ಅಸಲಿ ಯುವರಾಜನನ್ನು ಪತ್ತೆ ಹಚ್ಚಿ ನೋಡೋಣ!

Posted By:
Subscribe to Oneindia Kannada

ಲಂಡನ್, ಜೂನ್ 16: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಗೆಲುವಿನ ನಂತರ ಯುವರಾಜ್ ಅವರು ತಮ್ಮನ್ನು ಹೋಲುವ ವ್ಯಕ್ತಿಯ ಜತೆ ಪೋಸ್ ನೀಡಿದ್ದಾರೆ. ಇವರಲ್ಲಿ ಅಸಲಿ ಯುವಿ ಯಾರು ಎಂಬುದನ್ನು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟ.

ಈ ಚಿತ್ರವನ್ನು ಬಿಸಿಸಿಐ ಟ್ವೀಟ್ ಮಾಡಿ ಯುವಿ X2 ಎಂದು ಹೇಳಿದೆ. ಯುವರಾಜ್ ಅವರ ಅವಳಿ ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Yuvraj Singh

ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಹೋಲುವ ವ್ಯಕ್ತಿಯೊಬ್ಬನ ವಿಡಿಯೋ ಓಡಾಡುತ್ತಿತ್ತು.

ಕರಾಚಿಯ ಶಹೀದ್ ಇ ಮಿಲಾನ್ ಪ್ರದೇಶದಲ್ಲಿ ಪಿಜ್ಜಾ ತಯಾರಕನೊಬ್ಬ ಥೇಟ್ ಕೊಹ್ಲಿಯಂತೆ ಕಾಣುವುದನ್ನು ವಿಡಿಯೋದಲ್ಲಿ ನೋಡಬಹುದಾಗಿತ್ತು.

ಇದಾದ ಬಳಿಕ ಈಗ ಯುವರಾಜ್ ಸರದಿ. ಬಾಂಗ್ಲಾದೇಶ ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿ ಮೈದಾನದಿಂದ ಹಿಂತಿರುಗುತ್ತಿದ್ದ ಯುವರಾಜ್ ಸಿಂಗ್ ಅವರಿಗೆ ಅವರ ತದ್ರೂಪಿನಂತಿರುವ ವ್ಯಕ್ತಿ ಎದುರಾಗಿದ್ದಾನೆ.

ಯುವಿ ಹಾಗೂ ಫ್ಯಾನ್ ಜತೆಗಿನ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ.

ಈ ಚಿತ್ರ ನೋಡಿ ಮೊದಲಿಗೆ ಪ್ರತಿಕ್ರಿಯಿಸಿದ ಪ್ರಮುಖರಲ್ಲಿ ಕರ್ನಾಟಕದ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಮೊದಲಿಗರು. ನಂತರ ಅಭಿಮಾನಿಗಳ ಅಚ್ಚರಿಯ ಪ್ರತಿಕ್ರಿಯೆಗಳು ಸಿಕ್ಕಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Spot the original Yuvraj Singh : BCCI posted a tweet that shows Yuvi posing with his clone
Please Wait while comments are loading...