ಡಕ್ ವರ್ಥ್ ಲೂಯಿಸ್ ನಿಯಮ ಸರಿ ಇಲ್ಲ: ಸ್ಟೀಫನ್ ಫ್ಲೇಮಿಂಗ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲ್ಕತ್ತಾ, ಮೇ 16: ಪುಣೆ ಸೂಪರ್ ಜೈಂಟ್ಸ್ ತಂಡದ ಕೋಚ್ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಡಕ್ ವರ್ತ್ ಲೂಯಿಸ್ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಈ ಡಕ್ ವರ್ತ್ ನಿಯಮ ಅಸಂಬದ್ಧವಾಗಿದೆ ಎಂದಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮೇ 14 ರಂದು ಕೋಲ್ಕತ್ತಾ ನಲ್ಲಿ ನಡೆದ ಪುಣೆ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯದ ವೇಳೆಯಲ್ಲಿ ವರುಣನ ಅಡ್ಡಿಯಿಂದಾಗಿ ಪುಣೆಗೆ ಡಕ್ ವರ್ತ್ ನಿಯಮ ಮಾರಕವಾಗಿತ್ತು. ಇದರಿಂದ ಕೋಚ್ ಪ್ಲೇಮಿಂಗ್ ನಿಯಮವನ್ನು ವಿರೋಧಿಸಿದ್ದಾರೆ.[ಪಂದ್ಯದ ಸ್ಕೋರ್ ಕಾರ್ಡ್]

ಪುಣೆ 17.4 ಓವರ್ ಗಳಲ್ಲಿ 103/6 ಗಳಿಸಿ ಆಡುತ್ತಿರುವ ಸಂದರ್ಭದಲ್ಲಿ ಮಳೆ ಅಡ್ಡಿಪಡಿಸಿತ್ತು. ಕೊನೆ ಮೂರು ಓವರ್ ಗಳಲ್ಲಿ 25 ರನ್ ಗಳನ್ನು ಗಳಿಸಿ 135 ರನ್ ಗಳ ಟಾರ್ಗೆಟ್ ನೀಡಿ ಕೋಲ್ಕತ್ತಾವನ್ನು ನಮ್ಮ ತಂಡದ ಸ್ಪಿನ್ನರ್ ಗಳು ಕಟ್ಟಿಹಾಕುತ್ತಿದ್ದರು. ಆದರೆ, ಡಕ್ ವರ್ತ್ ನಿಯಮದಿಂದಾಗಿ ಪುಣೆ ಸೋಲಬೇಕಾಯಿತು ಎಂದು ನಿಯಮ ವಿರುದ್ಧ ಆಕ್ರೋಶಗೊಂಡಿದ್ದಾರೆ.

Stephen Fleming calls D/L method 'rubbish', wants change in T20 rain-rule,

ಡಕ್ ವರ್ತ್ ಲೂಯಿಸ್ ನಿಯಮದಡಿ ಕೋಲ್ಕತ್ತಾ ತಂಡಕ್ಕೆ 9 ಓವರ್ ಗಳಲ್ಲಿ 66 ರನ್ ಗುರಿ ನೀಡಲಾಗಿತ್ತು. ಯೂಸೂಫ್ ಪಠಾಣ್ 18 ಎಸೆತಗಳಲ್ಲಿ 37 ರನ್ ಗಳ ಅಕ್ರಮಣಕಾರಿ ಆಟದಿಂದ ಕೋಲ್ಕತ್ತಾ ಆ ಪಂದ್ಯದಲ್ಲಿ ಜಯಗಳಿಸಿತ್ತು.[ಅಂಕ ಪಟ್ಟಿ]

ಇದರಿಂದ ಬೇಸರಗೊಂಡ ಸ್ಟೀಫನ್ ಫ್ಲೇಮಿಂಗ್ ಈ ಡಕ್ ವರ್ತ್ ಲೂಯಿಸ್ (ಮಳೆ ಬಂದಾಗ ಬಳಸುವ ನಿಯಮ) ಕಳಪೆ ನಿಯಮವಾಗಿದೆ. ಈ ನಿಯಮವನ್ನು ಆರಂಭದಿಂದಲೂ ವಿರೋಧಿಸುತ್ತ ಬಂದಿದ್ದೇನೆ. ದುರದೃಷ್ಟ ಈ ನಿಯಮವನ್ನು ಬಹಳಷ್ಟು ಕ್ರಿಕೆಟಿಗರು ಬೆಂಬಲಿಸುತ್ತಿದ್ದಾರೆ ಎಂದು ಪ್ಲೇಮಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: Fleming calls D/L method
English summary
Expressing complete displeasure at the Duckworth-Lewis method, Rising Pune Supergiants coach Stephen Fleming termed the ICC approved rule for rain-truncated games as "rubbish" stating that a change is needed atleast in the shortest format.
Please Wait while comments are loading...