ಏಷ್ಯಾ ಕಪ್, ವಿಶ್ವ ಟಿ20ಗೆ ಶ್ರೀಲಂಕಾ ಮಾಲಿಂಗ ಕ್ಯಾಪ್ಟನ್

Posted By:
Subscribe to Oneindia Kannada

ಕೊಲಂಬೋ, ಫೆ. 18: ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಅವರನ್ನು ವಿಶ್ವಟಿ20 ಹಾಗೂ ಏಷ್ಯಾಕಪ್ ತಂಡಕ್ಕೆ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಎರಡು ಟೂರ್ನಿಗೆ ತಂಡವನ್ನು ಗುರುವಾರ (ಫೆಬ್ರವರಿ 18) ಪ್ರಕಟಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಏಷ್ಯಾಕಪ್ ಫೆಬ್ರವರಿ 24ರಿಂದ ಆರಂಭವಾಗಲಿದ್ದು, ವಿಶ್ವ ಟಿ20 ಭಾರತದಲ್ಲಿ ಮಾರ್ಚ್ 8 ರಿಂದ ನಡೆಯಲಿದೆ.
[ಏಷ್ಯಾಕಪ್ 2016 : ತಂಡಗಳು]
ಇತ್ತೀಚೆಗೆ ಭಾರತ ವಿರುದ್ಧ ನಡೆದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಏಂಜೆಲೋ ಮ್ಯಾಥ್ಯೂಸ್, ವೇಗಿ ನುವಾನ್ ಕುಲಶೇಖರ, ಸ್ಪಿನ್ನರ್ ರಂಗಣ ಹೆರಾತ್ ಅವತು ತಂಡಕ್ಕೆ ಮರಳಿದ್ದಾರೆ. ಭಾರತ ವಿರುದ್ಧದ ಸರಣಿಯನ್ನು ಶ್ರೀಲಂಕಾ 2-1 ಅಂತರದಿಂದ ಕಳೆದುಕೊಂಡಿತ್ತು. [ಏಷ್ಯಾಕಪ್, ಸಂಪೂರ್ಣ ವೇಳಾಪಟ್ಟಿ]

Sri Lanka name squad for Asia Cup and World T20; Lasith Malinga is captain

2014ರಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ವಿಶ್ವ ಟಿ20 ಚಾಂಪಿಯನ್ ಆಗಿದ್ದ ಶ್ರೀಲಂಕಾ ಈಗ ಕಪ್ ಉಳಿಸಿಕೊಳ್ಳಲು ಸೆಣಸಲಿದೆ.

ಶ್ರೀಲಂಕಾ ತಂಡ: ಲಸಿತ್ ಮಾಲಿಂಗ (ನಾಯಕ), ಏಂಜೆಲೋ ಮ್ಯಾಥ್ಯೂಸ್ (ಉಪ ನಾಯಕ), ದಿನೇಶ್ ಚಂಡಿಮಾಲ್, ತಿಲಕರತ್ನೆ ದಿಲ್ಶನ್, ನಿರೋಶನ್ ಡಿಕ್ ವಾಲ, ಶೇಹಾನ್ ಜಯಸೂರ್ಯ, ಮಿಲಿಂಡಾ ಸಿರಿವರ್ದೆನ, ದಸುನ್ ಶನಕ, ಚಮರ, ಚಮರ ಕಪುಗೆಡರ, ನುವಾನ್ ಕುಲಶೇಖರ, ದುಶ್ಮಂತಾ ಚಮೀರ, ತಿಸಾರಾ ಪೆರೆರಾ, ಸಚಿತ್ರಾ ಸೇನಾನಾಯಕೆ, ರಂಗನಾ ಹೇರಾತ್, ಜೆಫ್ರಿ ವಂಡೆರ್ಸೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fast bowler Lasith Malinga, who missed the recent Twenty20 International series against India due to injury, has returned to captain Sri Lanka in the Asia Cup and World T20.
Please Wait while comments are loading...