ದಕ್ಷಿಣ ಆಫ್ರಿಕಾ ನಾಯಕನ ಮೇಲೆ 'ಚೆಂಡು ವಿರೂಪ' ಆರೋಪ

Posted By:
Subscribe to Oneindia Kannada

ದುಬೈ, ನವೆಂಬರ್ 18: ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೆ 'ಚೆಂಡು ವಿರೂಪ' (ball tampering) ಆರೋಪ ಹೊರೆಸಲಾಗಿದೆ. ಹೋಬಾರ್ಟ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ವೇಳೆ ಐಸಿಸಿ ನಿಯಮ ಮೀರಿ ಚೆಂಡನ್ನು ತೀಡುತ್ತಿದ್ದ ದೃಶ್ಯಗಳು ಸಿಕ್ಕಿವೆ.

ಐಸಿಸಿ ನಿಯಮ 2.2.9 ಹಾಗೂ 42.3 ಮೀರಿರುವುದು ಕಂಡು ಬಂದಿದೆ. ಹೀಗಾಗಿ ಕ್ರಮ ಜರುಗಿಸಬೇಕಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್ ಸನ್ ಹೇಳಿದ್ದಾರೆ.

South African captain Faf du Plessis charged with ball tampering

ಐಸಿಸಿ ಮ್ಯಾಚ್ ರೆಫ್ರಿಗಳ ಎಲೈಟ್ ಆಯೋಗದಲ್ಲಿರುವ ಆಂಡಿ ಪೈಕ್ರಾಫ್ಟ್ ಅವರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಕಳೆದ ಮಂಗಳವಾರ ಈ ಘಟನೆ ಸಂಭವಿಸಿದ್ದು, ಟಿವಿ ಫುಟೇಜ್ ಗಳ ಪ್ರಕಾರ ಡುಪ್ಲೇಸಿಸ್ ಅವರು ಎಂಜಲು ಹಾಕಿ ನಂತರ ಮಿಂಟ್ ಅಥವಾ ಸಿಹಿ ಪದಾರ್ಥವೊಂದನ್ನು ಚೆಂಡಿಗೆ ಹಾಕಿ ತಿಕ್ಕಿದ್ದಾರೆ. ಇದು ಐಸಿಸಿ ನಿಯಮಕ್ಕೆ ವಿರೋಧವಾಗಿದೆ.

ಡುಪ್ಲೆಸಿಸ್ ವಿರುದ್ಧ ಆರೋಪ ಸಾಬೀತಾದರೆ ಪಂದ್ಯದ ಶೇ 50ರಿಂದ 100ರಷ್ಟು ಸಂಭಾವನೆ ಕಡಿತ ಹಾಗೂ ಎರಡರಿಂದ ಮೂರು ಅಂಕಗಳ ಕಡಿತವಾಗಲಿದೆ(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
South African captain Faf du Plessis charged with ball tampering.The alleged incident happened on Tuesday morning when TV footage appeared to show du Plessis applying saliva and residue from a mint or sweet, an artificial substance, to the ball.
Please Wait while comments are loading...