ಶ್ರೀಲಂಕಾದಿಂದ ಭಾರತ ಪ್ರವಾಸ ಸಂಪೂರ್ಣ ವೇಳಾಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜ. 20: ಫೆಬ್ರವರಿ 2016ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಐಸಿಸಿ ವಿಶ್ವ ಟಿ2೦ ಚಾಂಪಿಯನ್ ಶಿಪ್ ಗೆ ಪೂರ್ವ ತಯಾರಿ ನಡೆಸಲು ಉಭಯ ತಂಡಗಳು ಈ ಸರಣಿ ಆಡುತ್ತಿವೆ.

2016ರ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ವಿಶ್ವ ಟಿ20 ಭಾರತದಲ್ಲಿ ನಡೆಯಲಿದ್ದು, ಶ್ರೀಲಂಕಾ ಹಾಗೂ ಭಾರತ ತಂಡ ಮೂರು ಟಿ20 ಪಂದ್ಯಗಳ ಸರಣಿ ಆಡಿ ಅಭ್ಯಾಸ ಪಡೆಯಲಿವೆ. [ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]

Sri Lanka to tour India

ಭಾರತ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ತಂಡ ವಿಶ್ವ ಟ್ವೆಂಟಿ20 ಟೂರ್ನಿ ಹಾಗೂ ಏಷ್ಯಾ ಕಪ್ ಗೆ ಅಭ್ಯಾಸ ಪಡೆದುಕೊಳ್ಳಲಿದೆ. ಭಾರತ ವಿರುದ್ಧದ ಟಿ20 ಸರಣಿ ನಡೆಯುವ ಮೈದಾನಗಳ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ (ಎಸ್ಎಲ್ ಸಿ) ಬುಧವಾರ ಹೇಳಿದೆ. [ವಿಶ್ವ ಟಿ20 ಆಡುವ ತಂಡಕ್ಕೆ ಸುನೀಲ್ ಜೋಶಿ ಕೋಚ್]

ಸದ್ಯ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಏಕದಿನ ಪಂದ್ಯಗಳ ಸರಣಿ ಆಡುತ್ತಿರುವ ಭಾರತ, 3 ಟಿ20 ಪಂದ್ಯಗಳನ್ನು ಆಡಲಿದೆ.

ಭಾರತ ಹಾಗೂ ಶ್ರೀಲಂಕಾ ಸರಣಿ ವೇಳಾಪಟ್ಟಿ:
* ಫೆಬ್ರವರಿ 9 (ಮಂಗಳವಾರ)- 1ನೇ ಟಿ20ಐ, ಪುಣೆ
* ಫೆಬ್ರವರಿ 12 (ಶುಕ್ರವಾರ)- 2ನೇ ಟಿ20ಐ, ದೆಹಲಿ
* ಫೆಬ್ರವರಿ 14 (ಭಾನುವಾರ)- 3ನೇ ಟಿ20ಐ, ವಿಶಾಖಪಟ್ಟಣ
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Lanka will tour India next month (February 2016) to play three Twenty20 Internationals as both teams prepare for the ICC World Twenty20 Championships.
Please Wait while comments are loading...