ಮೈದಾನದಲ್ಲೇ ವಾಂತಿ ಮಾಡಿಕೊಂಡ ಲಂಕಾದ ವೇಗಿ ಲಕ್ಮಲ್

Posted By:
Subscribe to Oneindia Kannada
ಮೈದಾನದಲ್ಲೇ ವಾಂತಿ ಮಾಡಿಕೊಂಡ ಲಂಕಾದ ವೇಗಿ ಲಕ್ಮಲ್ |

ನವದೆಹಲಿ, ಡಿಸೆಂಬರ್ 05: ದೆಹಲಿಯ ವಾಯು ಮಾಲಿನ್ಯದ ಬಗ್ಗೆ ಆರಿವಿದ್ದರೂ ಪಂದ್ಯವನ್ನು ಆಯೋಜಿಸಿದ್ದರ ಬಗ್ಗೆ ಪ್ರಶ್ನಿಸಿ ಬಿಸಿಸಿಐಗೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ತರಾಟೆಗೆ ತೆಗೆದುಕೊಂಡಿದೆ. ಈ ನಡುವೆ ಮೂರನೇ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾದ ವೇಗಿ ಲಕ್ಮಲ್ ಅವರು ಮೈದಾನದಲ್ಲೇ ವಾಂತಿ ಮಾಡಿಕೊಂಡ ಘಟನೆ ನಡೆದಿದೆ.

ಭಾರತ ವಿರುದ್ಧ 3ನೇ ಟೆಸ್ಟ್ ಗೆಲ್ಲಲು ಶ್ರೀಲಂಕಾಕ್ಕೆ 379ರನ್ ಬೇಕು

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ವಿಪರೀತ ಹೊಗೆ, ಮಂಜು ಕವಿದ ವಾತವರಣ, ಮಾಲಿನ್ಯದ ಸಮಸ್ಯೆ ಮತ್ತೆ ಕಾಡುತ್ತಿದೆ.

Sri Lanka cricketer Lakmal vomits on field, Delhi may lose winter tests

ಭಾರತದ ಎರಡನೇ ಇನ್ನಿಂಗ್ಸ್ ನ 6ನೇ ಓವರ್ ಜಾರಿಯಲ್ಲಿರುವಾಗ ಶ್ರೀಲಂಕಾದ ವೇಗಿ ಸುರಂಗ ಲಕ್ಮಲ್ ಅವರು ವಾಂತಿ ಮಾಡಿಕೊಂಡರು. ನಂತರ ಧನಂಜಯ ಡಿ ಸಿಲ್ವಾ ವಾಂತಿ ಕೂಡ ಮಾಡಿಕೊಂಡಿದ್ದಾರೆ. ಆಂಟಿ ಪೊಲ್ಯುಶನ್ ಮಾಸ್ಕ್ ಧರಿಸಿ ಆಡುತ್ತಿದ್ದರೂ ಸಿಂಹೀಳಿಯರು ಮಾಲಿನ್ಯಕ್ಕೆ ತತ್ತರಿಸಿದ್ದಾರೆ.

ಮುಖ ಮುಚ್ಚಿಕೊಂಡ ಲಂಕನ್ನರಿಗೆ ಮಂಗಳಾರತಿ ಮಾಡಿದ ಟ್ವೀಟ್ ಲೋಕ

ವಾಯುಮಾಲಿನ್ಯದ ಕಾರಣ ಕೊಟ್ಟು ಶ್ರೀಲಂಕಾ ತಂಡ ಮೈದಾನದಿಂದ ಹೊರನಡೆಯಲು ಮುಂದಾಗಿದ್ದು, ಪಂದ್ಯ ಮೂರು ಬಾರಿ ಸ್ಥಗಿತಗೊಂಡಿದ್ದು, ಒತ್ತಡಕ್ಕೆ ಮಣಿದು ಕೊಹ್ಲಿ ಅವರು ತ್ವರಿತವಾಗಿ ಭಾರತದ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು ನೆನಪಿರಬಹುದು. ಇದಾದ ಬಳಿಕ ಈ ವಾಂತಿ ಸರಣಿ ಘಟನೆ ನಡೆದಿದೆ.

Sri Lanka cricketer Lakmal vomits on field, Delhi may lose winter tests

ಕಳೆದ ವರ್ಷ ಮಾಲಿನ್ಯದ ಕಾರಣಕ್ಕೆ ಎರಡು ರಣಜಿ ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಶ್ರೀಲಂಕಾ ಆಟಗಾರರು ಮಾತ್ರ ಮಾಸ್ಕ್ ಧರಿಸಿ ಮೈದಾನದಲ್ಲಿ ಆಡುತ್ತಿದ್ದನ್ನು ನೋಡಿ ಸಾಮಾಜಿಕ ಜಾಲ ತಾಣಗಳಲ್ಲಿ ಲಂಕನ್ನರ ವಿರುದ್ಧ ಭಾರಿ ಟೀಕೆಗಳು ಕೇಳಿ ಬಂದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sri Lanka paceman Suranga Lakmal vomitted on the field before walking off as Delhi's notorious smog, which may rob the Indian capital of future winter tests, continued to plague the third and final match on Tuesday.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ