ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಕೃಪೆಯಿಂದ ವಿಶ್ವಕಪ್ ಗೆ ಅರ್ಹತೆ ಪಡೆದ ಶ್ರೀಲಂಕಾ

By Mahesh

ಬೆಂಗಳೂರು, ಸೆ. 20: ಟೀಂ ಇಂಡಿಯಾ ವಿರುದ್ಧ 0-5 ಅಂತರದಿಂದ ಹೀನಾಯ ಸರಣಿ ಸೋಲು ಕಂಡಿದ್ದ ಶ್ರೀಲಂಕಾಕ್ಕೆ ಇಂಗ್ಲೆಂಡಿನಿಂದ ಶುಭ ಸುದ್ದಿ ಬಂದಿದೆ. ಐಸಿಸಿ ವಿಶ್ವಕಪ್ 2019ಕ್ಕೆ ನೇರ ಅರ್ಹತೆ ಗಳಿಸಲು ನಡೆದಿದ್ದ ಅಂಕಗಳ ಪೈಪೋಟಿಯಲ್ಲಿ ಶ್ರೀಲಂಕಾ ಗೆಲುವು ಸಾಧಿಸಿ, ನೇರ ಅರ್ಹತೆ ಪಡೆದುಕೊಂಡಿದೆ.

ಶ್ರೀಲಂಕಾ ವಿರುದ್ಧ 9-0 ಕ್ಲೀನ್ ಸ್ವೀಪ್ ಸಾಧಿಸಿದ ಭಾರತಶ್ರೀಲಂಕಾ ವಿರುದ್ಧ 9-0 ಕ್ಲೀನ್ ಸ್ವೀಪ್ ಸಾಧಿಸಿದ ಭಾರತ

ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಓಲ್ಡ್ ಟ್ರಾಫರ್ಡ್ ನಲ್ಲಿ ಮಂಗಳವಾರ(ಸೆ. 19)ದಂದು ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಸೋಲು ಅನುಭವಿಸಿದ್ದು, ಶ್ರೀಲಂಕಾಕ್ಕೆ ಲಾಭದಾಯಕವಾಯಿತು.

Sri Lanka qualify for ICC 50-over World Cup

ಸೆ.30ರೊಳಗೆ ನಡೆಯುವ ಪಂದ್ಯಾವಳಿಗಳ ಆಧಾರದ ಮೇಲೆ ನೇರ ಅರ್ಹತೆಯನ್ನು ಪರಿಗಣಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನಿರ್ಧರಿಸಿದೆ. ವೆಸ್ಟ್ ಇಂಡೀಸ್ ಈಗ 78 ಅಂಕಗಳನ್ನು ಹೊಂದಿದ್ದರೆ, ಶ್ರೀಲಂಕಾ 86 ಅಂಕಗಳನ್ನು ಗಳಿಸಿದೆ. ಹೀಗಾಗಿ 8ನೇ ತಂಡವಾಗಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ಜತೆ ಶ್ರೀಲಂಕಾ ಕೂಡಿಕೊಂಡಿದೆ.

ಧೋನಿಯಿಂದ ಜಾಲಿ ರೈಡ್, ಒಂದೇ ವಾಹನದಲ್ಲಿ ತಂಡದ ಸವಾರಿ!ಧೋನಿಯಿಂದ ಜಾಲಿ ರೈಡ್, ಒಂದೇ ವಾಹನದಲ್ಲಿ ತಂಡದ ಸವಾರಿ!

ವೆಸ್ಟ್ ಇಂಡೀಸ್ ತಂಡ ಈಗ ಐಸಿಸಿ ಕ್ರಿಕೆಟ್ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಉಳಿದ 10 ತಂಡಗಳೊಡನೆ ಸೆಣೆಸಿ ಅರ್ಹತೆ ಪಡೆದುಕೊಳ್ಳಬೇಕಿದೆ. ಅಫ್ಘಾನಿಸ್ತಾನ, ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು, ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಚಾಂಪಿಯನ್ಸ್ ನ ನಾಲ್ಕು ತಂಡಗಳು ಹಾಗೂ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಡಿವಿಷನ್ 2ರಿಂದ ಮತ್ತೆರಡು ತಂಡಗಳು ಅರ್ಹತಾ ಸುತ್ತಿನಲ್ಲಿ ಸೆಣಸಲಿವೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X