ದಕ್ಷಿಣ ಆಫ್ರಿಕಾದ ಯುವ ಕ್ರಿಕೆಟರ್ ದುರಂತ ಸಾವು

Posted By:
Subscribe to Oneindia Kannada

ಡರ್ಬನ್, ಏಪ್ರಿಲ್ 21: ಕ್ರಿಕೆಟ್ ಕ್ಷೇತ್ರದ ದುರಂತಗಳ ಪಟ್ಟಿಗೆ ಹೊಸದೊಂದು ಹೆಸರು ಸೇರ್ಪಡೆಯಾಗಿದೆ. ಕೇಪ್ ಟೌನ್ ನಲ್ಲಿ ಅಭ್ಯಾಸ ನಿರತರಾಗಿದ್ದ ಯುವ ಕ್ರಿಕೆಟರ್ ರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಪೂರ್ವ ಕೇಪ್ ಟೌನ್ ನಲ್ಲಿ ತನ್ನ ಅಕಾಡೆಮಿಯ ಇತರೆ ಸದಸ್ಯರೊಂದಿಗೆ ತರಬೇತಿ ನಿರತರಾಗಿದ್ದ ಲುಖನ್ಯಾ ಸಿಕಿ ಎಂಬ 22 ವರ್ಷ ವಯಸ್ಸಿನ ಆಟಗಾರ ಹಠಾತ್ ಆಗಿ ಎದೆ ಹಿಡಿದುಕೊಂಡು ಕುಸಿದು ಬಿದ್ದಿದ್ದಾರೆ. [ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ]

ತಕ್ಷಣವೇ ಫೋರ್ಟ್ ಹರೆ ಅಕಾಡೆಮಿಯವರು ಮೈದಾನದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಕೊಡಿಸುವ ಮೊದಲೇ ಮೃತಪಟ್ಟಿದ್ದಾರೆ. [ಕ್ರಿಕೆಟ್ ದುರಂತ: ಇಂಗ್ಲೆಂಡ್ ವಿಕೆಟ್ ಕೀಪರ್ ವೃತ್ತಿ ಅಂತ್ಯ]

South Africa cricketer dies of suspected heart failure while training

ದಕ್ಷಿಣ ಆಫ್ರಿಕಾದ ಟೆಸ್ಟ್ ವೇಗಿ ಫುನೆಕೊ ನಗಾಂ ಅವರು ನಡೆಸುವ ಅಕಾಡೆಮಿ ವಿದ್ಯಾರ್ಥಿಯಾಗಿದ್ದ ಲುಖನ್ಯಾಸಾವಿನ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. [ಎದೆಗೆ ಚೆಂಡು ಬಡಿದು ಯುವ ಕ್ರಿಕೆಟರ್ 'ದುರಂತ' ಸಾವು]


ಇಎಸ್ ಪಿಎನ್ ಕ್ರಿಕ್ ಇನ್ಫೋ.ಕಾಂ ಜತೆ ಮಾತನಾಡಿ, ಲುಖನ್ಯಾ ಅವರು ತನ್ನ ಸಹ ಆಟಗಾರರೊಂದಿಗೆ ಓಟದ ಅಭ್ಯಾಸದಲ್ಲಿದ್ದರು. 20 ಸುತ್ತಿನಲ್ಲಿ 17 ಸುತ್ತು ಓಡಿದ ಮೇಲೆ ಶರ್ಟ್ ಕಳಚಿ, ಮಂಡಿ ಮೇಲೆ ಕೈಯೂರಿ ನಿಂತರು. ನಂತರ ಕೆಮ್ಮುತ್ತಾ ಕುಸಿದವರು ಮೇಲಕ್ಕೆ ಏಳಲಿಲ್ಲ. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಪ್ರಾಣ ಕಳೆದುಕೊಂಡಿದ್ದರು.

ತ್ಸಿಕಿ ಅವರಿಗೆ ಖಾಯ, ಸೆಬೊ ಎಂಬ ಸೋದರರು ಹಾಗೂ ನೆಲಿಸ್ವಾ ಎಂಬ ಸೋದರಿ ಇದ್ದಾರೆ. 2015-16ರ ಸೀಸನ್ ನಲ್ಲಿ ಕೇಪ್ ಕೋಬ್ರಾಸ್ ತಂಡದ ಪರ ಲುಖ್ವಾನಾ ಆಡಿದ್ದರು. ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮುಖ್ಯಸ್ಥ ಹರೂನ್ ಲೊರ್ಗಾಟ್ ಸೇರಿದಂತೆ ಅನೇಕ ಅಧಿಕಾರಿಗಳು, ಕ್ರಿಕೆಟರ್ಸ್ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lukhanya Tsiki has collapsed and died of suspected heart failure while training with his academy side in the Eastern Cape town.
Please Wait while comments are loading...