ಲಂಕಾ ವಿರುದ್ಧ 'ನಂ.1' ಟೀಂ ಆಸ್ಟ್ರೇಲಿಯಾಕ್ಕೆ ಹೀನಾಯ ಸೋಲು

Posted By:
Subscribe to Oneindia Kannada

ಗಾಲೆ, ಆಗಸ್ಟ್ 06: ವಿಶ್ವದ ನಂ.1 ಟೆಸ್ಟ್ ತಂಡ ಆಸ್ಟ್ರೇಲಿಯಾ ತಂಡ ಹೀನಾಯ ಸೋಲು ಕಂಡಿದೆ. ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು 229ರನ್ ಗಳ ಅಂತರದಲ್ಲಿ ಸೋತ ಆಸೀಸ್ ತಂಡದ ವಿರುದ್ಧ ಶ್ರೀಲಂಕಾ 2-0 ಅಂತರದ ಸರಣಿ ಜಯ ಕೂಡಾ ದಾಖಲಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್

ಗಾಲೆಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯ ಗೆಲ್ಲಲು ಆಸ್ಟ್ರೇಲಿಯಾಕ್ಕೆ 413 ರನ್ ಗುರಿ ನೀಡಲಾಗಿತ್ತು. ಆದರೆ, ಸ್ಮಿತ್ ಪಡೆ 183ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಪಂದ್ಯ ಹಾಗೂ ಸರಣಿ ಕಳೆದುಕೊಂಡಿದೆ. [ಪಾಕಿಸ್ತಾನದ ಯಾಸಿರ್ ಕೆಳಕ್ಕೆ ಹಾಕಿ ಮೇಲಕ್ಕೇರಿದ ಅಶ್ವಿನ್]

Sri Lanka humiliate World No. 1 Australia for historic 2-0 series win

ಮೊದಲ ಇನ್ನಿಂಗ್ಸ್ ನಲ್ಲಿ ದಾಖಲೆಯ 106ರನ್ ಗಳಿಗೆ ಆಲೌಟ್ ಆಗಿತ್ತು. ಹಿರಿಯ ಸ್ಪಿನ್ನರ್ ರಂಗಣಾ ಹೆರಾತ್ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧನೆ ಮಾಡಿ, ಆಸೀಸ್ ಅವನತಿಗೆ ನಾಂದಿ ಹಾಡಿದರು. [ವಿಂಡೀಸ್ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಆದ್ರೆ ಭಾರತ ನಂ.1]

ಎರಡನೇ ಇನ್ನಿಂಗ್ಸ್ ನಲ್ಲಿ ಆಫ್ ಸ್ಪಿನ್ನರ್ ದಿಲ್ರುವಾನ್ ಪೆರೆರಾ 6 ವಿಕೆಟ್ ಕಬಳಿಸಿ ಶನಿವಾರ (ಆಗಸ್ಟ್ 06) ದಂದು ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿದರು. ಈ ಸೋಲಿನ ನಡುವೆಯೂ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಅವರು ಈ ಪಂದ್ಯದಲ್ಲಿ 11/94 ಗಳಿಸಿ ತಮ್ಮ ಛಾಪು ಮೂಡಿಸಿದರು. ಪಲ್ಲಕೆಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ತಂಡ 106ರನ್ ಗಳಿಂದ ಗೆದ್ದುಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 281 (73.1 ಓವರ್ಸ್) ಹಾಗೂ 237 (59.3 ಓವರ್ಸ್)
ಆಸ್ಟ್ರೇಲಿಯಾ 106 (33.2 ಓವರ್ಸ್) ಹಾಗೂ 183 (50.1 ಓವರ್ಸ್)

(ಎಎಫ್ ಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Off-spinner Dilruwan Perera bagged six wickets to fashion Sri Lanka's historic series win over Australia today (August 6) as the world number one side suffered a humiliating 229-run loss inside three days in the second Test in Galle.
Please Wait while comments are loading...