ಮ್ಯಾಚ್ ಫಿಕ್ಸಿಂಗ್ ಹಗರಣ ದಕ್ಷಿಣ ಆಫ್ರಿಕಾದ 4 ಕ್ರಿಕೆಟರ್ ಅಮಾನತು

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಜೋಹಾನ್ಸ್ಬರ್ಗ್, ಅಗಸ್ಟ್ 09: 2015ರಲ್ಲಿ ನಡೆದ ರಾಮ್ ಸ್ಲಾಂ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ವೇಳೆ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದ ನಾಲ್ಕು ಮಂದಿ ಆಟಗಾರರ ಮೇಲೆ ಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್ ಎ) ನಿಷೇಧ ಹೇರಿದೆ.

ಮಾಜಿ ಟೆಸ್ಟ್‌ ವಿಕೆಟ್‌ ಕೀಪರ್ ತಮಿ ಸೊಲೆಕಿಲೆ, ಜೀನ್‌ ಸೈಮಸ್, ಎಥಿ ಭಲಾಟಿ ಮತ್ತು ಪುಮೆಲೆಲಾ ಮಟಶಿಕ್ವೆ ಅವರು ನಿಷೇಧಕ್ಕೊಳಗಾದ ಆಟಗಾರರಾಗಿದ್ದಾರೆ.

South Africa bans former Test player, 3 others for match-fixing

ಸೊಲೆಕಿಲೆ ಅವರ ಮೇಲೆ 12 ವರ್ಷ ನಿಷೇಧ ಹೇರಲಾಗಿದ್ದು, ಸೈಮಸ್ ಅವರನ್ನು ಏಳು ವರ್ಷಗಳ ಕಾಲ ಕ್ರಿಕೆಟ್‌ ಚಟುವಟಿಕೆಗಳಿಂದ ದೂರ ಇಡಲಾಗಿದೆ. ಭಲಾಟಿ ಮತ್ತು ಪುಮೆಲೆಲಾ ಅವರು 10 ವರ್ಷ ಕ್ರಿಕೆಟ್‌ ಆಡುವಂತಿಲ್ಲ.

2015ರ ರಾಮ್‌ಸ್ಲಾಮ್‌ ಕ್ರಿಕೆಟ್‌ ಟೂರ್ನಿಯಲ್ಲಿ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದ ಪೂರ್ಣ ತನಿಖೆ ನಡೆಸಿದ್ದು ಸೊಲೆಕಿಲೆ, ಸೈಮಸ್, ಎಥಿ ಭಲಾಟಿ ಮತ್ತು ಪುಮೆಲೆಲಾ ಅವರು ಇದರಲ್ಲಿ ಭಾಗಿಯಾಗಿದ್ದು ಸಾಬೀತಾಗಿದೆ. ಹೀಗಾಗಿ ನಾಲ್ವರ ಮೇಲೆ ನಿಷೇಧ ಹೇರಲಾಗಿದೆ ಎಂದು ಸಿಎಸ್ಎ ತಿಳಿಸಿದೆ.(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cricket South Africa (CSA) today (August 8) banned 4 players, including former international Thami Tsolekile, for match-fixing in the 2015 Ram Slam T20 tournament.
Please Wait while comments are loading...