ಭಾರತದಿಂದ ಶ್ರೀಲಂಕಾ ಪ್ರವಾಸ ಪರಿಷ್ಕೃತ ವೇಳಾಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 07: ವಿಂಡೀಸ್ ಪ್ರವಾಸದ ಬಳಿಕ, ವಿರಾಟ್ ಕೊಹ್ಲಿ ನೇತೃತ್ವದ ತಂಡವು ಶ್ರೀಲಂಕಾಕ್ಕೆ ತೆರಳಲಿದೆ. ಶ್ರೀಲಂಕಾದಲ್ಲಿ ಮೂರು ಟೆಸ್ಟ್, ಐದು ಏಕದಿನ ಪಂದ್ಯ ಹಾಗೂ ಒಂದು ಟಿ20 ಪಂದ್ಯಗಳನ್ನಾಡಲಿದೆ.

ಜೂನ್ 23ಕ್ಕೆ ಕೆರಿಬಿಯನ್ ದ್ವೀಪಕ್ಕೆ ತೆರಳಿ ಜುಲೈ 9ರೊಳಗೆ ಭಾರತಕ್ಕೆ ಕೊಹ್ಲಿ ಪಡೆ ಮರಳಲಿದೆ. ಇದಾದ ಹತ್ತು ದಿನಗಳ ಬಳಿಕ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ತೆರಳಲಿದೆ. ಜುಲೈ 21ಹಾಗೂ 22ರಂದು ಅಭ್ಯಾಸ ಪಂದ್ಯವಾಡಿ, ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಲಿದೆ.

ಜುಲೈ26ಕ್ಕೆ ಆರಂಭವಾಗಲಿರುವ ಟೆಸ್ಟ್ ಸರಣಿ ಆಗಸ್ಟ್ 16ಕ್ಕೆ ಮುಗಿಯಲಿದೆ. ಅಗಸ್ಟ್ 20 ರಿಂದ ಸೆಪ್ಟೆಂಬರ್ 03ರ ತನಕ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿ ನಡೆಯಲಿದ್ದು, ಸೆಪ್ಟೆಂಬರ್ 06 ರಂದು ಏಕೈಕ ಟಿ20ಐ ಪಂದ್ಯ ನಡೆಯಲಿದೆ.

ಉಭಯ ದೇಶಗಳ ನಡುವೆ 2009ರ ಪೂರ್ಣ ಪ್ರಮಾಣದ ಸರಣಿ ಇದಾಗಿದೆ. ಆಗ ಟೆಸ್ಟ್ ಸರಣಿಯನ್ನು ಭಾರತ 2-0, ಏಕದಿನ ಕ್ರಿಕೆಟ್ 3-1 ಹಾಗೂ ಟಿ20ಐ 1-1 ರಲ್ಲಿ ಡ್ರಾ ಆಗಿತ್ತು.

ಪೂರ್ಣ ವೇಳಾಪಟ್ಟಿ ಹೀಗಿದೆ:
* ಮೊದಲ ಟೆಸ್ಟ್ ಪಂದ್ಯ : ಜುಲೈ 26 ರಿಂದ 30, ಗಾಲೆ, 10 AM (IST)
* ಎರಡನೇ ಟೆಸ್ಟ್ ಪಂದ್ಯ : ಆಗಸ್ಟ್ 03 ರಿಂದ 07, ಕೊಲಂಬೊ, 10 AM (IST)
* ಮೂರನೇ ಟೆಸ್ಟ್ ಪಂದ್ಯ : ಆಗಸ್ಟ್ 12 ರಿಂದ 16, ಪಲ್ಲಕೆಲ್ಲೆ, 10 AM (IST)


ಏಕದಿನ ಪಂದ್ಯಗಳು :
* ಮೊದಲ ಏಕದಿನ ಪಂದ್ಯ : ಆಗಸ್ಟ್ 20 (ಭಾನುವಾರ), ದಂಬುಲ್ಲಾ (ರಂಗಿರಿ ಅಂತಾರಾಷ್ಟ್ರ್ರೀಯ ಕ್ರಿಕೆಟ್ ಮೈದಾನ), 2:30 PM (IST)

* ಎರಡನೇ ಏಕದಿನ ಪಂದ್ಯ : ಆಗಸ್ಟ್ 24(ಗುರುವಾರ), ಪಲ್ಲೆಕೆಲೆ ಅಂತಾರಾಷ್ಟ್ರ್ರೀಯ ಕ್ರಿಕೆಟ್ ಮೈದಾನ), 2:30 PM (IST)
* ಮೂರನೇ ಏಕದಿನ ಪಂದ್ಯ : ಆಗಸ್ಟ್ 27(ಭಾನುವಾರ), ಪಲ್ಲೆಕೆಲೆ ಅಂತಾರಾಷ್ಟ್ರ್ರೀಯ ಕ್ರಿಕೆಟ್ ಮೈದಾನ), 2:30 PM (IST)
* ನಾಲ್ಕನೇ ಏಕದಿನ ಪಂದ್ಯ : ಆಗಸ್ಟ್ 31(ಗುರುವಾರ), ಕೊಲಂಬೊ (ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ), 2:30 PM (IST)
* ಐದನೇ ಏಕದಿನ ಪಂದ್ಯ : ಸೆಪ್ಟೆಂಬರ್ 03(ಭಾನುವಾರ), ಕೊಲಂಬೊ (ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ), 2:30 PM (IST)


ಏಕೈಕ ಟಿ20ಐ : ಸೆಪ್ಟೆಂಬರ್ 06(ಬುಧವಾರ), ಕೊಲಂಬೋ (ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ), 7:00 PM (IST) (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Lanka and India will play three Tests, five one-day internationals and one T20 in their first series involving all three formats of the game in eight years, it was announced Friday.
Please Wait while comments are loading...