ತಲೆಗೆ ಚೆಂಡು ಬಡಿದು ಶ್ರೀಲಂಕಾ ಕ್ರಿಕೆಟರ್ ತೀವ್ರವಾಗಿ ಅಸ್ವಸ್ಥ

Posted By:
Subscribe to Oneindia Kannada

ಕೊಲಂಬೋ, ಏಪ್ರಿಲ್ 25: ಶ್ರೀಲಂಕಾದ ಟೆಸ್ಟ್ ತಂಡದ ಆರಂಭಿಕ ಆಟಗಾರ ಕೌಶಲ್ ಸಿಲ್ವಾ ಅವರು ಮೈದಾನದಲ್ಲಿ ಕ್ರಿಕೆಟ್ ಆಡುವಾಗ ದುರಂತ ಸಂಭವಿಸಿದೆ. ಕೌಶಲ್ ಸಿಲ್ವಾ ಅವರ ತಲೆಗೆ ಚೆಂಡು ಬಡಿದಿದ್ದು, ಅವರನ್ನು ಮೈದಾನದಿಂದ ಏರ್ ಲಿಫ್ಟ್ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ.

ದೇಶಿ ಕ್ರಿಕೆಟ್ ಪಂದ್ಯವೊಂದರಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸಿಲ್ವಾ ಅವರ ಹಣೆಗೆ ಚೆಂಡು ಬಡಿದಿದೆ, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಐಸಿಯುನಲ್ಲಿ ವೈದ್ಯರ ನಿಗಾದಲ್ಲಿದ್ದಾರೆ ಎಂದು ಶ್ರೀಲಂಕಾದ ಕ್ರಿಕೆಟ್ ಬೋರ್ಡ್ ಹೇಳಿದೆ.

Sri Lanka opener Kaushal Silva hospitalised after blow on the head

ಪಲ್ಲೆಕೆಲೆಯಲ್ಲಿ ಅಭ್ಯಾಸ ಪಂದ್ಯವೊಂದರಲ್ಲಿ ಶ್ರೀಲಂಕಾ ತಂಡದ ಉಪ ನಾಯಕ ಚಾಂಡಿಮಾಲ್ ಅವರು ಬಿರುಸಿನಿಂದ ಹೊಡೆದ ಚೆಂಡು ಶಾರ್ಟ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೌಶಲ್ ಅವರ ತಲೆಗೆ ತಾಗಿದೆ. ಇದರಿಂದ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಸಮೀಪದ ಕ್ಯಾಂಡಿ ಆಸ್ಪತ್ರಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೊಲಂಬೊಗೆ ಕರೆದೊಯ್ಯಲಾಗಿದೆ.

ತಲೆಯನ್ನು ಸ್ಕ್ಯಾನ್ ಮಾಡಲಾಗಿದ್ದು ಯಾವುದೇ ದೊಡ್ಡ ಗಾಯವಾಗಿಲ್ಲ ಆತಂಕ ಪಡುವ ಅಗತ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ.

ಸಿಲ್ವಾ ಹೆಲ್ಮೆಟ್ ಧರಿಸಿದ್ದರಾದರೂ ದಿನೇಶ್ ಚಾಂಡಿಮಾಲ್ ಬಲವಾಗಿ ಹೊಡೆದ ಪರಿಣಾಮ ಚೆಂಡು ಪಕ್ಕದಲ್ಲಿಯೇ ಫೀಲ್ಡ್ ಮಾಡುತ್ತಿದ್ದ ಸಿಲ್ವಾ ಅವರ ತಲೆಗೆ ಬಿರುಸಿನಿಂದ ತಾಗಿದೆ ಎಂದು ಟೀಂ ಮ್ಯಾನೇಜರ್ ಚರೀತ್ ಸೇನನಾಯಕ್ ಹೇಳಿದ್ದಾರೆ.

2014 ರಲ್ಲಿ ಆಸ್ಟ್ರೇಲಿಯಾದ ಫಿಲ್ ಹ್ಯೂಸ್ ಅವರು ತಲೆಗೆ ಚೆಂಡು ಬಡಿದ ಪರಿಣಾಮ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಬಳಿಕ ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿತ್ತು.

ಸಿಲ್ವಾ ಅವರು 24 ಟೆಸ್ಟ್ ಪಂದ್ಯಗಳನ್ನಾಡಿದ್ದು, 31ರನ್ ಸರಾಸರಿಯಂತೆ 1,404 ರನ್ ಗಳಿಸಿದ್ದಾರೆ.ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಎರಡು ದಿನದ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದರು. ಮೇ 19 ರಿಂದ ಮೊದಲ ಟೆಸ್ಟ್ ಇಂಗ್ಲೆಂಡ್ ನಲ್ಲಿ ಆರಂಭಗೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Lankan cricket team's test opener Kaushal Silva was hospitalised on after being hit on the head by a cricket ball while fielding in a domestic match.
Please Wait while comments are loading...