ಯ ಡಿಸೆಂಬರ್ 3ರಂದು ದೆಹಲಿಯಲ್ಲಿ ನಡೆಯಲಿದೆ. [ಐತಿಹಾಸಿಕ ಟೆಸ್ಟ್ ಪಂದ್ಯದ ಭಾಗವಾದ ಇಂಡಿಯನ್]

14 ಟೆಸ್ಟ್ ಸರಣಿ ಪೈಕಿ 10 ಟೆಸ್ಟ್ ಸರಣಿ ಗೆದ್ದು ಹೊಸ ದಾಖಲೆ ಬರೆದ ದಕ್ಷಿಣ ಆಫ್ರಿಕಾದ ಗೆಲುವಿನ ನಾಗಾಲೋಟಕ್ಕೆ ವಿರಾಟ್ ಕೊಹ್ಲಿ ಪಡೆ ಬ್ರೇಕ್ ಹಾಕಿದೆ.

2006ರಲ್ಲಿ ಶ್ರೀಲಂಕಾ ವಿರುದ್ಧ 0-2ರಲ್ಲಿ ಸರಣಿ ಗೆದ್ದ ದಕ್ಷಿಣ ಆಫ್ರಿಕಾ ಇಲ್ಲಿ ತನಕ ಯಾವುದೇ ಟೆಸ್ಟ್ ಸರಣಿಯನ್ನು ವಿದೇಶದಲ್ಲಿ ಸೋತಿರಲಿಲ್ಲ. ಮೊಹಾಲಿ ಟೆಸ್ಟ್ ಪಂದ್ಯವನ್ನು 108ರನ್ ಗಳಿಂದ ದಕ್ಷಿಣ ಆಫ್ರಿಕಾ ಕಳೆದುಕೊಂಡಿತ್ತು. ಬೆಂಗಳೂರಿನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯ ಮಳೆಗೆ ಆಹುತಿಯಾಗಿ ಡ್ರಾನಲ್ಲಿ ಅಂತ್ಯ ಕಂಡಿತು.

India end World No. 1 South Africa's 9-year unbeaten Test run

ಈ ಹಿಂದಿನ ಪ್ರವಾಸದಲ್ಲೂ ದಕ್ಷಿಣ ಆಫ್ರಿಕಾ ಹೆಚ್ಚಿನ ಸಾಧನೆ ತೋರಿರಲಿಲ್ಲ. 2007-08 (ಮೂರು ಟೆಸ್ಟ್ ಸರಣಿ) ಹಾಗೂ 2009-10 (2 ಟೆಸ್ಟ್ ಪಂದ್ಯಗಳ ಸರಣಿ) ಎರಡರಲ್ಲೂ ಭಾರತದೊಡನೆ 1-1ರಲ್ಲಿ ಸರಣಿ ಸಮವಾಗಿತ್ತು. [ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 124 ರನ್ ಗಳ ಜಯ]

1999-00ರಲ್ಲಿ ಹ್ಯಾನ್ಸಿ ಕ್ರೋನಿಯೇ ನಾಯಕತ್ವದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ತಂಡ ಮಾತ್ರ ಗೆಲುವು ಸಾಧಿಸಿದೆ. 1996-97(1-2 ಮೂರು ಟೆಸ್ಟ್ ಸರಣಿ), 2004-05ರಲ್ಲಿ (0-1 ಎರಡು ಟೆಸ್ಟ್ ಗಳ ಸರಣಿ) ಸೋಲು ಕಂಡಿದ್ದರೆ 2007-08 ಹಾಗೂ 2009-10ರಲ್ಲಿ ಡ್ರಾ ಸಾಧಿಸಿತ್ತು.

ಭಾರತದ ಸಾಧನೆ: ಈ ಹಿಂದೆ ಆಸ್ಟ್ರೇಲಿಯಾದ 16 ಜಯಗಳ ನಾಗಾಲೋಟಕ್ಕೆ ಟೀಂ ಇಂಡಿಯಾ ಎರಡು ಬಾರಿ ಬ್ರೇಕ್ ಹಾಕಿತ್ತು. ಈಗ ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸಿದೆ. ಆದರೆ, ಅತಿ ಹೆಚ್ಚು ಅವಧಿ ಯಶಸ್ಸಿನ ಅಲೆಯಲ್ಲಿ ತೇಲಿದ ಅನುಭವ ಮಾತ್ರ ಇಂದಿಗೂ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲೇ ಇದೆ. ಪ್ರವಾಸಿ ತಂಡವಾಗಿ ವೆಸ್ಟ್ ಇಂಡೀಸ್ 18 ಪಂದ್ಯ ಸೋಲು ಕಾಣದೆ ಉಳಿದು 16 ವರ್ಷಗಳ ಕಾಲ ಕ್ರಿಕೆಟ್ ಲೋಕವನ್ನು ಆಳ್ವಿಕೆ ಮಾಡಿತ್ತು.

ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾ ತಂಡ 2001ರಲ್ಲಿ 15 ಟೆಸ್ಟ್ ಪಂದ್ಯಗಳ ಗೆಲುವು ದಾಖಲಿಸಿತ್ತು. ಅದರೆ, ಭಾರತ ತಂಡ ಲಕ್ಷ್ಮಣ್ ಅವರ 281ರನ್ ಹಾಗೂ ದ್ರಾವಿಡ್ ಅವರ 180ರನ್ ಮತ್ತು ಹರ್ಭಜನ್ ಅವರ 13 ವಿಕೆಟ್ ನೆರವಿನಿಂದ ಆಸೀಸ್ ಗೆ ಮಣ್ಣುಮುಕ್ಕಿಸಿತ್ತು. 2008ರಲ್ಲಿ ಅನಿಲ್ ಕುಂಭ್ಳೆ ತಂಡ ಪರ್ತ್ ನಲ್ಲಿ 72ರನ್ ಗಳ ಜಯ ದಾಖಲಿಸಿ ಆಸೀಸ್ ನ ದಾಖಲೆ ಜಯದ ಓಟವನ್ನು ನಿಲ್ಲಿಸಿತ್ತು.

ಈಗ ನಾಗ್ಪುರ ಟೆಸ್ಟ್ ನಲ್ಲಿ 310ರನ್ ಚೇಸ್ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ತಂಡ 185ರನ್ ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿದೆ. ಈ ಮೂಲಕ ದಕ್ಷಿಣ ಆಫ್ರಿಕಾದ ದಾಖಲೆಯ ಜಯದ ಓಟ ನಿಂತಿದೆ.

Longest Unbeaten Streak in an away series in Tests
No Of Series Streak Broken By No of Years
West Indies 18 Australia 16
South Africa 15 India 09
England 10 India 10
Australia 08 West Indies 09
Australia 07 England 20
Australia 07 England 05

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X