ಸ್ಟೀವ್ ವಾ ಮಗನ ಭರ್ಜರಿ ಆಟ ನೋಡಿ, ಆನಂದಿಸಿ

Posted By:
Subscribe to Oneindia Kannada

ಬ್ರಿಸ್ಬೇನ್, ಆಕ್ಟೋಬರ್ 06: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ, ಮಾಜಿ ನಾಯಕ ಸ್ಟೀವ್ ವಾ ಅವರ ಮಗ ಅಸ್ಟೀನ್ ವಾ ಅವರು ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ. ಭರ್ಜರಿ ಶತಕ ಬಾರಿಸುವ ಮೂಲಕ ನ್ಯೂ ಸೌತ್ ವೇಲ್ಸ್ ತಂಡಕ್ಕೆ ಜಯ ತಂದಿತ್ತಿದ್ದಾರೆ.

ಆಸ್ಟೀನ್ ವಾ ಅವರ 122ರನ್ ನೆರವಿನಿಂದ ನ್ಯೂ ಸೌತ್ ವೇಲ್ಸ್ ತಂಡ ಅಕ್ಟೋಬರ್ 6ರಂದು ಅಂಡರ್ 17 ನ್ಯಾಷನಲ್ ಚಾಂಪಿಯನ್ ಗೆದ್ದುಕೊಂಡಿದೆ.

Steve Waugh's son Austin hits ton as NSW Metro win title

ಬಲಗೈ ಬ್ಯಾಟ್ಸ್ ಮನ್ ಆಸ್ಟೀನ್ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು 4 ಬೌಂಡರಿ, 4 ಸಿಕ್ಸರ್ ಬಾರಿಸಿ ಅಮೋಘ ಶತಕ ಗಳಿಸಿದರು. ಆಸ್ಟೀನ್ ಹಾಗೂ ಐಡೆನ್ ಬಾರಿಯಲ್ (85) 5ನೇ ವಿಕೆಟ್ ಗೆ 199ರನ್ ಜೊತೆಯಾಟ ಸಾಧಿಸಿದರು.

ಈ ಮೂಲಕ ಗುರುವಾರ ನಡೆದ ಅಲಾನ್ ಬಾರ್ಡರ್ ಫೀಲ್ಡ್ ಪಂದ್ಯದಲ್ಲಿ ಕ್ವೀನ್ಸ್ ಲ್ಯಾಂಡ್ ವಿರುದ್ಧ ನ್ಯೂ ಸೌತ್ ವೇಲ್ಸ್ ಜಯ ದಾಖಲಿಸಿತು.

ಜ್ಯೂನಿಯರ್ ವಾ ಶತಕದ ಸಹಾಯದಿಂದ ನ್ಯೂ ಸೌತ್ ವೇಲ್ಸ್ ಮೆಟ್ರೋ 274/6, 50 ಓವರ್ಸ್ ಗಳಲ್ಲಿ ಸ್ಕೋರ್ ಮಾಡಿತು.

ಕ್ವೀನ್ಸ್ ಲ್ಯಾಂಡ್ ತಂಡ 34.1 ಓವರ್ ಗಳಲ್ಲಿ 122 ಸ್ಕೋರಿಗೆ ಆಲೌಟ್ ಆಯಿತು. ಈ ಮೂಲಕ 152ರನ್ ಗಳ ಭರ್ಜರಿ ಜಯ ಗಳಿಸಿತು.

ಈ ಟೂರ್ನಿಯಲ್ಲಿ 8 ಇನ್ನಿಂಗ್ಸ್ ನಲ್ಲಿ 74.4 ರನ್ ಸರಾಸರಿಯಲ್ಲಿ 372ಗಳಿಸಿರುವ ಜ್ಯೂನಿಯರ್ ವಾ ಅವರು 5 ಕ್ಯಾಚ್ ಗಳನ್ನು ಹಿಡಿದು ಗಮನ ಸೆಳೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Australian captain Steve Waugh's 16-year-old son Austin Waugh scored an unbeaten 122 to propel New South Wales Metro to the Under-17 National Championships title here at the Allan Border Field today (October 6).
Please Wait while comments are loading...