ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಕ್ರಿಕೆಟರ್ ಮೇಲೆ ಮಾದಕ ದ್ರವ್ಯ ಸೇವನೆ ಆರೋಪ

By Mahesh

ಆಕ್ಲೆಂಡ್, ಡಿ. 08: ಶ್ರೀಲಂಕಾದ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕುಶಾಲ್ ಪೆರೆರಾ ಅವರ ಮೇಲೆ ಮಾದಕ ದ್ರವ್ಯ ಸೇವಿಸಿದ ಆರೋಪ ಹೊರೆಸಲಾಗಿದೆ. ಡೋಪ್ ಟೆಸ್ಟ್ ನಲ್ಲಿ ಫೇಲ್ ಆಗಿರುವ ಪೆರೆರಾ ಈಗ ನ್ಯೂಜಿಲೆಂಡ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ತವರಿಗೆ ಮರಳಬೇಕಾಗಿದೆ.

ನ್ಯೂಜಿಲೆಂಡಿನಲ್ಲಿ ಡಿಸೆಂಬರ್ 10ರಿಂದ ಆರಂಭವಾಗಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಹಾಗೂ ನಂತರ ಏಕದಿನ ಸರಣಿಗೆ ಸಿದ್ಧತೆ ನಡೆಸಿದ್ದ ಶ್ರೀಲಂಕಾದ ಕ್ರಿಕೆಟರ್ ಕುಶಾಲ್ ಪೆರೆರಾಗೆ ಆಘಾತವಾಗಿದೆ.

ಡುನೇಡಿನ್ ನಲ್ಲಿರುವ ಕುಶಾಲ್ ಅವರು ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿರುವುದರಿಂದ ಅವರನ್ನು ನ್ಯೂಜಿಲೆಂಡ್ ಪ್ರವಾಸದ ನಡುವೆಯೇ ವಾಪಸ್ ಕರೆಸಿಕೊಳ್ಳಲಾಗುತ್ತಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ.|

Sri Lankan wicketkeeper fails drug test, recalled from New Zealand tour


ಪಾಕಿಸ್ತಾನ ಪ್ರವಾಸದ ವೇಳೆಯೇ ಕುಶಾಲ್ ಪರೇರಾ ಮಾದಕ ವಸ್ತು ಸೇವಿಸಿದ್ದು ಪರೀಕ್ಷೆಯಲ್ಲಿ ಖಚಿತಪಟ್ಟಿತ್ತು. ಹೀಗಾಗಿ ಈ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಲು ಕುಶಾಲ್ ಜನಿತ್ ಪೆರೆರಾ ಅವರ ರಕ್ತ, ಮೂತ್ರ ಪರೀಕ್ಷೆ ಸ್ಯಾಂಪಲ್ ಗಳನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಯಿತು. ಎಲ್ಲದರಲ್ಲೂ ಪಾಸಿಟಿವ್ ಎಂದು ವರದಿ ಬಂದಿದ್ದು, ಐಸಿಸಿ ನಿಯಮದ ಪ್ರಕಾರ ಆಟಗಾರರನ್ನು ಕರೆಸಿಕೊಳ್ಳಲಾಗಿದೆ. ಕುಶಾಲ್ ಪೆರೆರಾ ಬದಲಿಗೆ ಕುಶಾಲ್ ಸಿಲ್ವಾ ಅವರನ್ನು ನ್ಯೂಜಿಲೆಂಡ್​ಗೆ ಕಳುಹಿಸಲಾಗುತ್ತಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

ಲಂಕಾಕ್ಕೆ ಮರಳಿದ ಬಳಿಕ ಕುಶಾಲ್ ಪರೇರಾ ಅವರ ಮೂತ್ರದ ಬಿ ಸ್ಯಾಂಪಲ್ ಪಡೆದು ಪರೀಕ್ಷೆಗೆ ಒಳಪಡಿಸಲಾಗುವುದು. ಇದರಲ್ಲೂ ಅವರು ಮಾದಕ ವಸ್ತು ಸೇವಿಸಿದ್ದು ಖಚಿತಪಟ್ಟಲ್ಲಿ, ಉದ್ದೀಪನಾ ಮದ್ದು ನಿಗ್ರಹ ಕಾಯ್ದೆಯನ್ವಯ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದೆ.

ಈ ಹಿಂದೆ ಶ್ರೀಲಂಕಾದ ಅಂತಾರಾಷ್ಟ್ರೀಯ ಕ್ರಿಕೆಟರ್ ಉಪುಲ್ ತರಂಗಾ ಅವರು ಇದೇ ರೀತಿ ಸಿಕ್ಕಿಬಿದ್ದು, ಮೂರು ತಿಂಗಳ ನಿಷೇಧಕ್ಕೆ ಒಳಗಾಗಿದ್ದರು. 25 ವರ್ಷ ವಯಸ್ಸಿನ ಕುಶಾಲ್ ಅವರು ಶ್ರೀಲಂಕಾ ಪರ 3 ಟೆಸ್ಟ್, 51 ಏಕದಿನ ಕ್ರಿಕೆಟ್, 22 ಟಿ20 ಪಂದ್ಯಗಳನ್ನಾಡಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X