ಶೇನ್ ವಾರ್ನ್ ಗೆ ಅನಕೊಂಡ ಕಚ್ಚಿದರೂ ಬಚಾವ್

By: ರಮೇಶ್ ಬಿ
Subscribe to Oneindia Kannada

ಸಿಡ್ನಿ, ಫೆ 18: ಆಸ್ಟೇಲಿಯಾ ಕ್ರಿಕೆಟ್ ತಂಡದ ನಿವೃತ್ತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರು ಟಿವಿ ರಿಯಾಲಿಟಿ ಶೋ ಕಾರ್ಯಕ್ರಮವೊಂದರಲ್ಲಿ ಹಾವುಗಳ ಬಾಕ್ಸ್ ಒಳಗೆ ತಲೆ ಹಿಣುಕಿ ಹಾಕಿ ನೋಡುವ ವೇಳೆ ಅವರ ತಲೆಗೆ ಹಾವು ಕಚ್ಚಿರುವ ಘಟನೆ ಬುಧವಾರ ನಡೆದಿದೆ.

"ಐ ಆಮ್ ಸೆಲೆಬ್ರೆಟಿ ಗೆಟ್ ಮೇ ಔಟ್ ಆಫ್ ಹಿಯರ್" ಎಂಬ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ವಾರ್ನ್ ಭಾಗವಹಿಸಿದ್ದರು. ಹಾವುಗಳು ಇರುವ ಬಾಕ್ಸ್ ನ ಒಳಗೆ ಇಣುಕಿ ನೋಡುವಾಗ ಆನಕೊಂಡ ಹಾವು ಅವರ ತಲೆಗೆ ಕಚ್ಚಿ ಗಾಯಗೊಳಿಸಿದೆ.[ರೂಪದರ್ಶಿ ಸ್ತನ ಕಚ್ಚಿದ ಹಾವು ತಕ್ಷಣ ಸಾವು]

Shane Warne

ವಾರ್ನ್ ಅವರಿಗೆ ಕಚ್ಚಿದ ಅನಕೊಂಡ ಹಾವು ವಿಷಕಾರಿ ಅಲ್ಲದಿದ್ದರೂ ಆಕ್ರಮಣಕಾರಿ ಹಾವು ಆಗಿದೆ. ಈ ಹಾವು ಹೆಚ್ಚಾಗಿ ದಕ್ಷಿಣ ಅಮೆರಿಕದ ಉಷ್ಣವಲಯದಲ್ಲಿ ಕಂಡು ಬರುವ ಒಂದು ದೊಡ್ಡ ಹಾವು. ಇದು ವಿಶ್ವದಲ್ಲಿಯೇ ಅತ್ಯಂತ ಭಾರವಿರುವ ಹಾಗು ವಿಶ್ವದ ಎರಡನೇ ಉದ್ದವಿರುವ ಹಾವು ಈ ಅನಕೊಂಡ.[ಸಚಿನ್ ಬ್ಲಾಸ್ಟರ್ಸ್ ವಿರುದ್ಧ ವಾರ್ನ್ ತಂಡಕ್ಕೆ ಸರಣಿ ಜಯ]

Warne bitten by Anaconda

news.com,au ವರದಿಯಂತೆ ಬಾಕ್ಸಿನೊಳಗೆ ಆಫ್ರಿಕಾ ದೊಡ್ಡ ಕಪ್ಪೆಗಳು, ಚೇಳು, ಮಡಗಾಸ್ಕರ್ ನ ಜಿರಳೆ ಕೂಡಾ ಇಡಲಾಗಿತ್ತು. ಶೇನ್ ವಾರ್ನ್ ಅವರಿಗೆ ಹಾವು ಇರುವ ಬಾಕ್ಸ್ ಸಿಕ್ಕಿತ್ತು. ನಿಮ್ಮ ತಲೆ ವಾಸನೆ ಕಂಡು ಯಾವುದೋ ಕಪ್ಪೆ ಇರಬಹುದು ಎಂದು ಅನಕೊಂಡ ಬಾಯಿ ಹಾಕಬಹುದು ಎಚ್ಚರಿಕೆ ಎಂದು ರಿಯಾಲಿಟಿ ಶೋ ನಿರೂಪಕ ಡಾ. ಕ್ರಿಸ್ ಬ್ರೌನ್ ಹೇಳುತ್ತಾರೆ.[ಅನಕೊಂಡ ದೋಷವನ್ನೂ ಮೆಟ್ಟಿನಿಲ್ಲಬಹುದು]

Warne bitten by Anaconda

ಆದರೆ, ಎಚ್ಚರಿಕೆ ಲೆಕ್ಕಿಸಿದ ತಲೆ ಹಾಕಿದ ವಾರ್ನ್ ಗೆ ಹಾವು ಬಾಯಿ ಹಾಕಿದೆ. ವಾರ್ನ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಚರ್ಮದ ಸೋಂಕು ಆಗದಂತೆ ನಿರೋಧಕಗಳನ್ನು ನೀಡಲಾಗಿದೆ. ಎಂದು ಡಾ. ಸ್ಟೀಫನ್ ಟಾಟೆ ಅವರು ಡೈಲಿ ಟೆಲಿಗ್ರಾಫ್ ಗೆ ಹೇಳಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Retired Australia spin bowling great Shane Warne has suffered a snakebite after dipping his head into a box full of the reptiles for a reality show.'I'm A Celebrity...Get Me Out Of Here!', Warne was bitten by a non-venomous anaconda.
Please Wait while comments are loading...